ಬೆಂಗಳೂರು: ರಾಜ್ಯದ ಹಲವೆಡೆ ಪದೇಪದೆ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಭಾಯಿಸಲು ಸಲಹೆ ನೀಡಿ, ಐಫೋನ್ ಗೆಲ್ಲಿ ಎಂಬ ನಿನೂತನ ಅಭಿಯಾನವನ್ನು ಯೂತ್ ಕಾಂಗ್ರೆಸ್ ಆರಂಭಿಸಿದೆ.
ಹೌದು! ಭಾನುವಾರದಿಂದ ಯುವಕರ ತಂಡವೊಂದು ಲೆಟ್ಸ್ ಟೇಕ್ ಚಾರ್ಜ್ ಎಂಬ 7 ದಿನಗಳ ಶಿಬಿರ ಆಯೋಜಿಸಿದ್ದು, ಬೆಂಗಳೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಲಪಾಡ್ ಅಧ್ಯಕ್ಷತೆ ಈ ಶಿಬಿರ ನಡೆಯುತ್ತಿದೆ. ಪ್ರವಾಹ ಪೀಡಿತರಿಗೆ ಈ ಮೂಲಕ ನೆರವು ನೀಡಲು ಸಲಹೆ ಮತ್ತು ಐಡಿಯಾಗಳನ್ನು ಯುವಕರಿಂದ ಕೇಳಿದ್ದಾರೆ.
ಮೊದಲ ದಿನದಲ್ಲೇ ಈ ಅಭಿಯಾನಕ್ಕೆ ಪ್ರವೇಶ ಪಡೆಯಲು 10 ಸಾವಿರ ಅರ್ಜಿ ಬಂದಿವೆ. ಈ ಸರಣಿಯ ಮೊದಲ ಭಾಗವು ಕರ್ನಾಟಕದ, ವಿಶೇಷವಾಗಿ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಉತ್ತಮ ಸಲಹೆ ನೀಡಿದ ವ್ಯಕ್ತಿಗೆ ಬಹುಮಾನ ಕೂಡ ನೀಡಲಾಗುವುದು ಎಂದು ಘೋಷಿಷಿದೆ.
ಈ ಸ್ಪರ್ಧೆಯು ಅದರ ಗಂಭೀರತೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಾಲ್ಕು ಮೊದಲ ಉತ್ತಮ ಸಲಹೆ ನೀಡಿದವರಿಗೆ ಐಫೋನ್ 12, ಸ್ಯಾಮಸಂಗ್ ಗ್ಯಾಲಕ್ಸಿ ಎ51, ಮತ್ತು ಸ್ಯಾಮ್ ಸಂಗ್ ಗ್ಸಾಲಕ್ಸಿ ಎ 21 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎ ನೀಡಲಾಗುವುದು ಎಂದು ನಲಪಾಡ್ ತಿಳಿಸಿದ್ದಾರೆ.
ಜನರು ನೀಡುವ ಎಲ್ಲಾ ಸಲಹೆಗಳನ್ನು ತಜ್ಞರ ಸಮಿತಿಯು ಪರಿಶೀಲಿಸುತ್ತದೆ, ಅವರು ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅವರ ಪ್ರಾಯೋಗಿಕವಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಮೊದಲ ದಿನದ ಕೆಲವು ಸಲಹೆಗಳಲ್ಲಿ ಮೂಲಸೌಕರ್ಯ ಬದಲಾವಣೆಗಳು ಮತ್ತು ಜನರ ಸಮಸ್ಯೆಗಳನ್ನು ಪರಿಹರಿಸಬಹುದಾದ ನಿಯಮ ಬದಲಾವಣೆಗಳು ಸೇರಿವೆ. ಅಭಿಯಾನದ ಬಗ್ಗೆ ಮಾತನಾಡಿ, ಕರ್ನಾಟಕದಲ್ಲಿ 18-35 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ, ಅಭಿಯಾನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವಾಟ್ಸ್ ಆಪ್ ನಂ. 9999835988ಕ್ಕೆ ಮಾಹಿತಿ ಕಳುಹಿಸಬಹುದು.