- ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಮಕ್ಕಳನ್ನು ತಾಯಿ ಕರೆದು ಇವರೇ ನಿಮ್ಮ ತಂದೆ ಎಂದರೆ ನಂಬುತ್ತಾರೆ. ಯಾವ ಮಕ್ಕಳು ಕೂಡ ಸಾಕ್ಷಿ ಕೇಳಲ್ಲ ಎಂದು ಹನುಮ ಹುಟ್ಟಿದ್ದು ಗೊತ್ತಾ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸಿದ್ದು ಹೇಳಿಕೆಗೆ ಪ್ರತಿಕ್ರಿಸಿದ ಅವರು, ಕೆಲವರಿಗೆ ಭಗವಂತ ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣುತ್ತಾನೆ. ನೋಡುವ ದೃಷ್ಟಿ ಇರುವವರಿಗೆ ಭಗವಂತನನ್ನು ತೋರಿಸಬಹುದು, ನೋಡುವ ದೃಷ್ಟಿ ಇಲ್ಲದವರಿಗೆ ಎಲ್ಲಿ ನಿಂತರೂ ಭಗವಂತ ಕಾಣಲ್ಲ ಅಂತಾ ಸಿದ್ದರಾಮಯ್ಯರನ್ನು ಕುಟುಕಿದರು.
ಕೆಲವರು ಸಾಕ್ಷಿ ಕೇಳುವ ಮನಸ್ಥಿತಿಯ ಜನ ಇರುತ್ತಾರೆ. ಸಿದ್ದರಾಮಯ್ಯನವರಿಗೆ ಸಾಕ್ಷಿ ಕೇಳುವ ಮನಸ್ಥಿತಿ ಇದ್ದರೆ ಅದು ಅವರ ದೋಷ. ನಂಬಿಕೆ ಎಲ್ಲವನ್ನೂ ಮೀರಿದ್ದು, ನಂಬಿಕೆಗಳ ಮೇಲೆ ಜಗತ್ತು ಇರೋದು ಎಂದು ಹೇಳಿದ ಅವರು, ಅವರ ತಂದೆ-ತಾಯಿಗೆ ದೇವರ ಮೇಲೆ ಶ್ರದ್ಧೆ ಇರೋ ಕಾರಣಕ್ಕೆ ಸಿದ್ದರಾಮಯ್ಯ ಅಂತಾ ದೇವರ ಹೆಸರಿಟ್ಟರು. ಆದರೆ, ಸಹವಾಸ ದೋಷದಿಂದ ಸಿದ್ದರಾಮಯ್ಯ ಕೆಟ್ಟಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ನಿನ್ನೆ ಮೈಸೂರಿನ ಸ್ನೇಹಿತರ ಮನೆಯಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ಸಾರಿನ ಊಟ ಸವಿಯುವಾಗ, ಅಭಿಮಾನಿಯೊಬ್ಬ ಸರ್ ಇವತ್ತು ಹನುಮ ಜಯಂತಿ ನಾನ್ ವೆಜ್ ತಿನ್ನುತ್ತಾ ಇದ್ದೀರಲ್ಲ ಅಂತಾ ಪ್ರಶ್ನಿಸಿದ್ದರು. ಈ ವೇಳೆ ತಮ್ಮ ಅಭಿಮಾನಿಗಳಿಗೆ ಉತ್ತರ ನೀಡಿದ ಸಿದ್ದು, ಹನುಮ ಹುಟ್ಟಿದ್ದು ಯಾವಾಗ ಗೊತ್ತಾ ನಿನಗೆ ಅಂತ ಮರು ಪ್ರಶ್ನೆಹಾಕಿದರು. ಈ ಹೇಳಿಕೆ ಸಿ.ಟಿ.ರವಿ ಸಿದ್ದರಾಮಯ್ಯಗೆ ತಿಗೇಟುನೀಡಿದ್ದರು.
ಇನ್ನು ಇದೇ ವೇಳೆ ಜನವರಿ 16 ನಂತರ ಏನಾದರು ಆಗಬಹುದು ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ರಾಜಕಾರಣದಲ್ಲಿ ಎಲ್ಲವೂ ಇರುತ್ತೆ, ಸದ್ದುಗದ್ದಲ ಇಲ್ಲದಿದ್ದರೆ ಜಾತ್ರೆ ಆಗಲ್ಲ ಎಂದರು.