ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ: ಸಾರ್ವಜನಿಕರು ಆರೋಗ್ಯದ ಸುರಕ್ಷತೆಗಾಗಿ ಭಯದಿಂದ ಹೊರಬಂದು ಕಡ್ಡಾಯವಾಗಿ ಕೋವಿಸೀಲ್ಡ್ ಲಸಿಕೆಯನ್ನು ಪಡೆಯುವಂತೆ ಮಾಜಿ ಶಾಸಕ ಕೆ ವೆಂಕಟೇಶ್ ತಿಳಿಸಿದರು.
ಪಟ್ಟಣದ ಆಸ್ಪತ್ರೆಯಲ್ಲಿ ಮಂಗಳವಾರ ಕೋವಿಸೀಲ್ಡ್ ಲಸಿಕೆ ಪಡೆದು ಮಾತನಾಡಿದರು.
ಜಗತ್ತು ಕಂಡು ಕೇಳರಿಯದ ರೀತಿಯಲ್ಲಿ ಕೊರೊನಾ ವೈರಸ್ ಆವರಿಸಿ ಜನರನ್ನು ಸಂಕಷ್ಟಕ್ಕೀಡಿಮಾಡಿದೆ. ಇತ್ತೀಚೆಗೆ ಲಸಿಕೆ ಬಂದ ನಂತರ ಜನತೆ ಭಯದಿಂದ ಹೊರಬಂದು ಚೇತರಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಆದರೂ ಕೊರೊನಾ ಸಮಸ್ಯೆ ದೇಶದ ಅನೇಕ ಭಾಗಗಳಲ್ಲಿ ಇನ್ನೂ ಜನತೆಯನ್ನು ಸಂಕಷ್ಟಕ್ಕೆ ತಳ್ಳುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಮುಂದೆ ಬಂದು ವೈದ್ಯರ ಸಲಹೆ ಮತ್ತು ಅಗತ್ಯ ಚಿಕಿತ್ಸಾ ವಿಧಾನಗಳನ್ನು ಪಡೆಯುವಂತೆ ಸೂಚಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಶರತ್ ಬಾಬು ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿಯೂ ಲಸಿಕೆ ನೀಡುತ್ತಿದ್ದು ಸಾರ್ವಜನಿಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಅಲ್ಲದೆ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಸೀಲ್ಡ್ ಲಸಿಕೆ ನೀಡಗಾಲುತ್ತಿದೆ. ಆದ್ದರಿಂದ 60 ವರ್ಷ ಮೇಲ್ಪಟ್ಟವರು ಹಾಗೂ 45 ರಿಂದ 59 ವರ್ಷ ಮಧುಮೇಹ ಮತ್ತು ರಕ್ತದೊತ್ತಡ ಇರುವವರು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ತೋರಿಸಿ ಲಸಿಕೆ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡ ಬಿ.ಜೆ.ಬಸವರಾಜ್, ಭುಜಂಗ, ಬಿರ್ಲಾ ಹರೀಶ್ ಆಸ್ಪತ್ರೆಯ ಸಿಬ್ಬಂದಿಗಳಾದ ಅಣ್ಣೇಗೌಡ ಶೇಷಗಿರಿ ಸೇರಿದಂತೆ ಇತರರು ಇದ್ದರು.