ಥಾಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಥಾಣೆ ಜಿಲ್ಲೆಯ ಕಲ್ಯಾಣ್ ಡಿಪೋಗೆ ಸೇರಿದ ಬಸ್ ಮೇಲೆ ಕಲ್ಲು ಹೊಡೆದ ಆರೋಪದ ಮೇಲೆ ಚಾಲಕನೊಬ್ಬನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
MSRTC ಸಿಬ್ಬಂದಿ ಅಕ್ಟೋಬರ್ 28 ರಿಂದ ಮುಷ್ಕರ ನಡೆಸುತ್ತಿದ್ದಾರೆ ಮತ್ತು ರಾಜ್ಯಾದ್ಯಂತ ಇರುವ 250 ಡಿಪೋಗಳಲ್ಲಿ ಬಸ್ ಕಾರ್ಯಾಚರಣೆ ನವೆಂಬರ್ 9 ರಿಂದ ಸ್ಥಗಿತಗೊಳಿಸಿ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ.
ಆದರೂ ಅವರಲ್ಲಿ ಕೆಲವರು ಶನಿವಾರ ಬಸ್ ಮಷ್ಕರವನ್ನು ಕೈ ಬಿಟ್ಟು ಕೆಲಸಕ್ಕೆ ಮರಳಿದ್ದರು. ಇದರಿಂದ ನೌಕರರ ನಡುವೆ ಘರ್ಷಣೆ ಕೂಡ ಆರಂಭವಾಗಿದೆ.
ಇದರ ಜತೆಗೆ ಶನಿವಾರ ಬಸ್ ಚಾಲನೆ ಮಾಡಿದ್ದಕ್ಕೆ ಕುಪಿತಗೊಂಡ ಸಹೋದ್ಯೋಗಿ ಬಸ್‌ಗೆ ಕಲ್ಲು ತೂರಿದ್ದರಿಂದ ಬಸ್ ಕಿಟಕಿ ಗಾಜು ಜಖಂ ಆಗಿದೆ.
ಮುಷ್ಕರ ಬೆಂಬಲಿಸುವಂತೆ ಮನವಿ ಮಾಡಿದರೂ ಬಸ್ ಚಾಲನೆ ಮಾಡುತ್ತಿದ್ದೀರಾ ಎಂದು ಸಿಬ್ಬಂದಿಗಳ ನಡುವೆ ಘರ್ಷಣೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಮಧ್ಯಾಹ್ನ ಚಾಲಕ ಕಲ್ಯಾಣ್-ಭಿವಂಡಿ ಮಾರ್ಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದರಿಂದ ಕೋಪಗೊಂಡ ಅವನ ಸಹೋದ್ಯೋಗಿ ವಿಠ್ಠಲ್ ಕೆಹಡ್ಕರ್ ಕೊಂಗಾವ್ ಪ್ರದೇಶದಲ್ಲಿ ಬಸ್‌ಗೆ ಕಲ್ಲು ಹೊಡೆದಿದ್ದಾನೆ. ಇದರಿಂದ ಬಸ್ ಗಾಜು ಜಖಂಗೊಂಡಿದೆ. ಆದರೆ ಯಾರಿಗೂ ಗಾಯವಾಗಿಲ್ಲ ಎಂದು ಅಧಿಕಾರಿ ಹೇಳಿದರು.
ಸಾರ್ವಜನಿಕ ಸೇವೆಯಲ್ಲಿದ್ದ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮೇರೆಗೆ ಕ್ರಿಮಿನಲ್ ಪ್ರಕರಣ ಹಾಗೂ ದುಡುಕಿನ ಮತ್ತು ನಿರ್ಲಕ್ಷ್ಯದ ಮೂಲಕ ಮಾನವ ಜೀವಕ್ಕೆ ಹಾನಿ ಮಾಡಲು ಮುಂದಾದ ಆರೋಪದ ಮೇರೆಗೂ ಕೇಹಡ್ಕರ್ ವಿರುದ್ಧ ಐಪಿಸಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆ ಪ್ರಕಾರ ದೂರು ದಾಖಲಿಸಿಕೊಂಡಿದ್ದು ವಿಚಾರಣೆ ಮುಂದುವರಿಸಲಾಗಿದೆ ಎಂದು ಹೇಳಿದರು.
ನಷ್ಟದಲ್ಲಿರುವ ಎಂಎಸ್‌ಆರ್‌ಟಿಸಿಯನ್ನು ಸರ್ಕಾರದೊಂದಿಗೆ ವಿಲೀನ ಮಾಡುವಂತೆ ಆಗ್ರಹಿಸಿ ಕಳೆದ 31ದಿನಗಳಿಂದ ನೌಕರರು ಮುಷ್ಕರ ನಡೆಸುತ್ತಿದ್ದಾರೆ.