ಧಾರವಾಡ: ರಾಜ್ಯದಲ್ಲಿ ಸರ್ಕಾರ ಇದೆ ಅಂತಾ ಯಾರಾದ್ರು ನಂಬ್ತಿರಾ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಮಳೆ ರೌದ್ರವತಾರಕ್ಕೆ ನಲುಗಿರುವ ಬೆಳಗಾವಿ, ಚಿಕ್ಕೋಡಿ ಎಲ್ಲಾ ಹಳ್ಳ ಹಿಡಿದಿವೆ, ನೀವೇನು ಮಾತಾಡ್ತಿರೊ ಆ ಪ್ರಕಾರ ನಡಿದುಕೊಳ್ಳಬೇಕು ಎಂದು ಧಾರವಾಡದಲ್ಲಿ ಸರ್ಕಾರ ನಡೆಸುತ್ತಿರುವ ಸಿಎಂ ಸಚಿವರು ಸೇರಿ ಅಧಿಕಾರಿಗಳ ವಿರುದ್ಧ ಧಾರವಾಡದಲ್ಲಿ ಆಕ್ರೋಶ ಭರಿತ ಮಾತುಗಳನ್ನಾಡಿರು.
ರಾಜ್ಯದಲ್ಲಿ ಎಲ್ಲಿದೆ ಸರ್ಕಾರ ಹಿಂದೆ ಕೂಡಾ ಈ ಸರ್ಕಾರ ಇದ್ದಾಗ ಗಲಾಟೆ ನಡೆದಿವೆ, ಈಗ ಮತ್ತೇ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೊಡುತಿದ್ದಾರೆ. ಕಳೆದ ವರ್ಷ ಬಿದ್ದಮಳೆಯಿಂದ ನೆಲಸಮಗೊಂಡ ಒಂದೇಒಂದು ಮನೆಯನ್ನು ಕಟ್ಟಿಲ್ಲ, ಈ ಬಗ್ಗೆ ಬರುವ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಸಿಎಂ ಇದ್ದವರು ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಕೆಲಸ ಆಗದೇ ಇದ್ದಲ್ಲಿ ಕ್ರಮಕೈಗೊಳ್ಳಬೇಕು. ಆದರೆ ಇದೊಂದು ರೀತಿ ಡ್ರಾಮಾ ಕಂಪನಿಯಾಗಿದೆ ಎಂದು ವ್ಯಂಗ್ಯವಾಡಿದರು.
ಇಲಾಖೆ ಸ್ಥಳಾಂತರ ವಿಚಾರದಲ್ಲಿ ಕ್ಯಾಬಿನೆಟ್ ನಿರ್ಣಯ ಆಗಬೇಕು. ವಿರೋಧ ಪಕ್ಷದಲ್ಲಿ ಇದ್ದಾಗ ಎಲ್ಲ ಮಾತಾಡ್ತೇವೆ, ಅಧಿಕಾರಕ್ಕೆ ಬಂದ ಮೇಲೆ ಅದನ್ನೇ ವಿರೋಧ ಮಾಡುತ್ತೇವೆ. ಹಿರಿಯ ಅಧಕಾರಿಯೊಬ್ಬರು ಸರ್ಕಾರಕ್ಕೆ ಇಲಾಖೆ ಸ್ಥಳಾಂತರ ಮಾಡಬಾರದು ಎಂದು ಸಲಹೆ ನೀಡಿದ್ದಾರೆ, ಸಿಎಂ ಸ್ಥಳಾಂತರ ಅಂತಾರೆ, ಯಾರನ್ನ ನಂಬಬೇಕು ನಾವು ಎಂದು ಪ್ರಶ್ನೆ ಮಾಡಿದರು.
ಇನ್ನು ಸಿದ್ದರಾಮಯ್ಯ ಮೈಸೂರಿನವರು, ಕುಮಾರಸ್ವಾಮಿ ಹಾಸನದವರು, ಅವರೆಲ್ಲ ಅಭಿವೃದ್ಧಿ ಮಾಡಿಕೊಳ್ತಾರೆ. ನಮ್ಮ ಕಡೆ ಆ ರೀತಿ ಇಲ್ಲ, ನಮ್ಮ ವೈಯಕ್ತಿಕವಾಗಿ ಇರ್ತೆವೆ ಎಂದ ಹೊರಟ್ಟಿ, ಹಳೆ ಮೈಸೂರು ಭಾಗದಲ್ಲಿ ಎಲ್ಲರೂ ಒಂದಾಗ್ತಾರೆ, ನಮ್ಮಲ್ಲಿ ಆಗಲ್ಲ. ಇನ್ನು ನಮ್ಮಲ್ಲಿ ಹಲವರು ಸಿಎಂ ಆಗಿ ಹೋಗಿದ್ದಾರೆ. ಅಧಿಕಾರವಿದ್ದಾಗ ನಾನು ಹೈಕೋರ್ಟ್ ಹಾಗೂ ಕಾನೂನು ವಿವಿ ತಂದೆ. ನಮ್ಮ ಕಡೆ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ ಎಂದು ಉತ್ತರ ಕರ್ನಾಟಕಕ್ಕೆ ಇಲಾಖೆಗಳ ಸ್ಥಳಾಂತರ ವಿಚಾರದ ಬಗೆಗಿನ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.