ಬೆಂಗಳೂರು: ಕೊರೊನಾ ಕಾರಣದಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಿದ್ದ ಕೆಎಸ್ಆರ್ಟಿಸಿ ನಾಳೆಯಿಂದ (ಆಗಸ್ಟ್ 23) ಮತ್ತೆ ಸಂಸ್ಥೆಯ ಬಸ್ಗಳನ್ನು ಆರಂಭಿಸುತ್ತಿದೆ.
ಸುಮಾರು ನಾಲ್ಕು ತಿಂಗಳ ನಂತರ ತಮಿಳುನಾಡು – ಕರ್ನಾಟಕ ನಡುವೆ ಮೊದಲ ಹಂತದಲ್ಲಿ 250 ಬಸ್ಗಳು ಸಂಚರಿಸಲಿವೆ. ಈ ಬಗ್ಗೆ ಕೆಎಸ್ಆರ್ಟಿಸಿಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ನಾಳೆಯಿಂದ ಬಸ್ ಸಂಚಾರ ಆರಂಭಿಸುತ್ತಿರುವುದಾಹಿ ತಿಳಿಸಿದೆ.
ಮೊದಲ ಹಂತದಲ್ಲಿ ಸಂಚರಿಸಲಿರುವ 250 ಬಸ್ಗಳು ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ ತಿರುಕೊಯಿಲೂರು, ಕೊಯಂಬತ್ತೂರು, ತಿರುನಲ್ಲಾರ್, ತಿರುಚಿ, ಮಧುರೈ, ಕುಂಬಕೊಣಂ, ಕಾಂಚಿಪುರಂ, ಚೆನೈ ಹಾಗೂ ಊಟಿಗೆ ಸಂಪರ್ಕ ಕಲ್ಪಿಸಲಿವೆ. ಆರೋಗ್ಯದ ಹಿತದೃಷ್ಟಿಯಿಂದ ಪ್ರಯಾಣಿಕರು ಕೊರೊನಾ ನಿಯಮಾವಳಿಗಳನ್ನು ಪಾಲಿಸಿ ಬಸ್ನಲ್ಲಿ ಸಂಚರಿಸಬೇಕಿದೆ.
ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಸೌಲಭ್ಯ: ಆಗಸ್ಟ್ 23ರ ಸೋಮವಾರದಿಂದ 9 ರಿಂದ 12 ನೇ ತರಗತಿಯ ಶಾಲಾ- ಕಾಲೇಜು ಆರಂಭವಾಗಲಿರುವುದರಿಂದ ಬಿಎಂಟಿಸಿ ಬಸ್ಗಳಲ್ಲಿ ವಿದ್ಯಾರ್ಥಿಗಳಿಗೆ ವಾಸಸ್ಥಳದಿಂದ ಶಾಲಾ- ಕಾಲೇಜಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ.
2020-21 ಸಾಲಿನಲ್ಲಿ ವಿತರಣೆ ಮಾಡಿರುವ ಸ್ಮಾರ್ಟ್ ಕಾರ್ಡ್ ವಿದ್ಯಾರ್ಥಿ ಪಾಸ್ ಮತ್ತು ಈ ವರ್ಷದ ಶೈಕ್ಷಣಿಕ ದಾಖಲಾತಿ ಶುಲ್ಕ ಕಟ್ಟಿರುವ ರಶೀದಿ ತೋರಿಸಿ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಅಲ್ಲದೇ ಶಾಲಾ ಕಾಲೇಜಿನ ಐಡಿ ಕಾರ್ಡ್ ತೋರಿಸಿಯೂ ಉಚಿತ ಪ್ರಯಾಣ ಸೌಲಭ್ಯ ಪಡೆಯಬಹುದಾಗಿದೆ. ಬಿಎಂಟಿಸಿಯ ಮುಂದಿನ ಆದೇಶದವರೆಗೆ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.