ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕು ಬಂದು ಗುಣಮುಖರಾದ ಸುಮಾರು 30 ಮಂದಿಯ ಕಾಲುಗಳಲ್ಲಿ ಸಮಸ್ಯೆ ಕಾಣಿಕೊಂಡ ಪರಿಣಾಮ ಅವರ ಕಾಲುಕಾಲುಗಳನ್ನು ಕಟ್ ಮಾಡಲಾಗಿದೆ.
ಈ ವಿಶ್ವಮಾರಿ ದೇಶದ ಜನರ ಪ್ರಾಣ ಹಿಂಡುತ್ತಿದೆ. ಇದರ ಜೊತೆಗೆ ಕೊರೊನಾದಿಂದ ಗುಣಮುಖರಾಗಿ ಹೊಸ ಜೀವನ ಕಟ್ಟಿಕೊಳ್ಳಲು ಮುಂದಾಗುತ್ತಿರುವ ವ್ಯಕ್ತಿಗಳಿಗೆ ಇದು ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ.
ಕೊರೊನಾ ಬಂದು ಹೋದ ಬಳಿಕ ಅನೇಕ ರೋಗಗಳು, ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಬ್ಲ್ಯಾಕ್ ಫಂಗಸ್ ನಂತರ ಈಗ ಕೊರೊನಾದಿಂದ ಗುಣಮುಖರಾದವರಲ್ಲಿ ಮತ್ತೊಂದು ರೋಗ ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಇನಷ್ಟು ಆತಂಕವನ್ನು ಉಂಟು ಮಾಡುತ್ತಿದೆ.
ಕೊರೊನಾ ಬಂದು ವಾಸಿಯಾದ ನಂತರ ಹೃದಯ ಸಂಬಂಧಿ ಕಾಯಿಲೆ, ಲಂಗ್ಸ್, ಲಿವರ್ಗೆ ತೊಂದರೆಯಾಗುತ್ತಿತ್ತು. ಈಗ ಸೋಂಕಿನಿಂದ ಗುಣಮುಖರಾದ ಹಲವರ ಕಾಲುಗಳ ಬಣ್ಣ ಬದಲಾಗುತ್ತಿದೆ. ಜತೆಗೆ ಕಾಲು ನೋವು, ಗ್ಯಾಂಗ್ರಿನ್ ಮಾದರಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೊರೊನಾ ಬಂದು ಹೋದಬಳಿಕ ಗ್ಯಾಂಗ್ರಿನ್ ಕಾಣಿಕೊಳ್ಳುತ್ತಿರುವುದರಿಂದ ಅಂಥವರ ಕಾಲುಗಳನ್ನು ಕಟ್ ಮಾಡಲಾಗುತ್ತಿದೆ.
ಗ್ಯಾಂಗ್ರಿನ್ ರೀತಿ ಸಮಸ್ಯೆಗಳು ಕಂಡು ಬಂದು ಕಾಲು ಕಳೆದುಕೊಂಡವರು ಅನೇಕ ಮಂದಿ ಇದ್ದಾರೆ ಎಂದು ವೈದ್ಯರು ತಿಳುತ್ತಿದ್ದಾರೆ. ಯಾವುದೇ ಕಾಯಿಲೆ, ಶುಗರ್ ಇಲ್ಲದೆ ಆರೋಗ್ಯವಂತರಾಗಿರುವ ಜನರಿಗೂ ಕೊರೊನಾ ಬಂದಿತ್ತು ಎಂಬ ಒಂದೇ ಕಾರಣಕ್ಕೆ ಕಾಲಿನ ಸಮಸ್ಯೆ ಕಾಣಿಸಿಸುತ್ತಿದ್ದು, ಹೀಗೆ ಸಮಸ್ಯೆ ಎದುರಾದ 200 ಜನರಲ್ಲಿ 30 ಜನರ ಕಾಲುಗಳನ್ನೇ ವೈದ್ಯರು ಕಟ್ ಮಾಡಿದ್ದಾರೆ.