ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಭಾರತದಲ್ಲಿ ಇನ್ನು ಮುಂದೆ ಕೊರೊನಾ ಲಸಿಕೆ ಸಂಕ್ರಮಣ ನಡೆಯಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ಬೆಳಗ್ಗೆ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡು ಲಸಿಕೆಗಳ ಮೇಲೆ ನಿರಂತರವಾಗಿ ಪ್ರಯೋಗ ನಡೆಸಲಾಗಿತ್ತು. ಅದರ ಫಲವಾಗಿ ಇಂದು ಕೊರೊನಾ ಸೋಂಕು ನಿಯಂತ್ರಣಕ್ಕೆ ತಕ್ಕ ಲಸಿಕೆ ದೊರಕಿದೆ ಎಂದರು.
ಇನ್ನು ಕೊರೊನಾ ವಿರುದ್ಧ ನಮ್ಮ ಹೋರಾಟ ನಿರಂತವಾಗಿರಲಿದೆ. ಜತೆಗ ನಮ್ಮ ಲಸಿಕೆ ಸುರಕ್ಷಿತವಾಗಿದ್ದು, ಯಾವುದೇ ಸೈಟ್ ಎಫೆಕ್ಟ್ ಇರುವುದಿಲ್ಲ. ಆರೋಗ್ಯದ ಮೇಲೆ ಇತರ ಪರಿಣಾಮ ಬೀರುವುದಿಲ್ಲ. ಇದು ಕೊರೊನಾ ವೈರಸ್ ಮಟ್ಟಹಾಕುವ ಲಸಿಕೆಯಾಗಿದೆ ಎಂದು ವಿವರಿಸಿದರು.
ಇಂದು ನಾವು ಪ್ರಾಯೋಗಿಕವಾಗಿ ಚಾಲನೆ ನೀಡುವ ಲಸಿಕೆಗಳು ದೇಶಿಯವಾಗಿ ಸಿದ್ದಗೊಂಡಿದ್ದು, ನಮ್ಮ ವಿಜ್ಞಾನಿಗಳ ನಿರಂತರ ಸಂಶೋಧನೆಯಿಂದ ಇದು ಸಾಧ್ಯವಾಗಿದೆ ಎಂದು ಸಂತಸದಿಂದ ತಿಳಿಸಿದರು.
ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರ ಮೋದಿ ಭಾಷಣವೇಳೆ ಭಾವುಕರಾದರು. ಕೊರೊನಾ ವಾರಿಯರ್ಸ್ ಗದ್ಗದಿತರಾದರು. ವಾರಿಯರ್ಸ್‌ಗಳ ಅವಿರತ ಶ್ರಮದಿಂದಾಗಿಯೂ ಇಂದು ನಮ್ಮ ದೇಶದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಯಿತು ಎಂದು ಹೇಳಿದರು.
ಇನ್ನು ಕೊರೊನಾ ಸೋಂಕಿಗೆ ಔಷಧ ಸಿಕ್ಕಿದೆ. ಆದರೂ ನೀವು ಸುರಕ್ಷತೆ ದೃಷ್ಟಿಯಿಂದ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಕುವುದನ್ನು ಮರೆಯಬೇಡಿ ಎಂದು ದೇಶವಾಸಿಗಳಿಗೆ ಸಲಹೆ ನೀಡಿದರು.
Launch of the #LargestVaccineDrive. Let us defeat COVID-19. https://t.co/FE0TBn4P8I
— Narendra Modi (@narendramodi) January 16, 2021
ಇದೆಲ್ಲಾ ಆಯ್ತು ಮುಂದೆ ಸಾಯೋ ಜನಗಳು ಸಾಯ್ತಾ ಇದ್ದಾರೆ ನಮಗೇನ್ ಅಂದಂಗಾಯ್ತು