NEWSದೇಶ-ವಿದೇಶನಮ್ಮರಾಜ್ಯ

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಘೋಷಿಸಿದ ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕಡಿತ ಮಾಡಿವೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈ ಸ್ ಸುಂಕವನ್ನು ಲೀಟರಿಗೆ 10 ರೂ. ಪೆಟ್ರೋ ಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ 5 ರೂ. ತಗ್ಗಿಸಿದೆ. ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ಗರಿಷ್ಠ 7ರೂ. ವರೆಗೂ ಕಡಿಮೆಮಾಡುತ್ತಿದ್ದು , ಇದರಿಂದಾಗಿ ಡೀಸೆಲ್ ದರ 17 ರೂ.ಗಳಷ್ಟು ಮತ್ತು ಪೆಟ್ರೋಲ್ 12 ರೂ.ಗಳಷ್ಟು ಕಡಿಮೆಯಾಗುವ ಸಾಧ್ಯ ತೆ ಇದೆ.

ದೇಶದ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಕಡಿತ?

ಕರ್ನಾಟಕ: ಕರ್ನಾಟಕ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ.ಗಳಷ್ಟು ಇಳಿಕೆ ಮಾಡುವುದಾಗಿ ನಿನ್ನೆ ರಾತ್ರ ಘೊಷಣೆ ಮಾಡಿದೆ. ಆದರೆ, ತೆರಿಗೆ ಕಡಿತ ಗುರುವಾರ ಸಂಜೆಯಿಂದ ಅನ್ವಯವಾಗಲಿದೆ ಎಂದು ತಿಳಿಸಿದೆ.

ಹೀಗಾಗಿ ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋ ಲ್ ದರ 95.50 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ದರ 81.50 ರೂ.ಗೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉತ್ತರಾಖಂಡ: ಪೆಟ್ರೋಲ್ ಮೇಲಿನ ತೆರಿಗೆಯನ್ನು 2 ರೂಪಾಯಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯ ಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಇದರಿಂದಾಗಿ ಪೆಟ್ರೋಲ್ ದರ ಲೀಟರ್‌ಗೆ ಒಟ್ಟು 7 ರೂಪಾಯಿ ಕಡಿಮೆಯಾಗಲಿದೆ.

ಅಸ್ಸಾಂ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ ತಲಾ 7 ರೂ. ಇಳಿಕೆಮಾಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪೆಟ್ರೋಲ್ ದರದಲ್ಲಿ ಒಟ್ಟು 12 ರೂಪಾಯಿ ಮತ್ತು ಡೀಸೆಲ್ 17 ರೂಪಾಯಿ ಕಡಿಮೆಯಾಗಲಿದೆ.

ಗೋವಾ: ಗೋವಾಮುಖ್ಯ ಮಂತ್ರಿ ಪ್ರಮೋದ್ ಸಾವಂತ್ ಅವರು ಪೆಟ್ರೋ ಲ್, ಡೀಸೆಲ್ ಎರಡರ ಮೇಲಿನ ತೆರಿಗೆಯನ್ನು 7 ರೂಪಾಯಿ ಕಡಿಮೆಮಾಡುವುದಾಗಿ ಪ್ರಕಟಿಸಿದ್ದಾರೆ.

ತ್ರಿಪುರಾ: ಪೆಟ್ರೋಲ್ 12 ರೂ. ಮತ್ತು ಡೀಸೆಲ್ 17 ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ತ್ರಿಪುರಾ ಸರ್ಕಾರ ಪ್ರಕಟಿಸಿದೆ. ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 7 ರೂ. ಇಳಿಕೆಮಾಡಿದ್ದು , ಇಂದಿನಿಂದಲೇ ಹೊಸ ದರ ಅನ್ವ ಯವಾಗಿದೆ ಎಂದು ತಿಳಿಸಿದೆ.

ಉತ್ತರ ಪ್ರದೇಶ: ಉತ್ತರ ಪ್ರದೇಶ ಸರ್ಕಾರವು ಪೆಟ್ರೋ ಲ್ ಮೇಲಿನ ತೆರಿಗೆಯನ್ನು 7 ರೂಪಾಯಿ ಮತ್ತು ಡೀಸೆಲ್ ಮೇಲಿನ ತೆರಿಗೆ 2 ರೂಪಾಯಿ ಇಳಿಸಲು ನಿರ್ಧರಿಸಿದೆ. ಈಮೂಲಕ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 12ರೂ.ಗಳಷ್ಟು ಕಡಿತವಾಗಲಿದೆ.

ಗುಜರಾತ್: ಪೆಟ್ರೋ ಲ್ ಮತ್ತು ಡೀಸೆಲ್ ತೆರಿಗೆಯಲ್ಲಿ ಕೇಂದ್ರ ಘೋಷಿಸಿರುವ ಕಡಿತದಜೊತೆಗೆ ಗುಜರಾತ್ ಸರ್ಕಾರವು 7 ರೂಪಾಯಿ ತೆರಿಗೆ ಇಳಿಕೆಮಾಡುತ್ತಿರುವುದಾಗಿ ಪ್ರಕಟಿಸಿದೆ.

ಮಣಿಪುರ: ಮಣಿಪುರ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ (ಬುಧವಾರ ರಾತ್ರಿ ) ಅನ್ವಯವಾಗುವಂತೆ 7 ರೂಪಾಯಿ ಕಡಿತಗೊಳಿಸಿದೆ. ದೀಪಾವಳಿಯ ಸಂದರ್ಭದಲ್ಲಿ ಜನರಿಗೆ ಉಡುಗೊರೆಯ ರೀತಿಯಲ್ಲಿ ಪೆಟ್ರೋ ಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಕಡಿತಗೊಂಡಿದೆ ಎಂದು ಮಣಿಪುರಮುಖ್ಯ ಮಂತ್ರಿ ಎನ್.ಬಿರೆನ್ ಸಿಂಗ್ ಟ್ವೀಟಿಸಿದ್ದಾರೆ.

ಸಿಕ್ಕಿಂ: ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಂಗ್ ಅವರು ಪೆಟ್ರೋ ಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 7 ರೂಪಾಯಿಯಷ್ಟು ಕಡಿಮೆಮಾಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಈಮೂಲಕ ಪ್ರ ತಿ ಲೀಟರ್ ಪೆಟ್ರೋ ಲ್ 12 ರೂ. ಮತ್ತು ಡೀಸೆಲ್ 17 ರೂಪಾಯಿ ಕಡಿಮೆಯಾಗಲಿದೆ.

ಒಟ್ಟಾರೆ ನಿತ್ಯ ಏರಿಕೆಯನ್ನೇ ಕಂಡು ಗ್ರಾಹಕರ ಜೇಬಿಗೆ ಸ್ವಲ್ಪಸ್ವಲ್ಪವೇ ಕತ್ತಿರಿ ಹಾಕಿಕೊಂಡು ಬರುತ್ತಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗ 12ರಿಂದ 17ರೂ.ವರೆಗೆ ತಮ್ಮ ತಮ್ಮ ತೆರಿಗೆಯನ್ನು ಇಳಿಸಿಕೊಂಡಿರುವುದು ಸ್ವಾಗತಾರ್ಹ. ಆದರೆ ಮತ್ತೆ ಪೈಸೆ ಲೆಕ್ಕಲ್ಲಿ ಏರಿಕೆ ಮಾಡುವ ಬದಲಿಗೆ ಇಳಿಕೆ ಮಾಡಿಕೊಂಡು ಬಂದರೆ ದೇಶದ ಸಾಮಾನ್ಯರಿಗೆ ತುಂಬಾ ಅನುಕೂಲವಾಗಲಿದೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...