ದಾವಣಗೆರೆ: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಇತ್ತ ಶಾಸಕ ಎಂ.ಪಿ. ರೇಣುಕಾಚಾರ್ಯ ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್ ಮನುಷ್ಯ ಎಂದು ವಾಗ್ದಾಳಿಯನ್ನು ನಡೆಸಿದ್ದಾರೆ.
ಇಂದು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನಗೂ ಮತ್ತು ಸಾರಿಗೆ ನೌಕರರಿಗೂ ಏನು ಸಂಬಂಧ. ನಿಜವಾಗಲು ನೀನು ತೈರ ಮುಖಂಡನಾಗಿದ್ದರೆ ಅವರ ಸಮಸ್ಯೆ ಬಗ್ಗೆ ಚರ್ಚೆ ಮಾಡು. ಎಲ್ಲಿ ರೈತರು ಸೇರಿರುತ್ತಾರೆ ಅಲ್ಲೋಗಿ ರೈತರ ಪರ ಎಂದು ಹೇಳುತ್ತೀಯೇ ಇಲ್ಲಿ ಬಂದು ಸಾರಿಗೆ ನೌಕರರ ಪರ ಎಂದು ಧರಣಿ ನಡೆಸುತ್ತೀಯೆ ಇದನ್ನು ನೋಡಿದರೆ ನಿನೊಬ್ಬ ದಳ್ಳಾಳಿಗಳ ಮುಖಂಡ ಇದ್ದಂತೆ ಎಂದು ಕಿಡಿಕಾರಿದರು.
ಸಾರಿಗೆ ನೌಕರರ ಇಂದಿನಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಈ ಹೊತ್ತಿನಲ್ಲಿ ಅವರ ಈ ಬೇಜವಾಬ್ದಾರಿತನದ ಹೇಳಿಕೆಯಿಂದ ಈ ಹೋರಾಟ ಯಾವ ಸ್ವರೂಪ ತಳೆಯಲಿದೆಯೋ ಎಂಬುವುದನ್ನು ಕಾದು ನೋಡಬೇಕಿದೆ.