NEWSನಮ್ಮಜಿಲ್ಲೆನಮ್ಮರಾಜ್ಯ

ಗ್ರಾಪಂ ವಾಟರ್‌ಮನ್‌ ಹುದ್ದೆಗೆ ಲಕ್ಷ ಲಕ್ಷ ರೂ. ಲಂಚದ ಬೇಡಿಕೆ ಇಟ್ಟ ಪಿಡಿಒ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಹಾಗೂ ಕಾರ್ಯದರ್ಶಿ ಸಿ.ಎಚ್. ಶ್ರೀನಿವಾಸ್, ಉಚ್ವಂಗಿಪುರದ ಸದಸ್ಯ ಬಾಲರಾಜ್ ಎಂಬುವರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಕೇಳಿಬಂದಿದೆ.

ವಾಟರ್‌ಮನ್‌ (ನೀರಗಂಟೆ) ಹುದ್ದೆಗೆ ಅಂಜಿನಪ್ಪ ಎನ್ನುವವರ ಬಳಿ 1.60 ಲಕ್ಷ ರೂ. ನೀಡುವಂತೆ ಇವರು ಬೇಡಿಕೆಯಿಟ್ಟಿದ್ದಾರೆ. ಅದು ಆಡಿಯೋ ರೂಪದಲ್ಲಿ ದಾಖಲಾಗಿದ್ದು, ವಾಟರ್‌ಮನ್‌ ಹುದ್ದೆಗೆ ಲಕ್ಷ ಲಕ್ಷ ಲಂಚದ ಬೇಡಿಕೆಯ ಆಡಿಯೋ ಕೇಳಿ ಜನ ಹುಬ್ಬೇರಿಸಿದ್ದಾರೆ.

ಲಕ್ಷಾಂತರ ರೂಪಾಯಿ ನೀಡಿದರೆ ಅದೇಶ ಪತ್ರ ಕೊಡಿಸುವುದಾಗಿ ಪಿಡಿಒ ಹಾಗೂ ಗ್ರಾಪಂ ಸದಸ್ಯ ಹೇಳಿರುವುದು ಆಡಿಯೋದಲ್ಲಿದೆ. ಅದಕ್ಕೆ ಎರಡು ವರ್ಷಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ಈಗ ಲಕ್ಷಾಂತರ ರೂಪಾಯಿ ಹೇಗೆ ಜೋಡಿಸಲಿ. ಮನೆಯಲ್ಲಿ ಹೆಂಡತಿ ಮಕ್ಕಳು ಉಪವಾಸ ಇರ್ತಾರೆ. ಹಣ ಜೋಡಿಸಲು ಸಾಧ್ಯವಿಲ್ಲ ಎಂದು ಹುದ್ದೆಯ ಆಕಾಂಕ್ಷಿ ಅಂಜಿನಪ್ಪ ತನ್ನ ಅಳಲು ತೋಡಿಕೊಂಡಿದ್ದಾನೆ.

ನೀರಗಂಟಿ ಹುದ್ದೆಗೆ 8 ರಿಂದ 10 ಲಕ್ಷ ಕೊಟ್ಟು ಎಂಎ, ಎಂಇಡಿ ಓದಿದವರೇ ಬರೋಕೆ ರೆಡಿ ಇದ್ದಾರೆ ಎಂದು ರಾಜರೋಷವಾಗಿ ಆರೋಪಿಗಳು ಲಂಚದ ಬೇಡಿಕೆ ಮಂಡಿಸುತ್ತಾರೆ. ಈ ಲಂಚದ ಮೊತ್ತ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಕೊಡಬೇಕು. ನನಗೆ 20 ಸಾವಿರ ರೂ. ಅಷ್ಟೇ ಎಂದೂ ಪಿಡಿಒ ಹಾಗೂ ಸದಸ್ಯ ಲಂಚದ ವಿವರಣೆ ಕೊಟ್ಟಿದ್ದಾರೆ. ನೀರಗಂಟಿ ಹುದ್ದೆಗೆ ಹೀಗೆ ಲಂಚದ ಡೀಲಿಂಗ್ ರಾಜರೋಷವಾಗಿ ನಡೆದಿರುವ ಪಿಡಿಒ ಡೀಲಿಂಗ್ ಅಡಿಯೋ ಈಗ ಜಿಲ್ಲೆಯಲ್ಲಿ ವೈರಲ್ ಆಗುತ್ತಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...