ಸಾರಿಗೆ ನೌಕರರ ವಜಾ, ವರ್ಗಾವಣೆ ಖಂಡಿಸಿ ಸೆ.20ರಂದು ಧರಣಿ ಹಿನ್ನೆಲೆ ಸೆ.13ರಂದು ಸಾರಿಗೆ ಸರ್ವ ಸಂಘಟನೆಗಳ ಸಭೆ: ಸಿಐಟಿಯು ರೇವಪ್ಪ
ಬೆಂಗಳೂರು: ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಏಪ್ರಿಲ್‌ನಲ್ಲಿ ನಡೆದ ಮುಷ್ಕರದ ವೇಳೆ ವಜಾ, ಅಮಾನತು, ವರ್ಗಾವಣೆ ಮತ್ತು ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಮತ್ತು ಸಾರಿಗೆ ಆಡಳಿತ ವರ್ಗ ಸ್ಪಂದಿಸದಿರುವುದನ್ನು ಖಂಡಿಸಿ ಇದೇ ಸೆ.20ರಂದು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕರಾರಸಾ ನಿಗಮಗಳ ನೌಕರರ ಫೆಡರೇಶನ್ ( CITU) ತೀರ್ಮಾನಿದೆ.
ಹೀಗಾಗಿ ಧರಣಿಯ ಸಿದ್ದತೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಾಗಿದೆ. ಅದಕ್ಕಾಗಿ ಸೆಪ್ಟೆಂಬರ್ 13ರಂದು ಸಾರಿಗೆ ಸರ್ವ ಸಂಘಟನೆಗಳ ಪೂರ್ವಭಾವಿ ಸಭೆ ಕರೆಯಲಾಗಿದೆ. ಆದ್ದರಿಂದ ಎಲ್ಲ ನೌಕರರು ಭಾಗವಹಿಸಬೇಕು ಎಂದು CITUನ ಅಧ್ಯಕ್ಷ ಎಚ್.ಡಿ. ರೇವಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರಿನ ಸಂಪಂಗಿರಾಮನಗರದ ಸೂರಿ ಭವನದಲ್ಲಿ ಸೆಪ್ಟೆಂಬರ್ 13ರ ಸೋಮವಾರ ಬೆಳಗ್ಗೆ 10:30ಕ್ಕೆ ಸಾರಿಗೆ ನಿಗಮಗಳಲ್ಲಿನ ಎಲ್ಲ ಸಂಘಟನೆಗಳ ಮುಖಂಡರನ್ನು ಒಳಗೊಂಡ ಪದಾಧಿಕಾರಿಗಳು, ಸೇವೆಯಿಂದ ವಜಾಗೊಂಡವರು ಮತ್ತು ಇತರ ಭಾದಿತ ನೌಕರರು ಸಭೆಯಲ್ಲಿ ಭಾಗವಹಿ ತಮ್ಮ ಸಮಸ್ಯೆ ಜತೆಗೆ ಸಲಹೆ ಸೂಚನೆಗಳನ್ನು ಕೊಡಬೇಕು ಎಂದು ರೇವಪ್ಪ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 4 ನಿಗಮಗಳಲ್ಲಿ ದುಡಿಯುತ್ತಿರುವ 1.30 ಲಕ್ಷ ಕಾರ್ಮಿಕರು ತೀವ್ರವಾದ, ಕಿರುಕುಳಗಳು ಮತ್ತು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಾತ್ರವಲ್ಲ ಸಾರಿಗೆ ಕಾರ್ಮಿಕರ ಕುಟುಂಬದವರು ಸಹ ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ 14 ದಿನಗಳು ಮುಷ್ಕರ ನಡೆಸಿದ ವೇಳೆ ಸರ್ಕಾರ ಮತ್ತು ಸಾರಿಗೆ ಆಡಳಿತ ವರ್ಗಗಳು 2 ಸಾವಿರಕ್ಕೂ ಹೆಚ್ಚು ನೌಕರರನ್ನು ಸೇವೆಯಿಂದ ವಜಾ ಮಾಡಿದ್ದಾರೆ. ನೌಕರರ ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ. ಸಾವಿರಾರು ನೌಕರರನ್ನು ದೂರ- ದೂರದ ವಿಭಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ಇದರಿಂದ ನೌಕರರ ಕುಟುಂಬಗಳಲ್ಲಿ ಅಶಾಂತಿ- ಅತೃಪ್ತಿಗೆ ಕಾರಣವಾಗಿದೆ.
2000 ಕ್ಕಿಂತ ಅಧಿಕ ನೌಕರರನ್ನು ಅಮಾನತುಗೊಳಿಸಿ ನಂತರ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಮುಷ್ಕರದ ಅವಧಿಯಲ್ಲಿ ಹತ್ತಾರು ಸಾವಿರ ಕಾರ್ಮಿಕರಿಗೆ ಗೈರು ಹಾಜರಿ ಆಪಾದನಾ ಪತ್ರ ನೀಡಿ ಶಿಕ್ಷೆಗೆ ಗುರಿಪಡಿಸಲು ಹೊರಟಿದ್ದಾರೆ.
ಇಷ್ಟೇ ಅಲ್ಲ ಮುಷ್ಕರದ ನಂತರ, ಮುಷ್ಕರ ಪೂರ್ವದಲ್ಲಿ ಇದ್ದಂತಹ ಕಿರುಕುಳಗಳಿಗಿಂತ ತೀವ್ರ ಕಿರುಕುಳಗಳನ್ನು ನೀಡಲು ಆಡಳಿತ ವರ್ಗಗಳು ಮುಂದಾಗಿದೆ. ಈ ಎಲ್ಲ ಕಿರುಕುಳಗಳನ್ನು ತಪ್ಪಿಸಿ, ಮತ್ತೆ ನೌಕರರ ಕರ್ತವ್ಯಕ್ಕೆ ನಿಯೋಜನೆಗೊಳಿಸುವಂತೆ ಮನವಿ ಪತ್ರವನ್ನು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಸಲ್ಲಿಸಿದ್ದೇವೆ.
ಈಗಾಗಲೇ ಮುಷ್ಕರ ನಡೆದು 5 ತಿಂಗಳು ಮುಗಿದಿದೆ. ಆದರೆ ನಮ್ಮ ನೌಕರರ ಬೇಡಿಕೆಗಳನ್ನು ಸರ್ಕಾರ ಮತ್ತು ಆಡಳಿತ ವರ್ಗ ಇಲ್ಲಿಯವರೆಗೂ ಈಡೇರಿಸಿಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರ ಮತ್ತು ಆಡಳಿತ ವರ್ಗಗಳು ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ ಸೆಪ್ಟೆಂಬರ್ 20ರ ಮಂಗಳವಾರ ಒಂದು ದಿನ ಧರಣಿ ಹಮ್ಮಿಕೊಳ್ಳಲು ಕರಾರಸಾ ನಿಗಮಗಳ ನೌಕರರ ಫೆಡರೇಶನ್ ( CITU) ತೀರ್ಮಾನಿದೆ.
ಹೀಗಾಗಿ ಧರಣಿಯ ಸಿದ್ದತೆ ಬಗ್ಗೆ ಚರ್ಚಿಸಿ ಅಂತಿಮಗೊಳಿಸಬೇಕಾಗಿದೆ. ಅದಕ್ಕಾಗಿ ಸೆ.13ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಆದ್ದರಿಂದ ಎಲ್ಲ ನೌಕರರು ಭಾಗವಹಿಸಬೇಕು ಎಂದು ರೇವಪ್ಪ ಸೇರಿದಂತೆ ಸಿಐಟಿಯು ಉಪಾಧ್ಯಕ್ಷ ಡಾ. ಕೆ. ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್, ಚಂದ್ರಪ್ಪ, ವೇಣುಗೋಪಾಲ್,ಸುರೇಶ್, ಸಂತೋಷ್, ಲಕ್ಷ್ಮಿನಾರಾಯಣ ಮತ್ತಿತರ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ನೌಕರರ ಪರವಾಗಿ CITUನ ಬೇಡಿಕೆಗಳು: 1. ಮುಷ್ಕರದ ಅವಧಿಯಲ್ಲಿ ಸೇವೆಯಿಂದ ವಜಾ ಮಾಡಿರುವ ಎಲ್ಲಾ ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಬೇಕು.
2. ವರ್ಗಾವಣೆ ಮಾಡಿ ದೂರದ ವಿಭಾಗಗಳಿಗೆ ಕಳಿಹಿಸಿರುವ ಕಾರ್ಮಿಕರನ್ನು ಪುನಃ ವಾಪಸ್ಸು ತರಬೇಕು.
3. ಅಮಾನತ್ತು ಮಾಡಿ ಶಿಕ್ಷೆಗೆ ಗುರಿಪಡಿಸುವ ಸಲುವಾಗಿ ನಡೆಸುತ್ತಿರುವ ಶಿಸ್ತು ಪ್ರಕ್ರಿಯೆಗಳನ್ನು ನಿಲ್ಲಿಸಬೇಕು.
4. ಮುಷ್ಕರದ ಅವಧಿಯನ್ನು ಗೈರುಹಾಜರಿಯೆಂದ ಆಪಾದನಾ ಪತ್ರ ನೀಡಿ ಶಿಕ್ಷೆಗೆ ಗುರಿಪಡಿಸುತ್ತಿರುವುದನ್ನು ನಿಲ್ಲಿಸಬೇಕು.
5. ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ ವೇತನ ಪರಿಷ್ಕರಣೆ ಮಾಡಿ 1:1:2020 ರಿಂದ ಜಾರಿಗೊಳಿಸಬೇಕು.