NEWSನಮ್ಮಜಿಲ್ಲೆನಮ್ಮರಾಜ್ಯ

ಬಸ್‌ಗಳಿಗೆ ಪೂಜೆ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ: ಆದರೂ ಬಸ್‌ ಸಂಚಾರ ವಿರಳ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದು, ಇಂದಿನಿಂದ ರಾಜ್ಯದ ಹಲವೆಡೆ ಬಸ್​ ಸಂಚಾರ ಆರಂಭವಾಗುತ್ತಿದೆ.

ಲಾಕ್​ಡೌನ್ ಸಡಿಲಿಕೆಯ ಮೊದಲ ದಿನವೇ ಜನರು ಬಸ್​ಗಾಗಿ ಮುಗಿಬಿದ್ದ ಘಟನೆಗಳೂ ವರದಿಯಾಗಿವೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಎರಡು ಸಾವಿರ ಬಿಎಂಟಿಸಿ ಬಸ್​ಗಳನ್ನು ರಸ್ತೆಗಿಳಿಸುವುದಾಗಿ ಹೇಳಿಕೆ ಹೊರಬಿದ್ದಿತ್ತಾದರೂ ಸದ್ಯ ಬೆರಳೆಣಿಕೆಯಷ್ಟು ಬಸ್​ ಮಾತ್ರ ಸಂಚಾರ ಆರಂಭಿಸಿದ್ದು, ಬಿಎಂಟಿಸಿ ಇರಲಿದೆ ಎಂದು ನಂಬಿಕೊಂಡು ಬಂದ ಪ್ರಯಾಣಿಕರು ಪರದಾಡುವಂತಾಗಿದೆ.

ಸರಿಸುಮಾರು 2 ತಿಂಗಳ ನಂತರ ಮೆಟ್ರೋ ಸಂಚಾರವೂ ಶುರುವಾಗುತ್ತಿದ್ದು, ಮೆಟ್ರೋದಲ್ಲಿ ಸಂಚರಿಸುವುದಕ್ಕೂ ಒಂದಷ್ಟು ನಿಯಮಾವಳಿಗಳನ್ನು ಪಾಲಿಸಬೇಕಿದೆ. ಅವುಗಳಲ್ಲಿ ಪ್ರಮುಖವಾವಾಗಿ…

ನಮ್ಮ  ಮೆಟ್ರೋ ಸಂಚಾರ: ಸುಮಾರು 2 ತಿಂಗಳ ನಂತರ ಆರಂಭವಾಗುತ್ತಿರುವ ಮೆಟ್ರೋ ಇಂದಿನಿಂದ ಬೆಳಗ್ಗೆ 7ರಿಂದ 11ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5ನಿಮಿಷಕ್ಕೆ ಒಂದರಂತೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸಂಚಾರ ನಡೆಸಲಿದೆ. ಆದರೆ, ಸ್ಮಾರ್ಟ್​ಕಾರ್ಡ್​ ಇದ್ದವರಿಗೆ ಮಾತ್ರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ನಿಲ್ದಾಣಗಳಲ್ಲಿ ಸ್ಮಾರ್ಟ್​ಕಾರ್ಡ್ ರೀಚಾರ್ಜ್​ ಮಾಡಿಕೊಂಡು ಪ್ರಯಾಣಿಸಬಹುದಾಗಿದೆ. ಮೆಟ್ರೋ ನಿಲ್ದಾಣದಲ್ಲಿ ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯವಾಗಿರಲಿದ್ದು, ಹ್ಯಾಂಡ್​ ಸ್ಯಾನಿಟೈಸ್ ಮಾಡಿಕೊಳ್ಳಬೇಕಿದೆ. ಮಾಸ್ಕ್‌ ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಹಾಗೂ ಎಲ್ಲಾ ಸಂದರ್ಭದಲ್ಲೂ ದೈಹಿಕ ಅಂತರ ಪಾಲಿಸಲೇಬೇಕು. ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು ಅಥವಾ ನಿಂತು ಪ್ರಯಾಣ ಮಾಡಬೇಕಿದ್ದು, ವಾರಾಂತ್ಯದ ಕರ್ಫ್ಯೂ ನಿಮಿತ್ತ ಶನಿವಾರ, ಭಾನುವಾರ ಮೆಟ್ರೋ ಸಂಚಾರ ಇರೋದಿಲ್ಲ.

ಬಿಎಂಟಿಸಿ ಬಸ್ ಸಂಚಾರ: ಅನ್​ಲಾಕ್​ ಹಿನ್ನೆಲೆ ಇಂದಿನಿಂದ ಸುಮಾರು ಎರಡು ಸಾವಿರ ಬಸ್​ಗಳು ಬೆಂಗಳೂರು ನಗರದಲ್ಲಿ ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ, ಮುಂಜಾನೆಯಿಂದ ಇಲ್ಲಿಯ ತನಕ ಕೇವಲ 796 ಬಸ್​ಗಳು ಸಂಚಾರ ನಡೆಸುತ್ತಿದ್ದು, ಬಿಎಂಟಿಸಿ ಮಾತು ನಂಬಿಕೊಂಡು ಬಸ್​ ಹತ್ತಲು ಬಂದವರು ಪರದಾಡುತ್ತಿದ್ದಾರೆ.

ಮೆಜೆಸ್ಟಿಕ್​ ​ಗೆ ಬಸ್​ಗಳು ಬಾರದ ಹಿನ್ನೆಲೆಯಲ್ಲಿ ಜನರು ಬೇರೆ ದಾರಿಯಿಲ್ಲದೇ ಆಟೋ ಹಿಡಿದು ತಾವು ತಲುಪಬೇಕಾದ ಜಾಗದತ್ತ ಮುಖ ಮಾಡುತ್ತಿದ್ದಾರೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಥರ್ಮಲ್ ಸ್ಕ್ರೀನಿಂಗ್​ ಹಾಗೂ ಆಕ್ಸಿಜನ್​ ಟೆಸ್ಟ್ ಮಾಡಲಾಗುತ್ತಿದ್ದು, ಪರೀಕ್ಷೆಯ ನಂತರವಷ್ಟೇ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ನೀಡಲಾಗುತ್ತಿದೆ.

ಕೆಎಸ್​ಆರ್​ಟಿಸಿ ಬಸ್ ಸಂಚಾರ: ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಮಿಕ್ಕೆಲ್ಲಾ ಕಡೆಗಳಲ್ಲೂ ಕೆಎಸ್​ಆರ್​ಟಿಸಿ ಬಸ್​ ಸಂಚರಿಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ. ಅದರನ್ವಯ ತುಮಕೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಶಿವಮೊಗ್ಗ, ದಾವಣಗೆರೆ, ಕೊಪ್ಪಳ ಹೀಗೆ ಕೆಲವು ಜಿಲ್ಲೆಗಳಲ್ಲಿ ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ.

ಆದರೆ, ಚಿಕ್ಕಮಗಳೂರು, ನೆಲಮಂಗಲ ಸೇರಿದಂತೆ ಕೆಲವೆಡೆ ಪ್ರಯಾಣಿಕರು ಬಸ್​ ನಿಲ್ದಾಣಗಳಿಗೆ ಆಗಮಿಸಿದ್ದರೂ ಬಸ್​ ಬಾರದ ಹಿನ್ನೆಲೆ ಗೊಂದಲ ಉಂಟಾಗಿದೆ. ಕೆಲವು ಕಡೆಗಳಲ್ಲಿ ಜನ ಬಸ್​ಗಾಗಿ ಮುಗಿಬಿದ್ದು ದೈಹಿಕ ಅಂತರ, ಕೊರೊನಾ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿರುವ ಘಟನೆಯೂ ನಡೆದಿದೆ.

ಬಸ್​, ಚಾಲಕರು ಹಾಗೂ ನಿರ್ವಾಹಕರಿಗೆ ಕೊರೊನಾ ನೆಗೆಟಿವ್​ ರಿಪೋರ್ಟ್​ ತೋರಿಸಲು ಹೇಳಿ ಕರ್ತವ್ಯಕ್ಕೆ ಅವಕಾಶ ನೀಡಲಾಗುತ್ತಿದ್ದು, ಅನೇಕ ದಿನಗಳ ನಂತರ ಬಸ್​ ಆರಂಭವಾಗುತ್ತಿರುವುದರಿಂದ ಸಿಬ್ಬಂದಿ ಬಸ್​ಗೆ ಪೂಜೆ ಸಲ್ಲಿಸಿ, ಅಲಂಕಾರ ಮಾಡಿರುವ ದೃಶ್ಯಗಳೂ ಕಂಡುಬಂದಿವೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...