ಚಿತ್ರದುರ್ಗ: ಚಳ್ಳಕೆರೆ ನಗರದ ಹಳೇ ನಗರದಲ್ಲಿ ವಾಸವಿರುವ 8 ತಿಂಗಳ ಗರ್ಭಿಣಿ ಶ್ವೇತ ಗಂಡ ರಾಜಕುಮಾರ್, ಇವರ ರಕ್ತದಲ್ಲಿ ಹಿಮೋಗ್ಲೊಬಿನ್ ಕಡಿಮೆ ಇದ್ದು, ರಕ್ತ ಖರೀದಿಸಿ ಪಡೆಯುವ ಸಲುವಾಗಿ ಚಳ್ಳಕೆರೆ ಮಹಿಳಾ ಆರೋಗ್ಯ ಸಮಿತಿಯಿಂದ 2 ಸಾವಿರ ರೂ. ಗಳ ನೆರವನ್ನು ತಹಸೀಸಿಲ್ದಾರ್ ಮಲ್ಲಿಕಾರ್ಜುನ್ ಗರ್ಭಿಣಿಗೆ ವಿತರಿಸಿದರು.
28 ವರ್ಷ ವಯಸ್ಸಿನ ಶ್ವೇತ ಅವರ ಆರೋಗ್ಯ ತಪಾಸಣೆ ನಡೆಸುವ ಸಲುವಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಸಿ. ಸುಶೀಲ ಹಾಗೂ ಆಶಾ ಕಾರ್ಯಕರ್ತೆಯಾದ ಪದ್ಮಾವತಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಶಮಾಪರ್ವಿನ್ ಅವರಲ್ಲಿ ಕರೆದುಕೊಂಡು ಬಂದಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ಆರೋಗ್ಯ ತಪಾಸಣೆ ಸಂದರ್ಭದಲ್ಲಿ ಮಹಿಳೆಯ ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕೇವಲ 8 ಗ್ರಾಂ ಇರುವುದನ್ನು ತಿಳಿದುಬಂದಿದ್ದು, ಮಹಿಳೆಗೆ ಕೂಡಲೆ ರಕ್ತ ಪಡೆಯುವಂತೆ ವೈದ್ಯರು ಶಿಫಾರಸು ಮಾಡಿದ್ದರು. ಬಡ ಕುಟುಂಬದ ಮಹಿಳೆಗೆ ರಕ್ತ ಖರೀದಿಸಿ ಹಾಕಿಸಿಕೊಳ್ಳಲು ಮಹಿಳಾ ಆರೋಗ್ಯ ಸಮಿತಿ (ಮಾಸ್) ಯಿಂದ 2000 ರೂ.ಗಳನ್ನು ತಹಸೀಲ್ದಾರ್ ಮಲ್ಲಿಕಾರ್ಜುನ ಗುರುವಾರ ವಿತರಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಸುಧಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ, ಸಿ.ಡಿ.ಪಿ.ಓ ಮೋಹನಕುಮಾರಿ, ನಗರ ಆರೋಗ್ಯ ಕೇಂದ್ರದ ವೈದ್ಯ ಡಾ. ಮುಸ್ತಾಫ್ ಇದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail