CrimeNEWSವಿದೇಶ

ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ರಾಕೆಟ್ ದಾಳಿ

ವಿಜಯಪಥ ಸಮಗ್ರ ಸುದ್ದಿ

ಕಾಬೂಲ್: ಕಾಬೂಲ್ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಸೋಮವಾರ 5 ರಾಕೆಟ್ ದಾಳಿ ನಡೆಸಲಾಗಿದ್ದು, ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾದ ವಾಯು ರಕ್ಷಣಾ ವ್ಯವಸ್ಥೆ ಈ ರಾಕೆಟ್‍ಗಳನ್ನು ಹಿಮ್ಮೆಟಿಸಿದೆ.

ಸೋಮವಾರ ಬೆಳಗ್ಗೆ ಕಾಬೂಲ್‍ನ ಸಲೀಂ ಕರ್ವಾನ್ ಬಳಿ ರಾಕೆಟ್ ದಾಳಿ ನಡೆಸಲಾಗಿದ್ದು, ಜೊತೆಗೆ ಗುಂಡಿನ ದಾಳಿ ಕೂಡ ನಡೆಸಲಾಗಿದೆ. ಆದರೆ ಘಟನೆ ವೇಳೆ ಗುಂಡು ಹಾರಿಸಿದವರು ಯಾರು ಎಂಬುದರ ಬಗ್ಗೆ ಪತ್ತೆಯಾಗಿಲ್ಲ.

ಅಲ್ಲದೇ 3 ಬಾರಿ ಸ್ಫೋಟಗೊಂಡ ಶಬ್ಧ ಮತ್ತು ಆಕಾಶದಲ್ಲಿ ಏನೋ ಮಿಂಚಿದಂತೆ ಕಂಡಿದೆ. ಈ ಸ್ಫೋಟಗಳ ನಂತರ ಜನರು ಸ್ಥಳ ತೊರೆದು ಹೋಗಿರುವುದಾಗಿ ಅಲ್ಲಿನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಯೋತ್ಪಾದಕರಿಗೆ ದಾಳಿ ನಡೆಸುವ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ, ಸ್ಫೋಟಕ ತುಂಬಿದ ವಾಹನವನ್ನು ಧ್ವಂಸಗೊಳಿಸಿದ ಬಳಿಕ ಇದೀಗ ಮತ್ತೆ ಈ ಘಟನೆ ನಡೆದಿದೆ.

ಅಲ್ಲದೇ ಘಟನೆ ಕುರಿತಂತೆ ಅಫ್ಘಾನಿಸ್ತಾನದ ಪತ್ರಕರ್ತರೊಬ್ಬರು ಕಾಬೂಲ್‍ನ ಲಾಬ್ ಇ ಜಾರ್‍ನಿಂದ ಬೆಳಗ್ಗೆ 6:40ಕ್ಕೆ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನದ ಕಡೆಗೆ ಎರಡು ರಾಕೆಟ್ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

Leave a Reply

error: Content is protected !!
LATEST
ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ ಪ್ರತಿಷ್ಠಿತ ಶಾಲೆಗಳಿಗೆ ಸೇರ ಬಯಸುವ ಮಕ್ಕಳಿಂದ ಅರ್ಜಿ ಆಹ್ವಾನ: ಷರತ್ತು ಅನ್ವಯ ವಸತಿ ಶಾಲೆಗಳಲ್ಲಿ ಪ್ರಥಮ ಪಿಯುಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ KSRTC: ₹8.76 ಲಕ್ಷ ನಷ್ಟವುಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಮುಖ್ಯ ಕಾರ್ಯದರ್ಶ... BMTC ಚಾಲಕರಿಗೆ ಕೂಡಲೇ ವೇತನ ಪಾವತಿಸಿ: ಎಎಪಿಯ ಜಗದೀಶ್ ವಿ. ಸದಂ ಆಗ್ರಹ ಬಸವನಹಳ್ಳಿ: ನಿವೃತ್ತ ಸಹಾಯಕ ತೋಟಗಾರಿಕಾ ಇಲಾಖೆಯ ನಿರ್ದೇಶಕ ಚಿಕ್ಕಮಾಯಿಗೌಡರ ಪತ್ನಿ ಸಿದ್ದಮ್ಮ ನಿಧನ KSRTC ನೌಕರರ 2024ರ ವೇತನ ಪರಿಷ್ಕರಣೆ, 38 ತಿಂಗಳ ಹಿಂಬಾಕಿ ಬಿಡುಗಡೆಗೆ ಜೂನ್‌ 6ರಬಳಿಕ ನಿರ್ಧಾರ: ರಾಮಲಿಂಗಾರೆಡ್ಡಿ ಚಿಕ್ಕಮಗಳೂರಲ್ಲಿ ಧಾರಾಕಾರ ಮಳೆ- ಬೆಂಗಳೂರಿಗೂ ಆಗಮಿಸಲಿದ್ದಾನೆ ವರುಣ BMTC: ವೇತನಕ್ಕೆ ಆಗ್ರಹಿಸಿ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರ ದಿಢೀರ್‌ ಪ್ರತಿಭಟನೆ ನಮ್ಮಲ್ಲಿ ಒಳಜಗಳ ಗಿಳಜಗಳ ಯಾವುದೂ ಇಲ್ಲ : ಸಿಎಂ ಸಿದ್ದರಾಮಯ್ಯ