ಗುವಾಹಟಿ: ದಾಖಲೆಗಳಿಲ್ಲದೇ ಅಸ್ಸಾಂ ರಾಜ್ಯದಿಂದ ಹಸುಗಳನ್ನು ಬೇರೆ ರಾಜ್ಯಗಳಿಗೆ ಸಾಗಿಸುವಂತಿಲ್ಲ. ಅಲ್ಲದೇ, ರಾಜ್ಯದ ಯಾವುದೇ ಹಿಂದೂ ಧಾರ್ಮಿಕ ಪ್ರದೇಶಗಳು ದೇವಾಲಯಗಳ 5 ಕಿ.ಮೀ. ವ್ಯಾಪ್ತಿಯಲ್ಲಿ ದನದ ಮಾಂಸಗಳ ಮಾರಾಟ ಮತ್ತು ಖರೀದಿ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ತಿಳಿಸಿದ್ದಾರೆ.
ಅಸ್ಸಾಂ ವಿಧಾನಸಭೆಯು ಜಾನುವಾರು ಸಂರಕ್ಷಣಾ ಮಸೂದೆಯನ್ನು ಶುಕ್ರವಾರ ಅಂಗೀಕರಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೂ ಸೂಚನೆ ನೀಡದ್ದಾರೆ.
ಇನ್ನು ರಾಜ್ಯದ ಗಡಿ ಭಾಗಗಳಲ್ಲಿ ನಡೆಯುತ್ತಿರುವ ಗೋಮಾಂಸ ಸಾಗಣೆ ನಿಷೇಧಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದ್ದಾರೆ.
ಈಗ ಅಂಗೀಕರಿಸಲ್ಪಟ್ಟಿರುವ ಜಾನುವಾರು ಸಂರಕ್ಷಣಾ ಮಸೂದೆ ಹೊಸದಾಗಿ ರೂಪಿಸಿದ್ದಲ್ಲ. 1950ರಲ್ಲಿ ಇದ್ದ ಕಾಂಗ್ರೆಸ್ ಸರ್ಕಾರ ರೂಪಿಸಿದ್ದ ಮಸೂದೆಯ ಸುಧಾರಣೆ ಅಷ್ಟೇ. ಮಹಾತ್ಮ ಗಾಂಧಿಯವರ ವಿಚಾರಧಾರೆಗಳಿಂದ ಸ್ಫೂರ್ತಿ ಪಡೆದು ಮಸೂದೆಯನ್ನು ಸುಧಾರಣೆ ಮಾಡಲಾಗಿದೆ.
ಮಸೂದೆ ಜಾರಿಯಿಂದ ಗೋಮಾಂಸ ಸೇವನೆ ವಿಚಾರದಲ್ಲಿ ಉಂಟಾಗುವ ಕೋಮು ಸಂಘರ್ಷವೂ ರಾಜ್ಯದಲ್ಲಿ ನಿಯಂತ್ರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.