ಬೆಂಗಳೂರು: ಕೊರೊನಾ ಮೂರನೇ ಅಲೆ ಸಂಬಂಧ ಸದ್ಯಕ್ಕೆ ನೈಟ್ ಕರ್ಫ್ಯೂ ಹಾಗೂ ಕಠಿಣ ನಿರ್ಬಂಧಗಳು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯ ನಂತರ ಕೋವಿಡ್ ಸಾಂಕ್ರಾಮಿಕಕ್ಕೆ ಹಾಗೂ ಹೊಸ ತಳಿ ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದನ್ನೂ ಓದಿ ಓಮಿಕ್ರಾನ್‌ನಿಂದ ಪ್ರಾಣಹಾನಿಯಾಗಲ್ಲ- ಭಯಬೇಡ ಎಚ್ಚರಿಕೆ ವಹಿಸಿ ಎಂದ ತಜ್ಞರು
ಸದ್ಯಕ್ಕೆ ನೈಟ್ ಕರ್ಫ್ಯೂ ಕೂಡ ಇಲ್ಲ ಬದಲಾಗಿ ಒಂದು ವಾರದ ಬೆಳವಣಿಗೆ ಗಮನಿಸಿ ಬಳಿಕ ನಿರ್ಧಾರ ಮಾಡುತ್ತೇವೆ. ಓಮಿಕ್ರಾನ್ ಸೋಂಕು ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾ. ಸುದರ್ಶನ್ ಅವರ ಜತೆ ಚರ್ಚೆ ಮಾಡಿದ್ದೇವೆ. ಅವರು ವಿವರಣೆ ನೀಡಿದ್ದು, ಈಗಿರೋ ಫಿಗರ್ ನೋಡಿದಾಗ ಗಾಬರಿ ಅವಶ್ಯಕತೆಯಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ವಸತಿ ನಿಲಯಗಳಲ್ಲಿ ಸೋಂಕು ಪತ್ತೆ ವಿಚಾರವಾಗಿ ಮಾತನಾಡಿ, ಹಾಸ್ಟೆಲ್‌ಗಳಿಗೆ ವಿಶೇಷ ಮಾರ್ಗಸೂಚಿ ಕೈಗೊಳ್ಳಲಾಗಿದೆ. ಒಂದೇ ಬಾರಿ ಎಲ್ಲರೂ ಊಟಕ್ಕೆ ಕೂರದಂತೆ ಸೂಚನೆ ನೀಡಲಾಗಿದೆ ಹಾಗೂ ವಾರ್ಡನ್, ಅಡುಗೆಯವರಿಗೆ 2 ಡೋಸ್ ಲಸಿಕೆ ಆಗಬೇಕು. ಐಸೋಲೇಶನ್ ರೂಂ ಮಾಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
3 ಜನರಿಗೆ ಬಂದರೂ ಕ್ಲಸ್ಟರ್ ಅಂತ ನಿರ್ಧಾರ ಮಾಡಿದ್ದೇವೆ. ಕ್ಲಸ್ಟರ್ ಮ್ಯಾನೇಜ್‌ಮೆಂಟ್‌ಗೆ ಸೂಚನೆ ಕೊಟ್ಟಿದ್ದೇವೆ. ವ್ಯಾಕ್ಸಿನ್ ಡ್ರೈವ್ ಮಾಡಲು ಸಚಿವರ ಸಲಹೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದರು.
ಇನ್ನು ಗಡಿ ಭಾಗದಲ್ಲಿರುವ ಕಟ್ಟೆಚ್ಚರ ಮುಂದುವರಿಯಲಿದೆ. ಕೇರಳ ವಿದ್ಯಾರ್ಥಿಗಳಿಗೆ ನಿರ್ಬಂಧ ಮುಂದುವರಿಯಲಿದೆ. ಆರ್‌ಟಿಪಿಸಿಆರ್ ಟೆಸ್ಟ್ ಸೇರಿ ಇತರ ನಿರ್ಬಂಧಗಳು ಮುಂದುವರಿಯುತ್ತದೆ ಎಂದ ಅವರು ಒಂದು ವಾರದ ನಂತರ ಕ್ರಿಸ್ಮಸ್, ಹೊಸ ವರ್ಷಕ್ಕೆ ನಿಯಮಾವಳಿ ರೂಪಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ ಎಂದು ಇದೆ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು. ಜತೆಗೆ ಸಭೆಗೆ ಆರೋಗ್ಯ ಸಚಿವ ಸುಧಾಕರ್ ಗೈರು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಧಾಕರ್ ಅವರಿಗೆ ಬರಲು ಸಾಧ್ಯವಾಗ್ತಿಲ್ಲ ಎಂದು ಈ ಮೊದಲೇ ಅನುಮತಿ ಪಡೆದಿದ್ದರು ಎಂದು ತಿಳಿಸಿದರು.