NEWSನಮ್ಮರಾಜ್ಯರಾಜಕೀಯ

ಮಾಜಿ ಸಿಎಂ ಎಚ್‌ಡಿಕೆಯನ್ನೂ ಇಂದ್ರಜಿತ್‌ನಂತೆ ವಿಚಾರಣೆಗೊಳಪಡಿಸಿ: ಪ್ರಮೋದ್ ಮುತಾಲಿಕ್

ವಿಜಯಪಥ ಸಮಗ್ರ ಸುದ್ದಿ

ದಾವಣಗೆರೆ: ಡ್ರಗ್ಸ್ ಹಣದಿಂದಲೇ ನಮ್ಮ ಮೈತ್ರಿ ಸರ್ಕಾರ ಕೆಡವಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡುತ್ತಾರೆ. ಹಾಗಾದ್ರೆ ಇಂದ್ರಜಿತ್ ಲಂಕೇಶ್ ರೀತಿ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಚ್‌ಡಿಕೆ ಡ್ರಗ್ಸ್ ಹಣದಿಂದಲೇ ಮೈತ್ರಿ ಸರ್ಕಾರ ಕೆಡವಿದ್ದಾರೆ ಎಂದು ಹೇಳುತ್ತಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಮಗ ರಾಕೇಶ್ ಸಿದ್ದರಾಮಯ್ಯ ಕೂಡ ಸತ್ತಿದ್ದು ಡ್ರಗ್ಸ್ ನಿಂದಲೇ ಎನ್ನುವುದು ಗೊತ್ತಿದೆ. ಹೀಗಿದ್ದರು ಸಿದ್ದರಾಮಯ್ಯನವರಿಗೆ ಯುವ ಜನತೆಯೆ ಬಗ್ಗೆ ಕಾಳಜಿ ಇಲ್ಲ. ಇದ್ದಿದ್ದರೆ ಈ ರೀತಿ ಮಾಡ್ತಾ ಇರ್ಲಿಲ್ಲ ಎಂದರು.

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ ಸೇರಿ ಬಹುತೇಕ ಎಲ್ಲಾ ರಂಗದಲ್ಲೂ ಡ್ರಗ್ಸ್ ಹೆಸರು ಕೇಳಿಬರುತ್ತಿದೆ. ಹೀಗಾಗಿ ಇದೊಂದು ಡ್ರಗ್ಸ್ ಜಿಹಾದ್ ಎಂದೇ ಹೇಳಬಹುದು. ಮುಸ್ಲಿಮರಿಂದ ಬಹು ದೊಡ್ಡ ದಂಧೆ ನಡೆಯುತ್ತದೆ. ಯುವ ಜನತೆಯನ್ನು ದುರ್ಬಲ ಮಾಡಬೇಕು ಎನ್ನುವುದು ಅವರ ಉದ್ದೇಶ. ಪೊಲೀಸರಿಗೆ ಹಾಗೂ ಡ್ರಗ್ಸ್ ಮಾಫಿಯಾದವರಿಗೆ ಲಿಂಕ್ ಇದೆ. ಎಲ್ಲೆಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಆದರೆ ರಾಜಕೀಯ ಶಕ್ತಿಗಳು ಪೊಲೀಸರ ಕೈ ಕಟ್ಟಿಹಾಕುತ್ತಿವೆ ಎಂದು ರಾಜಕಾರಣಿಗಳ ವಿರುದ್ಧ ಆರೋಪ ಮಾಡಿದರು.

ಕರ್ನಾಟಕ ಪೊಲೀಸ್ ಇಲಾಖೆಯ ಬೇಹುಗಾರಿಕೆ ವಿಫಲವಾಗಿದೆ. ಇದನ್ನು ತಡೆಯಲು ಎಲ್ಲಾ ಪಕ್ಷದವರು ವಿಫಲವಾಗಿದ್ದಾರೆ. 2009 ರಲ್ಲಿ ಪಬ್ ಗಲಾಟೆಯಾದಾಗ ಇದನ್ನು ತಡೆಗಟ್ಟಬಹುದಿತ್ತು. ನಾನು ಆಗಲೇ ಹೇಳಿದ್ದೆ ಪಬ್ ಗಳಲ್ಲಿ ಡ್ರಗ್ಸ್ ನಡೆಯುತ್ತದೆ ಅಂತ. ಆದರೆ ನನ್ನನ್ನು ಜೈಲಿಗೆ ಹಾಕಿದ್ರು. ಹ್ಯಾರಿಸ್ ಮಗ ನಲಪಾಡ್ ಗಲಾಟೆಯಾಯ್ತು. ಆಗ ಶೋಭಾ ಕರಂದ್ಲಾಜೆ ಹೇಳಿದ್ರು ಡ್ರಗ್ಸ್ ವಿಚಾರದಲ್ಲಿ ಗಲಾಟೆಯಾಗಿದೆ ಎಂದು. ಈಗ ನಿಮ್ಮದೇ ಸರ್ಕಾರವಿದೆ ಈಗ ಏನ್ ಮಾಡ್ತಾರೆ ನೋಡೋಣ ಎಂದ ಅವರು, ಡ್ರಗ್ಸ್‌ ದಂಧೆಗೆ ಕಡಿವಾಣ ಹಾಕಲು ಈಗಿನ ಸರ್ಕಾರ ಕಠೀಣ ಕ್ರಮ ಕೈಗೊಳ್ಳಬೇಕು. ಪೊಲೀಸರನ್ನು ಕಟ್ಟಿಹಾಕುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ