NEWSದೇಶ-ವಿದೇಶನಮ್ಮರಾಜ್ಯ

ಸಾರಿಗೆ ಸಚಿವರ ಎಚ್ಚರಿಕೆಗೆ ಕ್ಯಾರೆ ಎನ್ನದ MSRTC ನೌಕರರಿಂದ ಮುಷ್ಕರ ಇನ್ನಷ್ಟು ತೀವ್ರ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮುಂಬೈ: ಸರ್ಕಾರದೊಂದಿಗೆ ಸಾರಿಗೆ ನಿಗಮವನ್ನು ವಿಲೀನ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ನೌಕರರಿಗೆ ಶುಕ್ರವಾರ ಕರ್ತವ್ಯಕ್ಕೆ ಮರಳುವಂತೆ ಸಾರಿಗೆ ಸಚಿವ ಅನಿಲ್ ಪರಬ್ ಎಚ್ಚರಿಕೆ ನೀಡಿದರೂ ಜಗ್ಗದೆ ನೌಕರರ ಒಂದು ವರ್ಗ ಮುಷ್ಕರ ನಡೆಸುತ್ತಿದ್ದಾರೆ.

ಸಚಿವರ ಎಚ್ಚರಿಕೆಗೆ ಕ್ಯಾರೆ ಎನ್ನದ ಕಾರ್ಮಿಕರು ಇಂದು (ಶುಕ್ರವಾರ) ಬೆಳಗ್ಗೆ ಕೆಲಸಕ್ಕೆ ಮರಳಿಲ್ಲ ಎಂದು ನಿಗಮದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇನ್ನು ಎಷ್ಟು ಮಂದಿ ನೌಕರರು ಶುಕ್ರವಾರ ರಾಜ್ಯದಾದ್ಯಂತ ಕರ್ತವ್ಯಕ್ಕೆ ಮರಳಿದ್ದಾರೆ ಎಂಬ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಆ ಅಧಿಕಾರಿ ಹೇಳಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಯವರೆಗೆ ರಾಜ್ಯದಾದ್ಯಂತ ಸಾರಿಗೆ ಸಂಸ್ಥೆಯ  ಕೇವಲ 151 ಬಸ್‌ಗಳು ಮಾತ್ರ ರಸ್ತೆಗಿಳಿದಿವೆ. ಅವುಗಳಲ್ಲಿ ಹೆಚ್ಚಿನವು ಸಾಂಗ್ಲಿ ಮತ್ತು ರಾಯಗಡ ವಿಭಾಗಗಳಲ್ಲಿ ಚಂಚರಿಸುತ್ತಿವೆ. ಈ ಬಸ್‌ಗಳಲ್ಲಿ 116 ಸಾಮಾನ್ಯ, ಉಳಿದವು ಹವಾನಿಯಂತ್ರಿತ ‘ಶಿವನೇರಿ’ ಮತ್ತು ‘ಶಿವಶಾಹಿ’ ಬಸ್‌ಗಳಾಗಿವೆ ಎಂದು ಎಂಎಸ್‌ಆರ್‌ಟಿಸಿ ವಕ್ತಾರರು ತಿಳಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಸ್ಥಾನಮಾನ ಹಾಗೂ ಉತ್ತಮ ವೇತನ ನೀಡುವಂತೆ  ಹಾಗೂ ಆರ್ಥಿಕವಾಗಿ ಕುಸಿದಿರುವ ನಿಗಮವನ್ನು ರಾಜ್ಯ ಸರ್ಕಾರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯಿಸಿ MSRTC ನೌಕರರು ಅಕ್ಟೋಬರ್ 28 ರಿಂದ ಮುಷ್ಕರ ನಡೆಸುತ್ತಿದ್ದು, ಇಂದಿಗೆ 30 ನೇ ದಿನಕ್ಕೆ ಕಾಲಿಟ್ಟಿದೆ.

ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ, ಪರಬ್ ಬುಧವಾರ ನೌಕರರ ಮೂಲ ವೇತನದಲ್ಲಿ 2,500 ರಿಂದ 5,000 ರೂ.ಗಳ ಹೆಚ್ಚಳವನ್ನು ಘೋಷಿಸಿದರು ಮತ್ತು ನೌಕರರು ಕರ್ತವ್ಯಕ್ಕೆ ಮರಳಲು 24 ಗಂಟೆಗಳ ಗಡುವನ್ನು ನೀಡಿದ್ದರು.

ಆ ಗಡುವು ಇಂದಿಗೆ ಮುಗಿದಿದ್ದು, ನೌಕರರು ಕೆಲಸಕ್ಕೆ ಮರಳುತ್ತಾರೆ ಎಂಬ ಲೆಕ್ಕಚಾರದಲ್ಲಿದ್ದ ಸರ್ಕಾರಕ್ಕೆ ನೌಕರರು ಮರಳದೆ ತಮ್ಮ ಹೋರಾಟ ಮುಂದುವರಿಸಿರುವುದು ನುಂಗಲಾದರ ಬಿಸಿ ತುಪ್ದ್ದುಪವಾಗಿ ಪರಿಣಮಿಸಿದೆ. ಈ ನಡುವೆ  ವಿಲೀನ ಮಾಡಲೇಬೇಕು ಎಂದು ಪಟ್ಟು ಹಿಡಿದು ನೌಕರರು ಕುಳಿತ್ತಿದ್ದಾರೆ.

ಇನ್ನೊಂದೆಡೆ ನೌಕರರಿಗೆ ವೇತನ ಹೆಚ್ಚಳ ಮಾಡಿದರೂ ಕೆಲಸಕ್ಕೆ ಮರಳುತ್ತಿಲ್ಲ ಎಂದು ಕುಪಿಗೊಂಡಿರುವ ಸಚಿವರು ನೌಕರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹೇಳಿದ್ದಾರೆ.

MSRTC ಸುಮಾರು 16,000 ಬಸ್‌ಗಳು ಮತ್ತು ಸುಮಾರು 93,000 ಉದ್ಯೋಗಿಗಳನ್ನು ಹೊಂದಿರುವ ಅತಿದೊಡ್ಡ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿದೆ. ನಷ್ಟದಲ್ಲಿರುವ ನಿಗಮವು ಕೊರೊನಾಗೂ ಮುನ್ನ ಪ್ರತಿ ನಿತ್ಯ ಸುಮಾರು 65 ಲಕ್ಷ ಜನರನ್ನು ಸುರಕ್ಷಿತವಾಗಿ ಅವರ ಸ್ಥಳಗಳಿಗೆ ತಲುಪಿಸುತ್ತಿತ್ತು.

Leave a Reply

error: Content is protected !!
LATEST
BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ... ರಾಜಿಯಾಗಿದೆ ಅಂದರೂ KSRTC ಡ್ರೈವರ್‌ಗೆ 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟು 2 ಸಾವಿರ ರೂ. ಕೊಟ್ಟಮೇಲೆ ಬಸ್‌ ಬಿಟ್ಟ ಪೊಲೀ... KSRTC ನಿವೃತ್ತ ನೌಕರರ ಕನಿಷ್ಠ ಪಿಂಚಣಿ ಪಡೆಯುವ ಹೋರಾಟಕ್ಕೆ ಅತೀ ಶೀಘ್ರದಲ್ಲೇ ಸಿಗಲಿದೆ ಫಲ: ನಂಜುಂಡೇಗೌಡ