ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ 420, ಮೆಗಾ ಸಿಟಿ ಕಳ್ಳ, ಅವರ ರಾಜೀನಾಮೆ ಪಡೆದು, ವಜಾ ಮಾಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಯಾದರೆ ಬೆಂಕಿ ಹೊತ್ತಿ ಉರಿಯುತ್ತೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ನಾನು ರಾಜಕಾರಣ ಮಾಡಲ್ಲ ಎಂದರು.
ನಮ್ಮ ಪಕ್ಷದಲ್ಲಿ ರಾಜ್ಯದ ನಾಯಕರು, ಅಧ್ಯಕ್ಷರು ಆ ರೀತಿ ಇಲ್ಲ. ಕೊರೊನಾ ಸಂದರ್ಭದಲ್ಲಿ ಜನ ಸಾಯುತ್ತಿದ್ದಾರೆ. ಈ ಸಂದರ್ಭದಕಲ್ಲಿ ರಾಜಕೀಯ ಮಾತನಾಡಲು ನಾಚಿಕೆಯಾಗುತ್ತದೆ ಎಂದರು.
ಯೋಗೇಶ್ವರ್ ಕಾಂಗ್ರೆಸ್‍ನಿಂದ ಬಂದು ಅರಣ್ಯ ಸಚಿವರಾದರು, ಲೂಟಿ ಹೊಡೆದರು. ಅಲ್ಲದೆ ಸದಾನಂದಗೌಡರಿಗೂ ಮೋಸ ಮಾಡಿದರು. ಅವನೊಬ್ಬ ಪಕ್ಷಾಂತರಿ ಎಂದು ಕಿಡಿಕಾರಿದ ಅವರು, ಮುಖ್ಯಮಂತ್ರಿಗಳು ಅಂದೇ ಕಠಿಣ ನಿರ್ಧಾರ ತೆಗೆದುಕೊಂಡು ಅವನನ್ನು ಹೊರಗೆ ಹಾಕಬಹುದಿತ್ತು. ಈ ರೀತಿ ನಾಟಕ ಆಡುತ್ತಿದ್ದಾರೆ ಎಂದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾಡಬಾರದು. ನನ್ನ ಕಣ್ಣೆದುರಿಗೇ ಹಲವು ಜನರು ಸಾವನ್ನಪ್ಪುತ್ತಿದ್ದಾರೆ. ಕಣ್ಣಲ್ಲಿ ನೀರು ಬರುತ್ತಿದೆ, ಕ್ಷೇತ್ರದ ಜನತೆಗೆ ವೆಂಟಿಲೇಟರ್, ಆಕ್ಸಿನ್ ಕೊರತೆಯನ್ನು ನೀಗಿಸುತ್ತಿದ್ದೇನೆ. ನಾನು ರಾತ್ರಿ 1 ಗಂಟೆಗೆ ಮಲಗಿ ಈಗ ತಿಂಡಿ ತಿಂದು ಮತ್ತೆ ಕೆಲಸಕ್ಕೆ ತೆರಳುತ್ತಿದ್ದೇನೆ ಎಂದರು.