ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸಂಕಷ್ಟದ ಈ ಸಮಯದಲ್ಲೇ 60 ಹೊಸ ಕಾರುಗಳ ಖರೀದಿಗೆ ಮುಂದಾಗಿದ್ದಾಗಿ ಅವುಗಳಿಗೆ 13.40 ಕೋಟಿ ರೂ. ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ.
ಈ ಹಿಂದೆ ಸಚಿವರು ಸಂಸದ ಕಾರು ಖರೀದಿಗೆ ಇದ್ದ 22 ಲಕ್ಷ ರೂ. ಬದಲಿಗೆ 23 ಲಕ್ಷ ರೂ. ಖರೀದಿ ವೆಚ್ಚ ಹೆಚ್ಚಿಕೊಂಡು ಈ ಕಾರುಗಳ ಖರೀದಿಗೆ ಮುಂದಾಗುವ ಮೂಲಕ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುಂದುವೆಚ್ಚ ಮಾಡುವ ಮೂಲಕ ಖರ್ಚು ಮಾಡುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ 23 ಲಕ್ಷ ರೂ. ಖರೀದಿ ದರ ಏರಿಸಿ ಕೊಂಡು 32 ಸಚಿವರಿಗೆ ಮತ್ತು 28 ಸಂಸದರಿಗೆ ಕಾರು ಕೊಳ್ಳಲು ಮುಂದಾಗಿರುವು ನಿಜಕ್ಕೂ ಕೊರೊನಾ ಈ ಪರಿಸ್ಥಿತಿಯಲ್ಲಿ ದುರಾದೃಷ್ಟಕರ ಸಂಗತಿ ಎಂದು ಜನ ಪ್ರತಿನಿಧಿಗಳು ಮತ್ತು ಸರ್ಕಾರ ನಡೆಯನ್ನು ಜನರು ಖಂಡಿಸಿದ್ದಾರೆ.
ಸಾಮಾನ್ಯ ಜನರು ಇರುವ ವಾಹನಗಳನ್ನು ಓಡಿಸಲಾಗಷ್ಟು ವಿಷಮ ಪರಿಸ್ಥಿತಿಗೆ ಪೆಟ್ರೋಲ್ ಡೀಸೆಲ್ ದರ ಏರಿಸುವ ಮೂಲಕ ಜನರನ್ನು ದೂಡಿರುವ ಸರ್ಕಾರ. ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಜನರ ಕಷ್ಟವನ್ನು ಆಲಿಸಲು ಇವರ ಬಳಿ ಸಮಯವಿಲ್ಲ. ಆದರೆ ಐಶಾರಾಮಿ ಜೀವನ ನಡೆಸಲು. ಸಚಿವರು ಹೊಸ ಕಾರು ಖರೀದಿಸಿ ಸ್ವ ಹಿತಕ್ಕೆ ಜನರ ತೆರಿಗೆ ಹಣ ಉಪಯೋಗಿಸಿಕೊಳ್ಳಲು ಮುಂದಾಗಿರುವುದು, ಈ ರೀತಿ ಮಾಡುವುದಕ್ಕೆ ಸ್ವಲ್ಪವು ಇವರಿಗೆ ನಾಚಿಕೆ ಆಗೊದಿಲ್ಲವಾ ಎಂದು ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಎಂದು ಜನರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಈ ನಡುವೆ ಈಗಿರುವ ಕಾರುಗಳನ್ನು 2-3ವರ್ಷದ ಹಿಂದೆ ಖರೀದಿಸಲಾಗಿದೆ. ಅವು ಇಷ್ಟು ಬೇಗ ಹಳೆಯದಾಗಿ ಹೋಗಿವೆಯಾ? ನಾಚಿಕೆ ಆಗೊದಿಲ್ವಾ ನಿಮ್ಮ ಜನ್ಮಕ್ಕೆ. ಜನರ ಸಮಸ್ಯೆಗೆ ಸ್ಪಂದಿಸಬೇಕಾದ ನೀವು ನಿಮ್ಮ ಸ್ವ ಹಿತಕ್ಕಾಗಿ ಈ ರೀತಿ ನಡೆ ಅನುಸರಿಸುವುದು ಸರಿನಾ ಎಂದು ಕಿಡಿಕಾರುತ್ತಿದ್ದಾರೆ.