NEWSನಮ್ಮರಾಜ್ಯರಾಜಕೀಯ

ಬಿಜೆಪಿಯಿಂದ ದೇಶಾದ್ಯಂತ 11 ಲಕ್ಷ ಗಿಡ ನೆಡಲು ಯೋಜನೆ: ಮೈಲ್ಯಾಕ್ ಅಧ್ಯಕ್ಷ ಫಣೀಶ್

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ದೇಶದ ಧೀಮಂತ ನಾಯಕ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರ ಬಲಿದಾನ ಪ್ರಯುಕ್ತ ಜೂ.23 ರಿಂದ ಜು.6ರ ವರೆಗೆ ಬಿಜೆಪಿ ವತಿಯಿಂದ ದೇಶದಾದ್ಯಂತ 11 ಲಕ್ಷ ಗಿಡ ನೆಡಲು ಯೋಜನೆ ರೂಪಿಸಲಾಗಿದೆ ಎಂದು ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ (ಮೈಲ್ಯಾಕ್) ಅಧ್ಯಕ್ಷ ಎನ್.ವಿ.ಫಣೀಶ್ ಹೇಳಿದರು.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಬುಧವಾರ ಡಾ. ಶ್ಯಾಮಪ್ರಸಾದ ಮುಖರ್ಜಿ ಬಲಿದಾನ ದಿವಸ ಪ್ರಯುಕ್ತ ಅರಳಿ ಸಸಿಯನ್ನು ನೆಟ್ಟು ನೀರೆರೆದ ಬಳಿಕ ಮಾತನಾಡಿದರು.

ಕೊರೊನಾ ಸೋಂಕಿಗೆ ಸಿಲುಕಿ ಆಕ್ಸಿಜನ್ ಕೊರತೆಯಾಗಿ ಸಾವು ಬದುಕಿನ ನಡುವೆ ಸೆಣಸಾಡಿದ ಜನರ ಕಷ್ಟವನ್ನು ಕಂಡಿರುವ ನಾವು-ನೀವೆಲ್ಲರೂ ಆಕ್ಸಿಜನ್ ಅಭಿವೃದ್ಧಿಪಡಿಸಲು ಸಸಿಗಳನ್ನು ನೆಟ್ಟು ನೀರೆರೆಯುವ ಮೂಲಕ ಅರಣ್ಯ ದೇಶವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.

ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಲು ಭದ್ರ ನೆಲೆಯನ್ನು ಒದಗಿಸಿ ಕೊಟ್ಟಂತಹ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರು ಸಿದ್ಧಾಂತದ ಆಧಾರ ಒದಗಿಸಿದರು. ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳು ಭಾರತದಲ್ಲಿ ಉಳಿಯಲು ಕಾರಣಕರ್ತರಾದರು. ಅಂತಹ ಧೀಮಂತ ನಾಯಕನ ಬಲಿದಾನ ದಿವಸವನ್ನ ಪೂರ್ಣವಾಗಿ ಆಚರಿಸಲು ಅವರ ಜನ್ಮದಿನಾಚರಣೆ ವರೆಗೂ ದೇಶದಾದ್ಯಂತ ಆಯ್ಕೆ ಮಾಡಿಕೊಳ್ಳಲಾದ ಪ್ರದೇಶಗಳಲ್ಲಿ 11 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ತಿಳಿಸಿದರು.

ಸ್ವಪಕ್ಷೀಯರ ವಿರುದ್ಧವೇ ಪುರಸಭಾ ಸದಸ್ಯ ಗರಂ
ಮೈಲ್ಯಾಕ್ ಅಧ್ಯಕ್ಷ ಫಣೀಶ್ ಅವರ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದ್ದಕ್ಕೆ ಪುರಸಭಾ ಸದಸ್ಯ ಹಾಗೂ ಕಿರುತೆರೆ ನಟ ಆರ್.ಅರ್ಜುನ್ ಬಿಜೆಪಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಕಿಟ್ಟಿ ಅವರ ವಿರುದ್ಧ ಹರಿಹಾಯ್ದ ಘಟನೆ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

ಗಿಡ ನೆಡುವ ಕಾರ್ಯಕ್ರಮದ ಮಾಹಿತಿಯನ್ನು ಫಣೀಶ್ ನೀಡಿದ ಬಳಿಕ ಆಗಮಿಸಿದ ಅರ್ಜುನ್ ಪಕ್ಷದ ವರಿಷ್ಠರಾದ ನಿಗಮವೊಂದರ ಅಧ್ಯಕ್ಷರು ಬಂದಿದ್ದರು ಸೌಜನ್ಯಕ್ಕಾದರೂ ಮೊಬೈಲ್ ಕರೆ ಮಾಡಿಲ್ಲವಲ್ಲ ಎಂದು ಕಿಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡರು. ನೀವೇ ಸಂಘಟನೆ ಮಾಡುವುದಾದರೆ ನಾವೇ ರಾಜೀನಾಮೆ ನೀಡುತ್ತೇವೆ. ನೀವು ಮಾಹಿತಿ ನೀಡದಿದ್ದರೆ ಹುದ್ದೆಯನ್ನು ತೊರೆದು ನಿರ್ಗಮಿಸಿ ಎಂದು ಗರಂ ಆದರು.

ಇದೇ ವೇಳೆ ಹಿಂದುಳಿದ ವರ್ಗಗಳ ಮೋರ್ಚಾದ ಮಾಜಿ ಜಿಲ್ಲಾ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ ಹಾಗೂ ಎಸ್ ಸಿ ಮೋರ್ಚಾ ಅಧ್ಯಕ್ಷ ಚೌಹಳ್ಳಿ ಸಿದ್ದರಾಜು ಪುರಸಭೆಗೆ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡದಿರುವ ಬಗ್ಗೆಯೂ ಫಣೀಶ್ ಅವರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ ಅವರು ಫಣೀಶ್ ಅವರನ್ನು ಸನ್ಮಾನಿಸಿದರು. ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್ ಕುಮಾರ್, ಎಪಿಎಂಸಿ ಸದಸ್ಯ ಕರೋಹಟ್ಟಿ ಬಸವರಾಜು, ಪುರಸಭಾ ಸದಸ್ಯ ಎಸ್.ಕೆ.ಕಿರಣ, ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಸ್.ಬಿ.ಸುರೇಶ್, ಪಂಚಾಯತ್ ರಾಜ್ ಪ್ರಕೋಷ್ಠ ಜಿಲ್ಲಾ ಸಂಚಾಲಕ ದಯಾನಂದ್ ಪಟೇಲ್.

ಸೋಸಲೆ ಪಿಎಸಿಸಿಎಸ್ ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ, ವರುಣ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಂಗು ನಾಯಕ, ವರುಣ ಮಂಜು, ಮಾಜಿ ಕಾರ್ಯದರ್ಶಿ ಕುಪ್ಪೆಗಾಲ ಶಿವಬಸಪ್ಪ, ರೈತ ಮೋರ್ಚಾ ಅಧ್ಯಕ್ಷ ಆರ್. ಶಿವಕುಮಾರ್, ಯುವ ಮೋರ್ಚಾ ಅಧ್ಯಕ್ಷ ಕೆ.ವಿ. ಶಿವಶಂಕರ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಯುವ ಮೋರ್ಚಾ ಕಾರ್ಯದರ್ಶಿ ನಂದನ್, ಕಂಡ ಗೊಬ್ಬರದ ಅಂಗಡಿ ರಾಜೇಶ್ ಇದ್ದರು.

Leave a Reply

error: Content is protected !!
LATEST
APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!? ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ