ಮೈಸೂರು: ನಗರಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಪಾಲಿಕೆಯನ್ನು 2 ದಿನ ಸೀಲ್‌ಡೌನ್ ಮಾಡಲಾಗಿದೆ.
ಕಚೇರಿಯನ್ನು ಸೀಲ್‌ಡೌನ್ ಮಾಡುವು ಮುನ್ನ ಇಡೀ ಪಾಲಿಕೆಯನ್ನು ಸ್ಯಾನಿಟೈಸ್ ಮಾಡಲಾಯಿತು. ಕೊರೊನಾ ಪಾಸಿಟಿವ್ ಸಿಬ್ಬಂದಿಯೊಂದಿಗೆ ಪ್ರಥಮ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಸೋಂಕು ಇರುವ ನೌಕರನ ಸಂಪರ್ಕಕ್ಕೆ ಬಂದಿದ್ದ ಪಾಲಿಕೆ ಆಯುಕ್ತರು ಸಹ ಹೋಂ ಕ್ವಾರೈಂಟೈನ್ ಆಗಿದ್ದಾರೆ. ಜತೆಗೆ ಪಾಲಿಕೆಯ ಎಲ್ಲಾ ನೌಕರರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಇನ್ನು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿ ಜಯಂತ್ ಕೂಟ ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ.
ಇನ್ನು ಈಗಾಗಲೇ 30 ಸಿಬ್ಬಂದಿಯ ಸ್ವಾಬ್ ಟೆಸ್ಟ್ ಮಾಡಿಸಲಾಗಿದೆ. ನಾಳೆ ಅಥವಾ ನಾಡಿದ್ದು ವರದಿ ಬರಲಿದೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ತಿಳಿಸಿದ್ದಾರೆ.