ಮಥುರಾ: ಯೋಗಗುರು ಬಾಬಾ ರಾಮದೇವ್ ಆನೆ ಮೇಲೆ ಯೋಗ ಮಾಡುವ ವೇಳೆ ಆಯತಪ್ಪಿ ಜಾರಿ ಬಿದ್ದಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಸ್ಥಿತ ರಮಣರೇತಿ ಆಶ್ರಮಕ್ಕೆ ಬಾಬಾ ರಾಮದೇವ್ ಭೇಟಿ ನೀಡಿದ್ದ ವೇಳೆ ಆನೆಯೊಂದನ್ನು ಏರಿ ಯೋಗದಬಗ್ಗೆ ತಿಳಿಸಿಕೊಡುತ್ತಿದ್ದ ವೇಳೆ ಆನೆ ಹೊರಳಾಡಿದೆ. ಇದರಿಂದ ಆಯ ತಪ್ಪಿದ ಅವರು ನೆಲಕ್ಕೆ ಉರುಳಿದ್ದಾರೆ. ಇದರಿಂದ ಅಲ್ಲಿದ್ದ ಜನರು ಗಾಬರಿಗೊಂಡರು.
ಆದರೆ ಕೆಳಗೆ ಬಿದ್ದ ಕೂಡಲೇ ಬಾಬಾ ರಾಮದೇವ್ ತಾವೇ ಎದ್ದು ಸಹಜವಾಗಿ ನಡೆದುಕೊಂಡು ಹೋಗಿದ್ದಾರೆ. ಬಿದ್ದ ಕೂಡಲೇ ನೋವು ಕಾಣಿಸದಿದ್ದರೂ ಬಳಿಕ ಬಾಬಾ ಅವರ ಬೆನ್ನು ಮೂಳೆಗೆ ಏಟು ಬಿದ್ದಿದ್ದು ನೋವು ಹೆಚ್ಚಾಗಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Baba ramdev fell off from an elephant ???? while doing yoga????on it , has sustained severe injuries in spine. #GetWellSoon #BabaRamdev pic.twitter.com/9SJYXTBOb8
— Niharika Dutta (@DuttNiharika) October 13, 2020