Vijayapatha – ವಿಜಯಪಥ
Saturday, November 2, 2024
Breaking NewsNEWSನಮ್ಮರಾಜ್ಯ

ಬಸ್‌ ಸಂಚಾರಕ್ಕೆ ಸಾರಿಗೆ ನಿಗಮಗಳ ಸಿದ್ಧತೆ: ಇನ್ನೊಂದೆಡೆ ವರ್ಗಾವಣೆ ಗೊಂಡವರು ಎಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂಬ ಗೊಂದಲ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆಯ ಎಲ್ಲಾ ನಾಲ್ಕೂ ನಿಗಮಗಳ ಬಸ್‌ ಸಂಚಾರಕ್ಕೆ ಅಧಿಕಾರಿಗಳು ಅಣಿಯಾಗುತ್ತಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಜೂನ್‌ 14ರಿಂದ ರಾಜ್ಯದಲ್ಲಿ ಬಹುತೇಕ ಅನ್‌ಲಾಕ್‌ ಮಾಡುವುದು ಖಚಿತವಾಗಿದೆ. ಹೀಗಾಗಿ ಸಾರಿಗೆ ಅಧಿಕಾರಿಗಳು ತಮ್ಮ ತಮ್ಮ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಈಗಾಗಲೇ ಸೂಚನೆ ನೀಡಿದ್ದಾರೆ. ಜತೆಗೆ ಕೆಲ ನಿಯಮಗಳನ್ನು ಹೇರಿದ್ದಾರೆ.

ಇದರ ನಡುವೆ ಇಂದು ನಾಲ್ಕೂ ನಿಗಮಗಳ ಎಂಡಿಗಳು ಮತ್ತು ಅಧಿಕಾರಿಗಳ ಜತೆ ಸಾರಿಗೆ ನೌಕರರ ಪರವಾಗಿ ಉಚ್ಚನ್ಯಾಯಾದಲ್ಲಿ ವಾದ ಮಂಡಿಸುತ್ತಿರುವ ವಕೀಲ ಎಚ್‌.ಬಿ.ಶಿವರಾಜ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲು ಅಧಿಕಾರಿಗಳು ಆಹ್ವಾನಿಸಿದ್ದಾರೆ.

ಇಂದು ನಡೆಯುವ ಸಭೆಯಲ್ಲಿ ಅಧಿಕಾರಿಗಳು ಮತ್ತು ನೌಕರರ ಪರ ನಿಂತಿರುವ ವಕೀಲರ ನಡುವೆ ಸೌಹಾರ್ದಯುತ ಮಾತುಕತೆ ನಡೆದರೆ ಈಗ ವರ್ಗಾವಣೆಗೊಂಡಿರುವ ನೌಕರರು ಈ ಹಿಂದೆ ಮಾಡುತ್ತಿದ್ದ ಕಾರ್ಯಸ್ಥಳಗಳಲ್ಲೇ (ಡಿಪೋ) ಕರ್ತವ್ಯಕ್ಕೆ ಹಾಜರಾಗುವರು. ಒಂದುವೇಳೆ ಸಭೆ ವಿಫಲವಾದರೆ ವರ್ಗಾವಣೆಗೊಂಡಿರುವ ಸ್ಥಳಕ್ಕೆ ತೆರಳಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ.

ನಂತರ ನೌಕರರ ಪರ ವಕೀಲರು ಉಚ್ಚನ್ಯಾಯಾಲಯದಲ್ಲಿ ಈ ಬಗ್ಗೆ ಈಗಾಗಲೇ ಸಲ್ಲಿಸಿರುವ ಅಪಿಲು ಅರ್ಜಿಯನ್ನು ಕೈಗೆತ್ತಿಕೊಂಡು ಅಧಿಕಾರಿಗಳ ನಡೆ ಬಗ್ಗೆ ಸ್ಪಷ್ಟನೆ ಕೊಡಲಿದ್ದಾರೆ. ಮುಂದೆ ನ್ಯಾಯಾಲಯ ಯಾವ ರೀತಿ ಮಾರ್ಗದಶನ ಇಲ್ಲ ಆದೇಶ ಹೊರಡಿಸುತ್ತದೆಯೋ ಆ ರೀತಿ ಅಧಿಕಾರಿಗಳು ಮತ್ತು ನೌಕರರು ನಡೆದುಕೊಳ್ಳಬೇಕಾಗುತ್ತದೆ.

ಇದೆಲ್ಲದರ ನಡುವೆ ಸಾರಿಗೆ ನೌಕರರು ಕೇಳುತ್ತಿರುವುದು ನ್ಯಾಯಯುತವಾಗಿದ್ದು, ಅವರ ಬೇಡಿಕೆಗಳನ್ನು ನ್ಯಾಯಾಲಯ ಕಾನೂನು ರೀತಿಯಲ್ಲೇ ಬಗೆ ಹರಿಸಲಿದೆ ಎಂಬ ವಿಶ್ವಾಸವನ್ನು ನೌಕರರ ಕೂಟದ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ