ಕೊಳ್ಳೇಗಾಲ: ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ವೆಂಕಟೇಶ್ವರ ಮಹಲ್ ನಲ್ಲಿ ಬ್ಲಾಕ್ ವ್ಯಾಪ್ತಿಯ ಪ್ರತಿ ಪಂಚಾಯ್ತಿಯಲ್ಲಿನ ಉಸ್ತುವಾರಿಗಳಿಗೆ ಹಾಗೂ ಡಿಜಿಟಲ್ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಾಗಾರದಲ್ಲಿ Zoom App ಹಾಗೂ ಸೋಶಿಯಲ್ ಮೀಡಿಯಾದ ಬಗ್ಗೆ ತರಬೇತಿ ನೀಡಲಾಯಿತು. ನಂತರ ಜುಲೈ 2ರಂದು ನಡೆಯುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಆಯಾ ಪಂಚಾಯ್ತಿ ಸ್ಥಳಗಳಲ್ಲೇ ಕುಳಿತು ZOOM APP ಮೂಲಕ ಭಾಗವಹಿಸುವ ಬಗ್ಗೆ ಡೆಮೋ ತೋರಿಸಲಾಯಿತು.
ಇದಕ್ಕೆ ನೇರವಾಗಿ ಕೆಪಿಸಿಸಿ ಕಚೇರಿಯಿಂದಲೇ ನಮ್ಮನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಆರ್.ಧ್ರುವನಾರಾಯಣ್, ಕಾರ್ಯದರ್ಶಿಗಳಾದ ಎ.ಎನ್ ನಟರಾಜ್ ಗೌಡ, ಹಾಗೂ ವನಿತಾ ಅವರು ಎಲ್ಲಾ ಉಸ್ತುವಾರಿಗಳಿಗೆ ಹಾಗೂ ಡಿಜಿಟಲ್ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಶಾಸಕರಾದ ಎಸ್ ಜಯಣ್ಣ, ಎಸ್. ಬಾಲರಾಜ್ ವಹಿಸಿದ್ದರು. ಡಿಸಿಸಿ ಅಧ್ಯಕ್ಷ ಪಿ.ಮರಿಸ್ವಾಮಿ, ಕೆಪಿಸಿಸಿಯಿಂದ ಉಸ್ತುವಾರಿಗಳಾಗಿ ಆಗಮಿಸಿದ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೊಟೇಶ್, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸತೀಶ್, ಯುತ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್, ಮುಖಂಡರಾದ ಶಾಂತರಾಜು, ರಾಜೇಂದ್ರ, ಕೆಪಿಸಿಸಿ ಸಾಮಾಜಿಕ ಜಾಲತಾಣದ ಸಂಯೋಜಕ ಮಹದೇವಸ್ವಾಮಿ ಎನ್ ಹೊಂಗನೂರು, ಜಿ.ಪಂ, ತಾ.ಪಂ, ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Super