ಬೆಂಗಳೂರು: ಜುಲೈ 1 ರಿಂದ ಪೂರ್ವಾನ್ವಯ ಆಗುವಂತೆ ತುಟ್ಟಿ ಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದೆ.
ನೌಕರನ ಮೂಲ ವೇತನದ ಶೇ.21.50 ರಷ್ಟಿದ್ದ ತುಟ್ಟಿ ಭತ್ಯೆಯನ್ನು ಶೇ. 24.50ಗೆ ಏರಿಸಲಾಗಿದೆ.
ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿ ಭತ್ಯೆ ಯನ್ನು ಮೂಲವೇತನದ ಶೇಕಡ 31ರಷ್ಟ ಕ್ಕೆ 2021ರ ಜುಲೈ 1ರಿಂದ ಅನ್ವ ಯವಾಗುವಂತೆ ಕೇಂದ್ರ ಸರ್ಕಾರ ಹೆಚ್ಚಿಸಿದೆ.
ತುಟ್ಟಿ ಭತ್ಯೆ ಯುಮೂಲವೇತನದ ಶೇ 28ರಷ್ಟ ರಿಂದ, ಶೇ 31ಕ್ಕೆ ಹೆಚ್ಚ ಳ ಆಗಲಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ರೈಲ್ವೆ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚ ಳಕ್ಕೆ ಸಂಬಂಧಿಸಿದಂತೆ ಪ್ರ ತ್ಯೇ ಕ ಆದೇಶವನ್ನು ಸಂಬಂದ ಪಟ್ಟ ಸಚಿವಾಲಯಗಳುಹೊರಡಿಸಲಿವೆ.
ತುಟ್ಟಿ ಭತ್ಯೆಯನ್ನು ಮತ್ತು ಕೇಂದ್ರದ ಪಿಂಚಣಿದಾರರಿಗೆ ನೀಡುವ ಡಿಆರ್‌ಅನ್ನು (ತುಟ್ಟಿ ಪರಿಹಾರ) ಶೇ. 3ರಷ್ಟು ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ಕಳೆದ ವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ 47.14 ಲಕ್ಷ ನೌಕರರಿಗೆ ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.