ಚೆನ್ನೈ: ನಿವಾರ್ ಚಂಡಮಾರುತಕ್ಕೆ ತಮಿಳುನಾಡು ಮತ್ತು ಆಂಧ್ರಪ್ರದೇಶ ನಲುಗಿದ್ದು, ವಿಮಾನ ಹಾರಾಟ ಮತ್ತು ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ.
ನಿವಾರ್ ಸೈಕ್ಲೋನ್‌ಗೆ ತಮಿಳುನಾಡಿನ ಚೆನ್ನೈನಲ್ಲಿ ಹೋರ್ಡಿಂಗ್ ಒಂದು ಬಿದ್ದು ಬೈಕ್ ಸವಾರ ಮೃತಪಟ್ಟಿದ್ದಾರೆ. ಅಲ್ಲದೇ ಪಾದಚಾರಿಯೊಬ್ಬರು ನಡೆದು ಬರುತ್ತಿದ್ದಾಗ ಮರವೊಂದು ಆತನ ಮೇಲೆ ಬಿದ್ದು ಅನಾಹುತ ಸಂಭವಿಸಿದೆ.
ಇನ್ನು ಆಂಧ್ರಪ್ರದೇಶದಲ್ಲೂ ತನ್ನ ರೌದ್ರನರ್ತನವನ್ನು ನಿವಾರ್ ಮುಂದುವರಿಸಿರುವುದರಿಂದ ಬೆಟ್ಟ ಗುಡ್ಡಗಳು ಕುಸಿದು, ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತಿರುಮಕ್ಕೆ ಭಕ್ತರು ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಇನ್ನು ಕರ್ನಾಟಕದಲ್ಲೂ ನಿವಾರ್ ಚಂಡಮಾರುತ್ತದ ಪ್ರಭಾವ ಸ್ವಲ್ಪ ಬೀರುತ್ತಿದ್ದು, ಇಂದು ಮುಂಜಾನೆಯಿಂದಲೂ ಬೆಂಗಳೂರಿನಲ್ಲಿ ತುಂತುರು ಮಳೆಯಾಗುತ್ತಿದೆ. ಇನ್ನು ಚಾಮರಾಜನಗರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರುತದ ಪ್ರಭಾವ ತೀವ್ರಗೊಳ್ಳುವ ನಿರಿಕ್ಷೆ ಇರುವುದರಿಂದ ವಿಮಾರ ಹಾರಾಟವನ್ನು ರದ್ದುಪಡಿಸಲಾಗಿದೆ. ಜತೆಗೆ ಹೈ ಅಲರ್ಟ್ ಘೋಷಿಸಲಾಗಿದೆ.
ಇಂದು ಮಲೆ ಮಹಾದೇಶ್ವರ ಬಟ್ಟಕ್ಕೆ ಹೋಗಿದ್ದ ಸಿಎಂ ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ನಲ್ಲಿ ಬರುವುದಕ್ಕೆ ನಿವಾರ್ ಅಡ್ಡಿಯಾದ್ದರಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.