NEWSನಮ್ಮರಾಜ್ಯರಾಜಕೀಯ

ಪರಿಷತ್‌ ಕಲಾಪದ ವೇಳೆ ನಿದ್ದೆಗೆ ಜಾರಿದವರನ್ನು ಕೀರ್ತನೆ ಮೂಲಕ ಎಬ್ಬಿಸಿದ ಭೋಜೇಗೌಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಚರ್ಚೆಯ ಸಂದರ್ಭದಲ್ಲಿ ವಿಧಾನಪರಿಷತ್‍ನಲ್ಲಿ ನಿದ್ದೆ ಮಾಡುತ್ತಿದ್ದವರನ್ನು ನೋಡಿ ವಿಧಾನಪರಿಷತ್ ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಏರು ಕಂಠದಲ್ಲಿ ದಾಸರ ಪದ ಹಾಡುವ ಮೂಲಕ ನಿದ್ದೆಯಿಂದ ಎಬ್ಬಿಸಿ ಒನ್ಸ್ ಮೋರ್ ಎನಿಸಿಕೊಂಡರು.

ನಿಯಮ 330 ಅಡಿ ನಡೆಯುತ್ತಿದ್ದ ಚರ್ಚೆ ವೇಳೆ ಫಾರೂಕ್ ಅವರೊಂದಿಗೆ ಮಾತನಾಡುತ್ತಿದ್ದ ಭೋಜೇಗೌಡ ಅವರು, ಇದ್ದಕ್ಕಿದ್ದಂತೆ ಗಾಯನ ಶುರುಮಾಡಿದರು.

ರಾಗವಾಗಿ ಹಾಡು ಶುರು ಮಾಡಿದ ಭೋಜೇಗೌಡ ಅವರು ಏರು ಕಂಠದಲ್ಲಿ ದಾಸರ ಪದ ಹಾಡಿದರು. ಈ ವೇಳೆ ನಿದ್ದೆಗೆ ಜಾರಿಗೆ ಹಲವು ಪರಿಷತ್‌ ಸದಸ್ಯರನ್ನು ಎಚ್ಚರಗೊಳಿಸುವುದಕ್ಕೆ ಹಾಡಿದೆ ಎಂದು ಸಮಜಾಯಿಷಿ ನೀಡಿದರು.

88 ಲಕ್ಷ ಜೀವರಾಶಿಗಳ ದಾಟಿ ಬಂದ ಈ ಶರೀರ, ತಾನಲ್ಲ ತನ್ನದಲ್ಲ ಎಂದು ದಾಸರ ಪದ ಭೋಜೇಗೌಡ ಅವರು ಹಾಡುತ್ತಿದ್ದಂತೆ, ಬಿಜೆಪಿ ಸದಸ್ಯರಿಂದ ಒನ್ಸ್ ಮೋರ್ ಎಂಬ ಬೇಡಿಕೆ ಕೇಳಿಬಂತು.

ಈ ವೇಳೆ ಮತ್ತೆ ರಾಗವಾಗಿ ಕೀರ್ತನೆ ಹಾಡಲು ಭೋಜೇಗೌಡ ಆರಂಭಿಸಿದರು. ಈ ಸಂದರ್ಭ ಮತ್ತೆ ಶುರು ಮಾಡಬೇಡಿ ಎಂದು ಸಭಾಪತಿ ಹೊರಟ್ಟಿ ತಮಾಷೆ ಮಾಡಿದರು.

ಮಂಗಳೂರು, ಕರಾವಳಿ, ಉಳ್ಳಾಲ ಸುರತ್ಕಲ್ ಭಾಗದಲ್ಲಿ ಅಸಮರ್ಪಕ ಒಳಚರಂಡಿಯಿಂದ ತೀವ್ರ ಸಮಸ್ಯೆ ಇದೆ ಎಂದು ತಮ್ಮ ಭಾಗದ ಸಮಸ್ಯೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು.

ಇದಲ್ಲದೆ ಮಂಗಳೂರು, ಕರಾವಳಿ ಪ್ರದೇಶಗಳಲ್ಲಿ ಸಾಕಷ್ಟು ಕೈಗಾರಿಕಾ ಪ್ರದೇಶಗಳಿವೆ ಇದರಿಂದ ಪರಿಸರ ನಾಶವಾಗುತ್ತಿದೆ. ಈ ಬಗ್ಗೆ ಮಾತನಾಡದೆ ಸುಮ್ಮನಿರುವ ಇವರೆಲ್ಲ ಪರಿಸರ ವಾದಿಗಳಲ್ಲ, ಪರಿಸರ ವ್ಯಾಧಿಗಳು.

ನನ್ನ ಬಗ್ಗೆ ಏನು ಬೇಕಾದ್ರೂ ಬರೀರಿ, ಪರಿಸರ ವ್ಯಾಧಿಗಳಿಂದಾಗಿಯೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ಪರಿಸರ ವಾದಿಗಳ ವಿರುದ್ಧ ಕಿಡಿಕಾರಿದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...