ನ್ಯೂಡೆಲ್ಲಿ: ಶಬ್ದ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಅರವೀಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಒಂದು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ರಾತ್ರಿ ವೇಳೆ ಸಾರ್ವನಿಕವಾಗಿ ಲೌಡ್ ಸ್ಪೀಕರ್, ಮೈಕ್ ಬಳಕೆ ಮಾಡಿದರೆ 10 ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲು ತೀರ್ಮಾನಿಸಿದೆ.
ರಾತ್ರಿವೇಳೆ ಶಬ್ದ ಮಾಲೀನ್ಯದಿಂದ ಹಲವರಿಗೆ ಮಾನಸಿಕ ತೊಂದರೆ ಆಗುವ ಸಾಧ್ಯತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವುದು ಪ್ರಮುಖ ಅಗತ್ಯಗಳಲ್ಲಿ ಒಂದಾಗಿದೆ ಎಂದು ತೀರ್ಮಾನಿಸಿ ಈ ನಿರ್ಧಾಕ್ಕೆ ಬರಲಾಗಿದೆಯಂತೆ.
ಇನ್ನು ಮೈಕ್ ಬಳಕೆ ದಂಡದ ಮೊತ್ತವು ಶಬ್ದವು ಎಷ್ಟು ಡಿಜಿ ಇದೆ (ಶಬ್ದ ಮತ್ತು ಅದು ಮುಟ್ಟುವ ಪ್ರದೇಶ ವ್ಯಾಪ್ತಿ) ಎಂಬುದರ ಮೇಲೆ ನಿರ್ಧಾರವಾಗಲಿದೆ.
ದೆಹಲಿಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಶಬ್ದಗಳನ್ನು ಬೇರೆ ಬೇರೆ ರೀತಿ ವಿಂಗಡಿಸಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.