ಇಂದು ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ವಿಷ್ಣುವರ್ಧನ್ ಅವರ ಜನ್ಮದಿನ. ವಿಷ್ಣುವರ್ಧನ್ ಅಂದೊಡನೆ ಮೊದಲಿಗೆ ನೆನಪಿಗೆ ಬರುವುದು ಅವರ ಎಡಗೈಅಭಿನಯ ಹಾಗೂ ಕೈ ಬಳೆ. ಇದು ನಾವು ಹುಡುಗರಾಗಿದ್ದಾಗ ಧರಿಸುವಂತಹ ಒಂದು ಟ್ರೆಂಡ್ ಆಗಿತ್ತು !
ಇವರ ಅಭಿನಯದ “ಬಂಧನ “ಚಲನಚಿತ್ರದ ಯಶಸ್ಸು ಕುತ್ತಿಗೆಯಲ್ಲಿ ಕರಿದಾರ ಲವ್ ಸಿಂಬಲ್ ಹೃದಯದ ಡಾಲರ್, ಕಟ್ಟಿಕೊಳ್ಳುವುದು ಆಗ ಯುವಜನರಲ್ಲಿ ಒಂದು ಟ್ರೆಂಡ್ ಆಗಿರುತ್ತಿತ್ತು! ಚಿತ್ರ ವಿಮರ್ಶೆಯ ಕೃತಿಯೊಂದರ ಮುನ್ನುಡಿಯಲ್ಲಿ ಬಿ.ವಿ.ವೈಕುಂಠರಾಜು ಅವರು ಬರೆದಿರುವ ಪ್ರಕಾರ ಶಾಲೆಯ ದಿನಗಳಲ್ಲಿ ಹೆಣ್ಣು ಪಾರ್ಟ್ ಮಾಡುತ್ತಿದ್ದ ಸಂಪತ್ ಕುಮಾರ್ (ವಿಷ್ಣುವರ್ಧನ್ ನಿಜನಾಮಧೇಯ ) “ಪ್ರಜಾವಾಣಿ”ಯ ವೈಯೆನ್ಕೆ ಗೆ ಪರಿಚಯವಾದದ್ದು ಕಾನಕಾನಹಳ್ಳಿ ಗೋಪಿಯ ಮೂಲಕ.
ವೈಯನ್ಕೆ ಮೂಲಕ ಗಿರೀಶ್ ಕಾರ್ನಾಡರಿಗೆ ಪರಿಚಿತರಾಗಿ ಅವರ ನಿರ್ದೇಶನದ “ವಂಶವೃಕ್ಷ,”ಚಲನ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು ಎಂದಿದ್ದಾರೆ . “ವಂಶವೃಕ್ಷ” “ನಾಗರಹಾವು “ಚಲನಚಿತ್ರಗಳು ಇವರಿಗೆ ಪ್ರಾರಂಭಿಕವಾಗಿ ಒಂದು ಅಸ್ಮಿತೆಯನ್ನು ತಂದುಕೊಟ್ಟಿದ್ದು ನಿಜ. ಆದರೆ ಏರುಮುಖವಾಗಿ ಇವರ ಜನಪ್ರಿಯತೆ ಹೆಚ್ಚಾಗಿದ್ದು “ಊರಿಗೆ ಉಪಕಾರಿ ” ಚಲನಚಿತ್ರದ ಮೂಲಕ. “ಒಂದೇ ಗುರಿ” ಇವರ ಅದ್ಭುತವಾದ ಒಂದು ಸಾಹಸಮಯ ಚಲನಚಿತ್ರ. ಇದು ಪೂರ್ಣಪ್ರಮಾಣದ ಒಬ್ಬ ಆಕ್ಷನ್ ನಾಯಕನನ್ನಾಗಿ ವಿಷ್ಣುವರ್ಧನ ಅವರನ್ನು ರೂಪುಗೊಳಿಸಿದ್ದು, ಸಾಹಸಪ್ರಧಾನ ದ ಅನೇಕ ಚಿತ್ರಗಳು ಭೂಮಿಕೆ ಆಗಲು ಶುರುವಾಯಿತು.
“ಸುಪ್ರಭಾತ”, “ಮಲಯಮಾರುತ”, ಮೊದಲಾದ ಚಿತ್ರಗಳಲ್ಲಿ ಅವರ ಅಭಿನಯ ಸ್ಮರಣೀಯ ಗೊಳ್ಳುವ ಚಿತ್ರಗಳಲ್ಲಿ ಪ್ರಮುಖವು. ಕನ್ನಡ ಚಿತ್ರರಂಗದಲ್ಲಿ ಪೋಷಕ ನಟರಾಗಿ, ಖಳನಟರಾಗಿ ಬೆಳೆದವ ರಿದ್ದಾರೆ. ಆದರೆ ಪುಟ್ಟಣ್ಣ ಕಣಗಾಲ್ ಗರಡಿಯಿಂದ “ನಾಗರಹಾವು” ಚಿತ್ರದ ಮೂಲಕ ಹೊರಹೊಮ್ಮಿ ಅವರ ಜೀವಿತ ಕಾಲದ ಬಹುತೇಕ “ಮಾಸ್ಟರ್” “ಆಪ್ತರಕ್ಷಕ ” “ಚಿತ್ರಗಳಲ್ಲಿ ನಾಯಕನಟರಾಗಿ ಇದ್ದರು ಎಂಬುದು ಅವರ ತಾರಾ ಜೀವನದ ವಿಶೇಷ, ಮತ್ತ್ಯಾರಿಗೂ ಸಾಧ್ಯವಾಗದ ಒಂದು ಸಾಧನೆ.
ನಮ್ಮಲ್ಲಿ ಅನೇಕ ಅಣುಕು ಕಲಾವಿದರು ಎಲ್ಲ ಕಲಾವಿದರ ಧ್ವನಿಯನ್ನು ಅನುಕರಿಸುತ್ತಾರೆ !. ಆದರೆ ವಿಷ್ಣುವರ್ಧನ್ ಧ್ವನಿಯನ್ನು ಅನುಕರಿಸುವುದು ಸುಲಭ ಅಲ್ಲ. ಇನ್ನು ಹಾಡುಗಾರಿಕೆಯ ವಿಷಯಕ್ಕೆ ಬಂದರೆ ವಿಷ್ಣುವರ್ಧನ್ ಅವರದ್ದು ಅವರದ್ದೆ ಜನಪ್ರಿಯ ಶೈಲಿ…ಹಿಂದಿ, ಮಲಯಾಳಂ, ತಮಿಳು, ತೆಲುಗು, ಚಿತ್ರಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. ತಮ್ಮ ಜೊತೆಯಲ್ಲಿ ಅಭಿನಯಿಸುತ್ತಿದ್ದ ಕಲಾವಿದರಿಗೆ ಪಾತ್ರಗಳನ್ನು ಕೊಡಿಸುವ ಮುಖೇನ, ಸಂಭಾವನೆ ಕುರಿತ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಸುವ ಮೂಲಕ ಹೃದಯವಂತಿಕೆ ಮೆರೆಯುತ್ತಿದ್ದರು.
ನಾಡು, ನುಡಿ, ಕುರಿತಾದ ಅವರ ಕಾಳಜಿ ತೋರಿಕೆ ಯದಾಗಿರಲಿಲ್ಲ… ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ, ಕರ್ನಾಟಕದ ಜನತೆ “ಚಿನ್ನದಂತ ಮಗ” “ಸಾಮ್ರಾಟ್” ವಿಷ್ಣುವರ್ಧನನನ್ನು ಬಲುಬೇಗ ಕಳೆದು ಕೊಂಡು ನೂರೊಂದು ನೆನಪಿನಲ್ಲಿ ಉಳಿಸಿಕೊಂಡಿದೆ. ಆರ್ ವೆಂಕಟ ರಾಜು, ಬೆಂಗಳೂರು
ವಿಷ್ಣುವರ್ಧನ್ ಅವರನ್ನು ಸ್ಯಾಂಡಲ್‌ವುಡ್ ನಟ ನಟಿಯರು ಮತ್ತು ಅಭಿಮಾನಿಗಳು ನೆನೆದು ಟ್ವೀಟ್ ಮೂಲಕ ಜನ್ಮದಿನದ ಶುಭಾಯಗಳನ್ನು ಹಂಚಿಕೊಂಡಿದ್ದಾರೆ.
ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ. Happy 18th to all his Fans&Followers.#VishnuSirLivesForever pic.twitter.com/U4rxwGzdai
— Kichcha Sudeepa (@KicchaSudeep) September 17, 2020
ಡಾ.ವಿಷ್ಣು ದಾದಾ ಅವರಿಗೆ 70ನೇ ಹುಟ್ಟು ಹಬ್ಬದ ಶುಭಾಶಯಗಳು ????❤
Happiest Birthday to Our Legend Dr.#Vishnuvardhan Sir…#VishnuSirLivesForever #VishnuDada #Vishnu #VishnuSir#DrVishnuvardhan70thBirthday@DrVssOfficial pic.twitter.com/IGroy4Kd02— Puneeth Rajkumar Online® (@PowerStarPunith) September 18, 2020