ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ಅನ್ನದಾತರು ನಡೆಸುತ್ತಿರುವ ಹೋರಾಟದಂತೆ ರಾಜ್ಯದಲ್ಲೂ ಪ್ರತಿಭಟನೆಗೆ ರೈತರು ಇಂದಿನಿಂದ ಸಜ್ಜಾಗಿದ್ದು, ಶನಿವಾರ ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳು ಸೇರಿದಂತೆ ಎಲ್ಲ ಹೆದ್ದಾರಿಗಳನ್ನು ಬಂದ್ ಮಾಡಿ ತಮ್ಮ ಆಕ್ರೋಶ ಹೊರಹಾಕಲಿದ್ದಾರೆ.
ಕೇಂದ್ರದ ನಡೆ ವಿರುದ್ಧ ರಾಜ್ಯದ ಅನ್ನದಾತರು ಸಿಡಿದೆದ್ದಿದ್ದಿದ್ದು, ದೆಹಲಿಯ ಗಡಿ ಭಾಗದಲ್ಲಿ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ತೀವ್ರ ಆಕ್ರೋಶಗೊಂಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಹೆದ್ದಾರಿಗಳನ್ನು ತಡೆಯುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ವಿವಿಧ ರೈತಪರ ಸಂಘಟನೆಗಳು ಮುಂದಾಗಿವೆ.
ಈ ನಡುವೆ ರಸ್ತೆ ತಡೆ ಮಾಡದಂತೆ ಪೊಲೀಸರು ಬಂದೋಬಸ್ತ್ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅದಾವುದನ್ನು ಲೆಕ್ಕಿಸದೆ ಅನ್ನದಾತ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾನೆ.
ಮಧ್ಯಾಹ್ನ 12 ರಿಂದ ಮೂರು ಗಂಟೆಗಳು ರಾಜ್ಯದಲ್ಲಿ ಇಂದು ಹೆದ್ದಾರಿ ತಡೆಯಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿರುವುದಾಗಿ ಈಗಾಗಲೇ ರೈತ ಪ್ರಮುಖರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ನಡುವೆ ಹೆದ್ದಾರಿ ತಡೆಯುವುದಕ್ಕೆ ಅವಕಾಶ ನೀಡದಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್‌ಪಂತ್ ತಮ್ಮ ವ್ಯಾಪ್ತಿಯ ಎಲ್ಲ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಸಜ್ಜಾದ ಪೊಲೀಸ್ ಪಡೆ: ಬೆಂಗಳೂರು ಹೊರ ವಲಯದಲ್ಲಿ ರೈತರು ಪ್ರತಿಭನಡ ಮಾಡುಗವ ಮೂಲಕ ಹೆದ್ದಾರಿ ಬಂದ್ ಮಾಡುವ ಮಾಹಿತಿ ತಿಳಿದ ಪೊಲೀಸ್ ಆಯುಕ್ತರು ಈಗಾಗಲೇ ಅಲ್ಲಲ್ಲಿ ಪೊಲೀಸದದ ಪಡೆಯನ್ನು ಹೆಚ್ಚಾಗಿ ನಿಯೋಸಿದ್ದಾರೆ. ಇನ್ನು ಸರ್ಕಾರ ಕೂಡ ಪ್ರತಿಭಟನೆಗೆ ಅವಕಾಶ ಕೊಡಬೇಡಿ ಎಂದು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.
ಹೀಗಾಗಿ ರೈತರು ರಸ್ತೆ ತಡೆದಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆರವುಗೊಳಿಸಬೇಕು. ವಶಕ್ಕೆ ಪಡೆದವರನ್ನು ಪ್ರತಿಭಟನಾ ಸ್ಥಳದಿಂದ ಶಿಫ್ಟ್ ಮಾಡಲು ಸಾರಿಗೆ ಬಸ್ ಗಳನ್ನು ಬಳಸಬೇಕು. ಜತೆಗೆ
ಪರಿಸ್ಥಿತಿ ನಿಭಾಯಿಸಲು ಮೈಸೂರು, ತುಮಕೂರು, ದೇವನಹಳ್ಳಿ, ಕೆ.ಆರ್. ಪುರಂ ರಸ್ತೆಯಲ್ಲಿ ಡಿಸಿಪಿಗಳು ಖುದ್ದು ಹಾಜರಿರಬೇಕು. ರೈತ ಸಂಘಟನೆಗಳು ರಸ್ತೆಗೆ ಇಳಿಯದಂತೆ ಅವರ ಮನವೊಲಿಸಬೇಕು. ಮಾತಿಗೆ ಬಗ್ಗದೆ ರಸ್ತೆಯಲ್ಲಿ ಕುಳಿತರೆ. ಸಂದರ್ಭಕ್ಕೆ ತಕ್ಕ ತೀರ್ಮಾನ ತೆಗೆದುಕೊಳ್ಳಬೇಕು. ಹೆಚ್ಚಿನ ಸಮಯ ರಸ್ತೆ ತಡೆಯದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಕೂಡ ಎಲ್ಲ ಜಿಲ್ಲೆಗಳಲ್ಲೂ ಕ್ರಮ ವಹಿಸುವಂತೆ ಎಲ್ಲಾ ಜಿಲ್ಲಾ ಎಸ್‍ಪಿ ಮತ್ತು ಐಜಿಪಿಗಳಿಗೆ ಸೂಚನೆ ನೀಡಿದ್ದಾರೆ. ಡಿಎಆರ್ ಸಿಬ್ಬಂದಿಯನ್ನು ಪ್ರತಿಭಟನಾ ಸ್ಥಳದಲ್ಲಿ ನಿಯೋಜಿಸಿರಬೇಕು. ಜಿಲ್ಲಾ ಕೇಂದ್ರಗಳಲ್ಲಿ ಎಸ್ ಪಿ ಖುದ್ದು ಹಾಜರಿರಬೇಕು. ರಸ್ತೆ ತಡೆಗೆ ಅವಕಾಶ ಮಾಡಿಕೊಡಬಾರದು, ಪ್ರತಿಭಟನೆ ಆರಂಭಿಸಿದರೆ ವಾಹನ ಸವಾರರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.