NEWSದೇಶ-ವಿದೇಶ

ದೇಶದ ಜನರ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ ಕೇಂದ್ರ ಸರ್ಕಾರ

ಶಿಪ್ಪಿಂಗ್ ಖಾತೆಯ ಸಹಾಯಕ (ಪ್ರಭಾರ) ಸಚಿವ ಮನ್‌ಸುಖ್ ಮಾಂಡವೀಯ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ನ್ಯೂಡೆಲ್ಲಿ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ಧ ಧೈರ್ಯದಿಂದ ಹೋರಾಟ ನಿರತವಾಗಿರುವ ದೇಶದ ಆರ್ಥಿಕತೆ ಮತ್ತು ಜನರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರ ಘೋಷಣೆಗಳು ಉತ್ತಮವಾಗಿವೆ ಎಂದು ಶಿಪ್ಪಿಂಗ್ ಖಾತೆಯ ಸಹಾಯಕ (ಪ್ರಭಾರ) ಮತ್ತು ರಾಸಾಯನಿಕಗಳು ಹಾಗೂ ರಸಗೊಬ್ಬರ ಖಾತೆ  ಸಹಾಯಕ ಸಚಿವ ಮನ್‌ಸುಖ್ ಮಾಂಡವೀಯ ತಿಳಿಸಿದ್ದಾರೆ.

ಹಣಕಾಸು ಸಚಿವರು ತಮ್ಮ ಮೊದಲ ಕಂತಿನಲ್ಲಿ ಕೆಲಸಕ್ಕೆ ಮರಳುವ ನಿಟ್ಟಿನಲ್ಲಿ ಕ್ರಮಗಳನ್ನು ಪ್ರಕಟಿಸಿದರು. ಉದ್ಯೋಗಿಗಳನ್ನು, ಉದ್ಯೋಗದಾತರನ್ನು, ವ್ಯಾಪಾರೋದ್ಯಮಗಳನ್ನು ಅದರಲ್ಲೂ ವಿಶೇಷವಾಗಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ಪಾದನೆ ಪುನರಾರಂಭಿಸುವ ನಿಟ್ಟಿನಲ್ಲಿ ಮತ್ತು ಕೆಲಸಗಾರರಿಗೆ ಪ್ರಯೋಜನಕಾರಿ ಉದ್ಯೋಗಕ್ಕೆ ಮರಳಲು ಸಮರ್ಥವಾಗುವಂತಹ ಕ್ರಮಗಳನ್ನು ಘೋಷಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಬ್ಯಾಂಕಿಂಗೇತರ ಸಂಸ್ಥೆಗಳನ್ನು (ಎನ್.ಬಿ.ಎಫ್.ಸಿ.ಗಳು) ಹೌಸಿಂಗ್ ಫೈನಾನ್ಸ್ ಕಂಪೆನಿಗಳು (ಎಚ್.ಎಫ್.ಸಿ.ಗಳು ) ಕಿರು ಹಣಕಾಸು ವಲಯ ಮತ್ತು ವ್ಯಾಪಾರೋದ್ಯಮಗಳಿಗೆ ತೆರಿಗೆ ಪರಿಹಾರ,ಸಾರ್ವಜನಿಕ ಖರೀದಿಯಲ್ಲಿ ಗುತ್ತಿಗೆದಾರರಿಗೆ ಗುತ್ತಿಗೆ ಬದ್ದತೆಗಳಿಗೆ ಪರಿಹಾರ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಅನುಸರಣಾ ಪರಿಹಾರಗಳು ವ್ಯಾಪಾರೋದ್ಯಮಕ್ಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡುತ್ತವೆ ಎಂದು ಮಾಂಡವೀಯ ಹೇಳಿದರು.

ಎರಡನೇ ಕಂತಿನಲ್ಲಿ ಪ್ರಕಟಿಸಿದ ಕ್ರಮಗಳು ನಿರ್ದಿಷ್ಟವಾಗಿ ವಲಸೆ ಕಾರ್ಮಿಕರು , ಬೀದಿ ಬದಿ ವ್ಯಾಪಾರಿಗಳು , ವಲಸೆ ಬಂದ ನಗರಗಳ ಬಡವರು, ಸಣ್ಣ ವ್ಯಾಪಾರಿಗಳು , ಸ್ವ ಉದ್ಯೋಗಿಗಳು , ಸಣ್ಣ ರೈತರು ಎದುರಿಸಿದ ಕಷ್ಟ ಪರಿಸ್ಥಿತಿಯ ಬಗ್ಗೆ ಮತ್ತು ವಸತಿ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದು, ಅದನ್ನು ಉತ್ತಮಪಡಿಸುವ ಇರಾದೆಯನ್ನು ಹೊಂದಿವೆ. ಮೋದಿ ಸರಕಾರ ಬಡವರ ಪರ ನೀತಿಗಳಲ್ಲಿ ನಂಬಿಕೆ ಇಟ್ಟಿದೆ ಮತ್ತು ಅವರಿಗೆ ಸಹಾಯ ಮಾಡಲು ಹಾಗು ಬಡವರನ್ನು ಬೆಂಬಲಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

ಮೂರನೇ ಕಂತಿನಲ್ಲಿ ದೇಶದ ಅನ್ನ ದಾತನ ಆಸಕ್ತಿಗಳ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಹೇಳಿರುವ ಮಾಂಡವೀಯ ರೈತರು ಮತ್ತು ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಪರಿಗಣಿಸಲ್ಪಟ್ಟಿದ್ದಾರೆ ಎಂದರು. ಕೃಷಿ, ಮೀನುಗಾರಿಕೆ, ಪಶುಸಂಗೋಪನೆ, ಜೇನು ಕೃಷಿ, ವೈದ್ಯಕೀಯ ಮಹತ್ವದ ಔಷಧೀಯ ಗಿಡಗಳು, ಪೂರೈಕೆ ಸರಪಳಿ ಇತ್ಯಾದಿಗಳಿಗೆ ಇದರಲ್ಲಿ ಆದ್ಯತೆ ನೀಡಲಾಗಿದೆ.

ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಅದಕ್ಕೆ ಸಕಾಲದಲ್ಲಿ, ಆದ್ಯತೆಯಾಧಾರದಲ್ಲಿ ಮತ್ತು ಸೂಕ್ತ ರೀತಿಯ ಪ್ರತಿಕ್ರಿಯೆಗಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಮಾಂಡವೀಯ  ಪ್ರಧಾನ ಮಂತ್ರಿ ಮೋದಿ ಅವರು ಘೋಷಿಸಿದ ನಮ್ಮ ಜಿ.ಡಿ.ಪಿ.ಯ 10 % ರಷ್ಟಿರುವ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಅನುಷ್ಠಾನದಿಂದಾಗಿ ನಾವು ಇನ್ನಷ್ಟು ಬಲಿಷ್ಠರಾಗಲಿದ್ದೇವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ   https://play.google.com/store/apps/detail

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ