ವಾಷಿಂಗ್ಟನ್: ವಿಶ್ವಮಹಾಮಾರಿ ಕೊರೊನಾ ಸೋಂಕು ಲಸಿಕೆಯೇ ಇಲ್ಲದೆಯೂ ನಾಶವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೇಳೆ ರಿಪಬ್ಲಿಕನ್ ಶಾಸಕರೊಂದಿಗೆ ಮಾತನಾಡುತ್ತಾ ಕೊರೊನಾ ವೈರಸ್ ನಾಶವಾಗು ಕಾಲ ಸನ್ನಿಹಿತವಾಗುತ್ತಿದೆ. ಈ ರೋಗಕ್ಕೆ ಲಸಿಕೆ ಕಂಡು ಹಿಡಿಯುವ ಮುನ್ನವೇ ಇದು ವಿಶ್ವದಿಂದಲೇ ದೂರಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಇದೀಗ ತೀವ್ರ ವಾದ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಈಗಾಗಲೇ ವೈರಸ್ ಹರಡುವಿಕೆ ತಗ್ಗುತ್ತಿದೆ. ಮುಂಬರುವ ದಿನದಲ್ಲಿ ಇನ್ನಷ್ಟು ಕಡಿಮೆಯಾಗಲಿದೆ. ಈ ಹಿಂದೆ ಸಹ ಅನೇಕ ವೈರಸ್‌ಗಳು ಬಂದಿದ್ದವು. ಅವುಗಳಿಗೆ ಲಸಿಕೆ ಕಂಡು ಹಿಡಿಯುವ ಮುನ್ನ ಅವು ಇಲ್ಲವಾಗಿವ. ಈಗ ಬಂದಿರುವ ಕೋವಿಡ್-19 ಸಹ ಕೆಲ ದಿನಗಳ ನಂತರ ಇಲ್ಲವಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಇನ್ನು ಜಾಗತಿಕ ಮಹಾಮಾರಿಯಾಗಿರುವ ಈ ಸೋಂಕು ತೊಲಗಿಸಲು ಪಣತೊಟ್ಟಿರುವ ಅಮೆರಿಕ ಹಾಗೂ ಚೀನಾ ರಾಷ್ಟ್ರಗಳು ಲಸಿಕೆ ಕಂಡುಹಿಡಿಯಲು ಸ್ಪರ್ಧೆಗಿಳಿದಂತೆ ಕಾರ್ಯನಿರ್ವಹಿಸುತ್ತಿವೆ. ಆದರೂ ಕೊರೊನಾಗೆ ಅಮೆರಿಕದಲ್ಲಿ ಸುಮಾರು 95 ಸಾವಿರ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail