ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಬಗ್ಗೆ ತೆಗೆದುಕೊಂಡಿರುವ ತೀರ್ಮಾನ ನೌಕರರಿಗೆ ತೃಪ್ತಿ ತಂದಿಲ್ಲ. ಆದರೂ ನೌಕರರ ಹಿತವೇ ಮುಖ್ಯ. ಹೀಗಾಗಿ ಸರ್ಕಾರ ಗೆಲ್ಲಲ್ಲಿ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ರೈತ ಮುಖಂಡ ಮತ್ತು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಇನ್ನು ಇಂದು ಸಾರಿಗೆ ಬಸ್‌ಗಳ ಸಂಚಾರವಿಲ್ಲದೆ ಜನರು ಪರದಾಡುತ್ತಿದ್ದು, ಹೀಗಾಗಿ ಮುಷ್ಕರ ನಿಲ್ಲಿಸುವ ಆಲೋಚನೆ ಮಾಡಲಾಗುತ್ತಿದೆ. ಈ ಬಗ್ಗೆ ಫ್ರೀಡಂ ಪಾರ್ಕ್‌ನಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಖಾಸಗಿ ಟಿವಿಯೊಂದಕ್ಕೆ ತಿಳಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಇವರನ್ನೇ ನಂಬಿಕೊಂಡು ಮುಷ್ಕರ ಆರಂಭಿಸಿರುವ ನೌಕರರ ತಲೆಯ ಮೇಲೆ ಸಂಪೂರ್ಣವಾಗಿ ಚಪ್ಪಡಿಕಲ್ಲು ಎಳೆಯಲು ತೀರ್ಮಾನಿಸಿದ್ದಾರೆಯೇ ಎಂಬುವುದು ಸದ್ಯ ಮುಷ್ಕರ ನಿರತ ಸಾರಿಗೆ ನೌಕರರನ್ನು ಕಾಡುತ್ತಿದೆ.