CrimeNEWSನಮ್ಮಜಿಲ್ಲೆ

ಲೈಸನ್ಸ್ ಪಡೆಯದೆ ಅಕ್ರಮ ಕಟ್ಟಡ ನಿರ್ಮಾಣ: ಪುರಸಭಾ ಅಧಿಕಾರಿಗಳಿಂದ ತಡೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಪಿರಿಯಾಪಟ್ಟಣ : ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಪೊಲೀಸ್‌ಠಾಣೆ ಪಕ್ಕದಲ್ಲಿಯೆ ಯಾವುದೆ ಲೈಸನ್ಸ್ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕಟ್ಟಡ ನಿರ್ಮಾಣವನ್ನು ಪುರಸಭೆ ಅಧಿಕಾರಿಗಳು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

ಪಟ್ಟಣದ ಬಿ.ಎಂ.ರಸ್ತೆಯಲ್ಲಿ ಪೊಲೀಸ್‌ಠಾಣೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಾನ್ಸುನ್‌ಚಂದ್ರು ಅವರ ಪತ್ನಿ ವಿದ್ಯಾಚಂದ್ರು, ಮತ್ತು ಮಗ ಧೃವ ಬಿ.ಎನ್.ರವರಿಗೆ ಜಂಟಿ ಸೇರಿದೆ ಎನ್ನಲಾದ ಜಾಗದಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು.

ಈ ಬಗ್ಗೆ ಸಾರ್ವಜನಿಕ ದೂರು ಆಗಮಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಆರ್‌ಐ ಪಾಂಡುರಂಗ, ಕರವಸೂಲಿಗಾರ ರಘು, ನೋಡಲ್ ಇಂಜಿನಿಯರ್ ರಮೇಶ್ ಸ್ಥಳಕ್ಕೆ ಆಗಮಿಸಿ ಕೆಲಸವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಘು ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣಕ್ಕೆ ಪುರಸಭೆಯಿಂದ ಯಾವುದೆ ಲೈಸನ್ಸ್ ಪಡೆಯಲಾಗಿಲ್ಲ. ಆದ್ದರಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಆದರೆ ಲೈಸನ್ಸ್‌ಗೆ ಮನವಿ ಸಲ್ಲಿಸಿದ್ದರೆ ಅದು ಅವರಿಗೆ ದೊರಕಲಿದೆ ಎಂದು ತಿಳಿಸಿದರು.

ಕಂದಾಯ ಅಧಿಕಾರಿ ಪಾಂಡುರಂಗ ಮಾತನಾಡಿ ಇದು ಸರಕಾರಿ ಸ್ಥಳ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ತಹಸೀಲ್ದಾರ್ ಅವರಿಗೆ  ದೂರು ನೀಡಿದರ ಸಂಬಂಧ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗುತ್ತಿದ್ದು ಸರ್ವೆ ನಂಬರ್ 322 ರಲ್ಲಿ ಸರಕಾರಿ ಖುಷಿ ಬೀಳು ಎಂಬುದಾಗಿ ದಾಖಲೆಗಳಲ್ಲಿ ಇದೆ.

ನಂತರ ಇದು ಹೇಗೆ ಖಾತೆಯಾಗಿದೆ ಮತ್ತು ಯಾರ ಹೆಸರಿಗೆ ರವಾನೆಯಾಗಿದೆ ಎಂಬ ಬಗ್ಗೆ ಕಂದಾಯ ಇಲಾಖೆಯ ದಾಖಲೆಗಳಿಂದಲೆ ತಿಳಿಯ ಬೇಕಿದ್ದು ಈ ಬಗ್ಗೆ ಪೂರ್ಣ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು. ತಕ್ಷಣಕ್ಕೆ  ಈ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲು ಪುರಾತತ್ವ ಇಲಾಖೆಯಿಂದ ಅನುಮತಿ ಬೇಕಾಗಿದೆ ಎಂದು ತಿಳಿಸಿದರು.

 ಮಹಿಳೆ ಗೋಳು
 ಇದೇ ಸ್ಥಳದಲ್ಲಿ 40 ವರ್ಷಗಳಿಂದ ಬೀದಿ ಬದಿಯ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಮಹಿಳೆ ಶಿವಮ್ಮ ಪತ್ರಕರ್ತರೆದು ಕಣ್ಣೀರಿಟ್ಟಿದ್ದು ಗಂಡ ಮಗನನ್ನು ಕಳೆದುಕೊಂಡು ಒಂಟಿ ಜೀವನ ನಡೆಸುತ್ತಿರುವ ನನ್ನನ್ನು ಈ  ಸ್ಥಳದಿಂದ ಎತ್ತಂಗಡಿ ಮಾಡಲು ಹುನ್ನಾರ ಮಾಡಲಾಗುತ್ತಿದೆ.

2 ತಿಂಗಳ ಕಾಲಾವಕಾಶ ಕೇಳಿದರು ಕಟ್ಟಡ ನಿರ್ಮಾಣಕಾರರು ತನ್ನ ಅಂಗಡಿ ಮುಂದೆ ಡಸ್ಟ್ ಪುಡಿ ಸುರಿದು ತೊಂದರೆ ನೀಡಿದ್ದರು, ಬೀದಿ ಬದಿಯ ವ್ಯಾಪಾರಿಯಾದ ನನಗೆ ಅನ್ಯಾಯವಾಗಂದತೆ ನ್ಯಾಯಕೋಡಿಸಬೇಕು ಎಂದು ಮನವಿ ಮಾಡಿದರು.

 ಸರ್ಕಾರಿ ಜಾಗ ಆರೋಪ
 ಹಿರಿಯ ಪತ್ರಕರ್ತ ಡಿ. ದೇವಣ್ಣ ಈ ಬಗ್ಗೆ ಉಪವಿಭಾಗಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದು ಸ.ನಂ.322 ಸರಕಾರಿ ಬೀಳು ಎಂದು ದಾಖಲೆ ಇದ್ದು ಈ ಜಾಗವನ್ನು ಅಕ್ರಮವಾಗಿ ಖಾತೆ ಮಾಡಲಾಗಿದೆ. ಅಲ್ಲದೆ ಚನ್ನಕೇಶವ ದೇವಾಲಯದಿಂದ 300 ಮೀಟರ್ ಅಂತರದಲ್ಲಿ ಯಾವುದೆ ಕಟ್ಟಡ ವಾಣಿಜ್ಯ ಮಳಿಗೆ ನಿರ್ಮಾಣ ಮಾಡದಂತೆ ಆದೇಶವಿದ್ದರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯದೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಲಿಖಿತ ಮನವಿ ಮಾಡಿದ್ಧಾರೆ.

ಹೀಗೆ ಸರಕಾರಿ ಅಧಿಕಾರಿಗಳು ಕಟ್ಟಡ ನಿರ್ಮಾಣವನ್ನು ತಡೆಹಿಡಿದಿದ್ದು ಮುಂದಿನ ದಿನಗಳಲ್ಲಿ ಈ ಇಲಾಖೆಗಳು ಯಾವ ಕ್ರಮವಹಿಸುವುದು ಕಾದು ನೋಡಬೇಕಿದೆ.

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ