- ವಿಜಯಪಥ ಸಮಗ್ರ ಸುದ್ದಿ
ಬನ್ನೂರು: ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಲಂಚಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಇಂದು ನಡೆದಿದೆ.
ತಿ.ನರಸೀಪುರ ತಾಲೂಕಿನ ಬನ್ನೂರು ಪುರಸಭೆಯ ಮುಖ್ಯಾಧಿಕಾರಿ ಪುಷ್ಪಲತಾ ಅವರು ಕಾಂಗಾರಿ ಬಿಲ್ ಪಾಸ್ ಮಾಡಲು ಗುತ್ತಿಗೆದಾರರೊಬ್ಬರಿಂದ ಲಂಚಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅವರನ್ನು ಬಲೆಗೆ ಬೀಳಿಸಿದ್ದಾರೆ.
ಕಾಮಗಾರಿಯೊಂದರ 13 ಲಕ್ಷ ರೂ. ಬಿಲ್ ಮಾಡಲು ಶೇ.3ರಂತೆ ಲಂಚ ಕೇಳಿದಕ್ಕೆ ಗುತ್ತಿಗೆದಾರ ಆನಂದ್ ಭೋವಿ ಎಂಬುವುದು ಎಸಿಬಿಗೆ ದೂರು ನೀಡಿದ್ದರು. ಅದರಂತೆ ಬುಧವಾರ ಮಧ್ಯಾಹ್ನ 25 ಸಾವಿರ ರೂ. ಲಂಚದ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪುಷ್ಪಲತಾ ಅವರನ್ನು ಬಂಧಿಸಿ 25 ಸಾವಿರ ರೂ.ಗಳನ್ನು ವಶಕ್ಕೆ ಪಡೆದರು.
ಇದೇ ಅಲ್ಲದೇ ಪುಷ್ಪಲತಾ ಅವರು ಸಣ್ಣಪುಟ್ಟ ಕೆಲಸಗಳಿಗೂ ಲಂಚ ಪಡೆಯುತಿದ್ದರು ಎಂದು ಪುರಸಭೆಯ ಸದಸ್ಯರೇ ಆರೋಪ ಮಾಡಿದ್ದಾರೆ.
ಇನ್ನು ಪುಷ್ಪಲತಾ ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸಿಬಿ ಅಧಿಕಾರಿಗಳು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಎಸಿಬಿ ಎಸ್‌ಪಿ ಡಾ. ಸುಮನ್ ಪನ್ನೇಕರ್, ಡಿವೈಎಸ್‌ಪಿ ಪರಶುರಾಮಪ್ಪ ನೇತೃತ್ವದಲ್ಲಿ ಧಿಕಾರಿಗಳಾದ ಕರೀಮ್, ನಿರಂಜನ್, ಸಿಬ್ಬಂದಿ ಕುಮಾರ್ ಆರಾಧ್ಯ, ಗುರುಪ್ರಸಾದ್, ನೇತ್ರಾವತಿ, ಪುಷ್ಪಲತಾ, ಯೋಗೇಶ್ ಮತ್ತು ಮಂಜುನಾಥ್ ದಾಳಿ ನಡೆಸಿ ಪುರಸಭೆ ಮುಖ್ಯಾಧಿಕಾರಿ ಪುಷ್ಪಲತಾ ಅವರನ್ನು ಖೆಡ್ಡಾಕ್ಕೆ ಬೀಳಿಸಿದರು.