ಮಂಡ್ಯ: ಕೆಆರ್ಎಸ್ ಬಹುತೇಕ ಪೂರ್ತಿ ಭರ್ತಿಯಾಗಿದ್ದು, ಮುಖ್ಯಮಂತ್ರಿಗಳ ಬಾಗಿನ ಅರ್ಪಣೆಗೆ ಸಮಯ ನಿಗದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಕೊಡಗಿನ ತಲಕಾವೇರಿಯಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲರಿವ ಕೆಆರ್ಎಸ್ 124.05 ಅಡಿ ವರೆಗೆ ಅಂದರೆ ಬಹುತೇಕ ಪೂರ್ಣವಾಗಿ ತುಂಬಿ ತುಳುಕುತ್ತಿದೆ. ಇದರಿಂದ ಅನ್ನದಾತನ ಮೊಗದಲ್ಲೂ ಮಂದಹಾಸ ಬೀರಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಇನ್ನು ತಮಿಳುನಾಡು ತೆಗೆಯುತ್ತಿದ್ದ ಕಾವೇರಿ ಕ್ಯಾತೆಗೂ ಇದರಿಂದ ಈ ವರ್ಷ ಪೂರ್ಣವಿರಾಮ ಬಿದ್ದಂತಾಗಿದ್ದು, ಅಲ್ಲಿನ ರೈತರು ಬಹು ಖುಷಿಯಿಂದಲೇ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ.
ನಮ್ಮ ರಾಜಧಾನಿ ಬೆಂಗಳೂರಿಗೆ ನಿತ್ಯ ಜೀವರಕ್ಷಕವಾಗಿರುವ ಕಾವೇರಿ ತುಂಬಿರುವುದು ರಾಜ್ಯದ ರಾಜಕಾರಣಿಗಳಿಗೂ ಒಂದು ರೀತಿಯ ಸಂತಸವನ್ನು ಇಮ್ಮಡಿಗೊಳಿಸಿದೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail