Vijayapatha – ವಿಜಯಪಥ
Friday, November 1, 2024
NEWSನಮ್ಮಜಿಲ್ಲೆರಾಜಕೀಯ

ಹಾಡೋನಹಳ್ಳಿ, ನೇರಳೆಘಟ್ಟದಲ್ಲಿ ಮತದಾನದ ವೇಳೆ  ಘರ್ಷಣೆ : ಜಿಪಂ ಸದಸ್ಯನಿಂದ  ಹಲ್ಲೆ ಆರೋಪ 

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ದೊಡ್ಡಬಳ್ಳಾಪುರ: ತಾಲೂಕಿನ  ಹಾಡೋನಹಳ್ಳಿ ಮತ್ತು ನೇರಳೆಘಟ್ಟದಲ್ಲಿ ಎರಡು ಬಣಗಳ  ನಡುವೆ  ಮತದಾನಕ್ಕೆ  ಸಂಬಂಧಿಸಿದಂತೆ ಘರ್ಷಣೆಯಾಗಿರುವುದನ್ನು ಹೊರತು ಪಡಿಸಿದರೆ, ಬೆಂಗಳೂರು  ಜಿಲ್ಲೆಯಾದ್ಯಂತ ಇಂದು ನಡೆದ ಎರಡನೇ ಹಂತಗದ ಗ್ರಾಮ  ಪಂಚಾಯಿತಿ ಚುನಾವಣೆ ಬಹುತೇಕ ಶಾಂತಿಯುತವಾಗಿ  ನಡೆದಿದೆ.

ಆದರೆ, ತಾಲೂಕಿನ  ಹಾಡೋನಹಳ್ಳಿಯ ಸರ್ಕಾರಿ  ಪ್ರಾಥಮಿಕ  ಶಾಲೆಯ ಮತಗಟ್ಟೆಯಲ್ಲಿ ಜಿಲ್ಲಾ  ಪಂಚಾಯಿತಿ ಸದಸ್ಯ  ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಹಾಡೋನಹಳ್ಳಿ ಗ್ರಾಮ  ಪಂಚಾಯಿತಿ ಸಿಂಬ್ಬದಿ ಹರೀಶ್  ಎಂಬಾತ ಮತದಾರರನ್ನು ಬೂತ್  ಒಳಗೆ ಕರಕೊಂಡು ಮತಹಾಕಿಸುತ್ತಿದ್ದ. ಜಿಲ್ಲಾ  ಪಂಚಾಯಿತಿ ಸದಸ್ಯ  ಅಪ್ಪಯ್ಯಣ್ಣನ  ಬೆಂಬಲಿಗ ಏಜೆಂಟ್  ಮತಗಟ್ಟೆ ಕೇಂದ್ರದಲ್ಲಿ  ಇವರಿಗೇ ಮತದಾನ ಮಾಡಿ ಎಂದು ಹೇಳುತ್ತಿದ್ದ ಎನ್ನಲಾಗಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಇದಕ್ಕೆ  ಮತ್ತೊಂದು ಬಣದವರು  ಆಕ್ಷೇಪ  ವ್ಯಕ್ತಪಡಿಸಿದ್ದಾಗ, ಮತಗಟ್ಟೆಯೊಳಗೆ  ಎರಡು ಬಣಗಳ  ನಡುವೆ ಘರ್ಷಣೆಯಾಗಿದೆ. ಈ ಸಮಯದಲ್ಲಿ  ಜಿಲ್ಲಾ ಪಂಚಾಯಿತಿ ಸದಸ್ಯ  ಅಪ್ಪಯ್ಯಣ್ಣ ಶೆಟ್ಟಪ್ಪ ಎಂಬುವರ ಮೇಲೆ ಹಲ್ಲೆ  ಮಾಡಿದ್ದಾರೆಂದು ಆರೋಪ  ಮಾಡಲಾಗಿದೆ.

ಅಪ್ಪಯ್ಯಣ್ಣನ  ಬೆಂಬಲಿಗರು  ಮತದಾರಿಗೆ  ಧಮ್ಕಿಯಾಕುವ ಮೂಲಕ ಭಯದ ವಾತಾವರಣ  ಉಂಟು ಮಾಡಿದ್ದರೆಂದು ಮತ್ತೊಂದು ಬಣದ ಗುಂಪು ಆರೋಪ ಮಾಡಿದೆ.

ನೇರಳೆಘಟ್ಟದಲ್ಲೂ ಸಹ ಮತದಾನ  ಸಮಯದಲ್ಲಿ  ಎರಡು ಬಣಗಳ  ನಡುವೆ ಮಾತಿನ  ಚಕಮಕಿ  ನಡೆದಿದ್ದು,  ಪೊಲೀಸರ  ಮಧ್ಯ ಪ್ರವೇಶದ ನಂತರ ಪರಿಸ್ಥಿತಿ  ಶಾಂತಿಯುತವಾಗಿ ನಡೆಯಿತು.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ