Please assign a menu to the primary menu location under menu

NEWSಕ್ರೀಡೆದೇಶ-ವಿದೇಶ

ಜನಾಂಗೀಯ ದೌರ್ಜನ್ಯ ವಿರುದ್ಧ ಪ್ರತಿಭಟನೆಗೆ ಐಸಿಸಿ ಬೆಂಬಲ

ವಿಜಯಪಥ ಸಮಗ್ರ ಸುದ್ದಿ

ನ್ಯೂ ಡೆಲ್ಲಿ:  ಬರುವ ತಿಂಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಆರಂಭವಾಗಲಿದ್ದು,  ವೇಳೆ ಆಟಗಾರರು ಅಮೆರಿಕ ಜಾರ್ಜ್‌ ಫ್ಲಾಯ್ಡ್‌ ಅವರ ಮೇಲಿನ ಜನಾಂಗೀಯ ದೌರ್ಜನ್ಯವನ್ನು ಪ್ರತಿಭಟಿಸುವಾಗ ತಿಳಿವಳಿಕೆಯಿಂದ ವರ್ತಿಸಬೇಕೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಟಗಾರರಲ್ಲಿ ಮನವಿ ಮಾಡಿದೆ.

ಅಮೆರಿಕದಲ್ಲಿ ಇತ್ತೀಚೆಗೆ ಆಫ್ರೋ ಅಮೆರಿಕನ್ ವ್ಯಕ್ತಿ ಫ್ಲಾಯ್ಡ್‌ ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟಿದ್ದಾರೆ.  ಹೀಗಾಗಿ ಅದು ಜನಾಂಗೀಯ ದ್ವೇಷಕ್ಕೆ ತಿರುಗಿ ಪ್ರತಿಭಟನೆಗಳು ತೀವ್ರವಾಗಿವೆ. ಇದರಲ್ಲಿ ಕೆಲ ಖ್ಯಾತನಾಮ ಕ್ರಿಕೆಟಿಗರು ಜನಾಂಗೀಯ ತಾರತಮ್ಯವನ್ನು ವಿರೋಧಿಸಿ ಹೇಳಿಕೆಗಳನ್ನು ನೀಡಿದ್ದು, ಅವರು ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಯಾವರೀತಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಐಸಿಸಿ ತಿಳಿಸಿದೆ.

ಮೈದಾನದೊಳಗೆ ರಾಜಕೀಯ ಸಂಬಂಧಿ ವಿಷಯಗಳ ಕುರಿತು ಯಾವುದೇ ಕ್ರಿಯೆಗೆ ಇದುವರೆಗೆ ಐಸಿಸಿಯು ಅವಕಾಶ ನೀಡಿಲ್ಲ. ಕಳೆದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರು ಸೇನೆಯ ಲಾಂಛನವನ್ನು ತಮ್ಮ ಕೈ ಗ್ಲೌಸ್‌ ಮೇಲೆ ಹಾಕಿಸಿಕೊಂಡಿದ್ದರು ಅದನ್ನು ರಾಜಕೀಯ ಸಂಕೇತವೆಂದು ಹೇಳಿದ್ದ ಐಸಿಸಿ ಧೋನಿಗೆ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚತ್ತ ಧೋನಿ ಮುಂದಿನ ಪಂದ್ಯಗಳಲ್ಲಿ  ಲಾಂಛನ ತೆಗೆದಿದ್ದರು ಎಂದು ತಿಳಿಸಿದೆ.

ಇನ್ನೂ ಹೇಳಬೇಕೆಂದರೆ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಡುತ್ತೇವೆ. ಜತೆಗೆ ಕ್ರೀಡೆಯಲ್ಲಿ ವೈವಿಧ್ಯತೆಯನ್ನು ನಾವು ಬೆಂಬಲಿಸುತ್ತೇವೆ. ಆದ್ದರಿಂದ ಫ್ಲಾಯ್ಡ್‌ ವಿಷಯದಲ್ಲಿ ಪ್ರತಿಭಟನೆ ನಡೆಸುವ ಆಟಗಾರರಿಗೆ ನಮ್ಮ ಬೆಂಬಲವು ಇರಲಿದೆ.  ಸಮಾಜದ ಹಿತಕ್ಕಾಗಿ ಅವರಿಗೆ ವೇದಿಕೆ ಒದಗಿಸಲು ಸಿದ್ಧರಿದ್ದು ಹೋರಾಟಕ್ಕೆ ಬೇಕಾದ ಸಹಕಾರ ನೀಡುತ್ತೇವೆ. ಆದರೆ ಅದು ತನ್ನ ಗುರಿಯ ಮಾರ್ಗವನ್ನು ಬದಲಿಸಬಾರದು ಎಂದು ಐಸಿಸಿ ಸಲಹೆ ನೀಡಿದೆ..

ಈ ವಿಷಯದಲ್ಲಿ ಕೆಲ ತಿಳಿವಳಿಕೆ ಯುಕ್ತ ನಿಬಂಧನೆಗಳನ್ನು ರೂಪಿಸುತ್ತಿದ್ದೇವೆ. ಪಂದ್ಯದ ಅಧಿಕಾರಿಗಳು ನಿಯಮಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಿದ್ದಾರೆ. ಕಪ್ಪು ಜನಾಂಗಕ್ಕೆ ಬೆಂಬಲ ವ್ಯಕ್ತಪಡಿಸುವ ಬ್ಲಾಕ್ ಲೈವ್ ಮ್ಯಾಟರ್ ಅಭಿಯಾನ ಕೂಡ ಆರಂಭವಾಗಿದೆ. ಅದರಲ್ಲಿ ಮಂಡಿಯೂರಿ ಕುಳಿತು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದೆ.

ಬರುವ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು ಇದೇ ರೀತಿ ಪ್ರತಿಭಟನೆ ನಡೆಸುವ ಕುರಿತು ಯೋಚಿಸುತ್ತಿದ್ದಾರೆ ಎಂದು ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಬೌಲರ್ ಜೋಹ್ರಾ ಆರ್ಚರ್ ಈ ಬಗ್ಗೆ ಮಾತನಾಡಿದ್ದು, ವೈಯಕ್ತಿಕವಾಗಿ ನಾನು ಈ ವಿಷಯದ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದೆ. ಯಾರೂ ಹೀಗೆ ಆದಾಗ ಸುಮ್ಮನಿರಬಾರದು.  ಕಾರಣ ಜನಾಂಗೀಯ ನಿಂದನೆ ನ್ಯಾಯ ಸಮ್ಮತವಲ್ಲ ಎಂದು ತಿಳಿಸಿದ್ದಾರೆ.

ಬಾರ್ಬಡೀಸ್‌ ಮೂಲದ ಆರ್ಚರ್ ಅವರನ್ನು ಕಳೆದ ನವೆಂಬರ್ ನಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಕೆಲವು ಟೆಸ್ಟ್ ಪಂದ್ಯದಲ್ಲಿ ಕೆಲವು ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿದ್ದರು. ಇದನ್ನು ಐಸಿಸಿ ಖಂಡಿಸುತ್ತದೆ ಎಂದು ಹೇಳಿಕೆ ನೀಡಿದೆ.

Leave a Reply

error: Content is protected !!
LATEST
ಹಾವೇರಿ: ಸರ್ಕಾರಿ ಬಸ್ ಹತ್ತಲು ಹೋದ ವೃದ್ಧೆ ಕಾಲುಗಳ ಮೇಲೆ ಹಿಂಬದಿ ಚಕ್ರ ಹರಿದು ಕಾಲುಗಳು ಕಟ್‌ KSRTC ಮಡಿಕೇರಿ: ಸಹೋದ್ಯೋಗಿ ಕಂಡಕ್ಟರ್‌ ಕೊಲ್ಲುವ ಬೆದರಿಕೆ ಹಾಕಿ ಗಾಳಿಯಲ್ಲಿ ಗುಂಡ್ಹಾರಿಸಿದ ಡ್ರೈವರ್‌ ಬಂಧನ KKRTC ರಾಯಚೂರು: ಲಿಂಗಸುಗೂರು ಘಟಕ ವ್ಯವಸ್ಥಾಪಕ, ಡಿಸಿ ಅಮಾನತಿಗೆ ಕರವೇ ಆಗ್ರಹ ಮೈಸೂರು: ಸಾಲದ ಸುಳಿಗೆ ಸಿಲುಕಿದ KSRTC ಕಂಡಕ್ಟ‌ರ್: ನಾಲೆಗೆ ಹಾರಿ ಆತ್ಮಹತ್ಯೆ ಎಸ್‌.ಎಂ.ಕೃಷ್ಣ ಇನ್ನಿಲ್ಲ- ಪ್ರೇಮ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮುಶೋಕ ಸಂದೇಶ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಿಧನಕ್ಕೆ ಸಿಎಂ, ಮಾಜಿ ಸಿಎಂಗಳು ಸೇರಿ ಅನೇಕ ಗಣ್ಯರ ಸಂತಾಪ ಮಾಜಿ ಸಿಎಂ SMK ನಿಧನ: ನಾಳೆ ಶಾಲಾ- ಕಾಲೇಜು, ಕಚೇರಿಗಳಿಗೆ ರಜೆ ಘೋಷಣೆ ಅಕ್ರಮ ಪಡಿತರ ವಿರುದ್ಧ ವಿಶೇಷ ಕಾರ್ಯಾಚರಣೆ: ಆಹಾರ ಸಚಿವ ಮುನಿಯಪ್ಪ KSRTC ನಿವೃತ್ತ ನೌಕರರಿಗೆ ಫ್ರೀ ಪಾಸ್‌ ಕೊಡಿ: ಹಣ ಕಟ್ಟಿದ ಮೇಲೆ ಪಾಸ್‌ ನೀಡುವುದು ಸಲ್ಲ BMTC- ಅನ್ಯ ಭಾಷೆ ಆಧಾರ್‌ಕಾರ್ಡ್‌ ವಿಳಾಸ ಕರ್ನಾಟಕದಾಗಿದ್ದಲ್ಲಿ ಮಾನ್ಯ ಮಾಡಿ: ಸಿಟಿಎಂ ಆದೇಶ