ಕರ್ನಾಟಕದಲ್ಲಿ ಮರಾಠ ಸಮುದಾಯ ಅಭ್ಯುದಯಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶ ಹೊರಡಿಸಿದೆ. ಇದು ಆ ಸಮುದಾಯಕ್ಕೆ ಒದಗಿದ ತಾತ್ಕಾಲಿಕ ಪರಿಹಾರ ಎಂಬಂತೆ ಕಂಡರೂ ಭವಿಷ್ಯದಲ್ಲಿ ಆಶಾದಾಯಕ ವಿಚಾರವಾಗೇನೂ ಉಳಿದಿಲ್ಲ.
ಮರಾಠರು ಕ್ಷತ್ರಿಯರೆಂದು ಗುರುತಿಸಿಕೊಳ್ಳುವಲ್ಲಿ ಪ್ರಮುಖರು. ಈ ರೀತಿಯ ವಿಚಾರ ಮನಗಂಡು ವಾಣಿಜ್ಯೋದ್ಯಮಿ ಹಾಗೂ ಚಿಂತಕ ಹರಿ ಎಲ್. ಖೋಡೆ ಅವರು ಸಮಸ್ತ ಕ್ಷತ್ರಿಯ ಜನಾಂಗ ಒಂದೆಡೆ ಸಂಘಟಿತರಾಗಬೇಕು (ಪ್ರಸ್ತುತ ಸರ್ಕಾರ ವೀರಶೈವ ಲಿಂಗಾಯತ ಸಮುದಾಯವನ್ನು ಒಂದು ಮಾಡಿ ನಿಗಮ ಮಾಡಿದಂತೆ) ಎಂಬ ಕರೆ ನೀಡಿದರಲ್ಲದೆ ಯಾತ್ರೆ, ಸಮಾವೇಶವನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಯಶಸ್ವಿಯಾಗಿ ಸಂಘಟಿಸಿದ್ದರು.
ಪ್ರಸ್ತುತ ಮರಾಠ ನಿಗಮ ಸ್ಥಾಪನೆ ಹರಿ ಎಲ್. ಖೋಡೆ ಪ್ರತಿಪಾದಿಸಿದ ವಿಚಾರಕ್ಕೆ ವಿರುದ್ಧವಾಗಿದೆ ಮತ್ತು ಕನ್ನಡಿಗರಾಗಿದ್ದ ಮರಾಠಿಗರನ್ನು ಮುಖ್ಯವಾಹಿನಿಯಿಂದ ಪ್ರತ್ಯೇಕಗೊಳಿಸುವ ವಿಚಾರವಾಗಿದೆ.
ನಮ್ಮ ಘನ ಸರ್ಕಾರಕ್ಕೆ ಕಾಳಜಿ ಇದ್ದರೆ ಸಮಸ್ತ ಕ್ಷತ್ರಿಯ ಕರ್ನಾಟಕ ನಿಗಮ ಎಂದು ಸ್ಥಾಪಿಸಬೇಕಿತ್ತು. ಯಾವುದೇ ವ್ಯವಸ್ಥೆಗೆ ಕ್ಷತ್ರಿಯರ ಅಸ್ತಿತ್ವ ಮತ್ತು ನಂಬಿಕೆ ನಿರಾಕರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ದೈವ ನೀಡಿದ ಕೊಡುಗೆಯಾಗಿರುತ್ತದೆ. ಆಳುವ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು.
l ವೆಂಕಟರಾಜು ಮಾಜಿ ಸದಸ್ಯರು, ಕರ್ನಾಟಕ ನಾಟಕ ಅಕಾಡೆಮಿ