NEWSನಮ್ಮರಾಜ್ಯ

ನೌಕರರ ಸಮಸ್ಯೆಗೆ ಶೀಘ್ರದಲ್ಲೇ ಮುಕ್ತಿ: ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಯಶವಂತ ಗುರಿಕರ್ ಭರವಸೆ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಸಾರಿಗೆ ನೌಕರರ ವರ್ಗಾವಣೆ, ಅಮಾನತು, ವಜಾ ಹಾಗೂ ಪೊಲೀಸ್‌ ಪ್ರಕರಣಗಳನ್ನು ನಿಗದಿತ ಸಮಯದಲ್ಲಿ ಇತ್ಯರ್ಥ ಪಡಿಸುವಂತೆ ಇಂದು (ಅ.11) ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯಶವಂತ ಗುರಿಕರ್ ಅವರನ್ನು ಕಕರಸಾ ಕೂಟ ವಲಯದ ಗೌರವ ಅಧ್ಯಕ್ಷ ಶೌಕತ್ ಅಲಿ ಆಲೂರು ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ನೌಕರ ನಿಯೋಗ ಭೇಟಿಯಾಗಿ ಚರ್ಚೆ ನಡೆಸಿತು.

ಕಲಬುರಗಿಯ ಕಕರಸಾ ನಿಗಮ ಕೇಂದ್ರ ಕಚೇರಿ  ಎಂಡಿ ಅವರ ಕಚೇರಿಯಲ್ಲಿ ಭೇಟಿಯಾದ ನಿಯೋಗ ಪ್ರಮುಖವಾಗಿ ಒಟ್ಟು 6 ಬೇಡಿಕೆಗಳನ್ನು ವಿವರವಾದ ಮಾಹಿತಿಯೊಂದಿಗೆ ಎಂಡಿ ಅವರ ಮುಂದೆ ಮಂಡಿಸಿತು.

ವಜಾಗೊಂಡ ನೌಕರರ ಸಮಸ್ಯೆಗೆ ಸಂಬಂಧಿಸಿದಂತೆ ತುರ್ತಾಗಿ ಸ್ಪಂದಿಸಬೇಕು ಎಂದು ನಿಯೋಗ ಮನವಿ ಮಾಡಿತು. ಅದಕ್ಕೆ ಕೂಡಲೇ ಸ್ಪಂದಿಸಿದ ಎಂಡಿ ಅವರು ಸರಕಾರದ ನಿರ್ದೇಶನದಂತೆ ಕ್ರಮ ಜರುಗಿಸುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಂಡುತ್ತೇವೆ ಎಂದರು.

ಇನ್ನು ವರ್ಗಾವಣೆ ಗೊಂಡು ಮರು ವರ್ಗಾವಣೆಯಾದ ನೌಕರರಿಗೆ ಕೌನ್ಸಿಲಿಂಗ್ ಮೂಲಕ ನಿಯೋಜನೆ ಮಾಡಬೇಕು ಎಂದು ವಿನಂತಿಸಿದರು. ಅದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಸಹ ಸಹಮತ ವ್ಯಕ್ತಪಡಿಸಿ ಆ ನಿಟ್ಟಿನಲ್ಲಿ ಕ್ರಮ ಜರುಗಿಸುವ ಭರವಸೆ ನೀಡಿದರು.

ಪೊಲೀಸ್ ಪ್ರಕರಣದಲ್ಲಿ ಬಿ ಮತ್ತು ಸಿ ರಿಪೋರ್ಟ್‌ ಆದ ನೌಕರರಿಗೆ ತಕ್ಷಣ ವರ್ಗಾವಣೆ ಮಾಡಲು ಸೂಚಿಸಿದರು. ಅಲ್ಲದೇ, ಪೊಲೀಸ್ ಪ್ರಕರಣ ಇರುವ ಸಿಬ್ಬಂದಿಗಳ ಮಾಹಿತಿ ಪಡೆದು ಅದರಲ್ಲಿ ಗಂಭೀರವಲ್ಲದ ಪೊಲೀಸ್‌ ಪ್ರಕರಣ ಇರುವ ಸಿಬ್ಬಂದಿಗಳ ವರ್ಗಾವಣೆಯನ್ನೂ ಮಾಡುವುದಾಗಿ ತಿಳಿಸಿದರು.

ಅಲ್ಲದೆ ಈ ವಿಷಯದಲ್ಲಿ ಭದ್ರತಾ ಮತ್ತು ಜಾಗೃತಾ ಅಧಿಕಾರಿಗಳಿಗೆ ವರದಿ ಕಳುಹಿಸಲು ಸೂಚಿಸಿ ಡಿಸಿಗಳಿಗೆ ತುರ್ತಾಗಿ ಪತ್ರ ಬರೆಯಲು ತಾಕೀತು ಮಾಡಿದರು.

ಹೊಸಪೇಟೆ ಮತ್ತು ಬೀದರ್‌, ಕಲಬುರಗಿ ವಿಭಾಗಗಳಲ್ಲಿ ಮುಷ್ಕರದ ಅವಧಿಯ ಗೈರುಹಾಜರಿಗಳನ್ನು ಮುಂದೆ ಮಾಡಿ ಕಾರ್ಮಿಕರ ಸಂಬಳದಲ್ಲಿ ಶೇ.70 ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ದಂಡವಿಧಿಸುವ ಆದೇಶ ಹೊರಡಿಸಿದ್ದಾರೆ. ಇದು ಕಾರ್ಮಿಕ ವಿರೋಧಿಯಾಗಿದೆ ಎಂದು ಮುಖಂಡರು ಎಂಡಿ ಗಮನ ಸೇಳೆದಾಗ ತಕ್ಷಣ ವರದಿ ತರಿಸಿ ಕ್ರಮ ಜರುಗಿಸುತ್ತೇನೆ ಎಂದರು.

ಇನ್ನು ಅಧಿಕಾರಿಗಳು ನಡೆಸುವ ಕುಂದು ಕೊರತೆ ಸಭೆಗೆ ಕೂಟದ ಪದಾಧಿಕಾರಿಗಳನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದರು. ನಿಯೋಗದ ಮನವಿಗೆ ಸ್ಪಂದಿಸಿದ ಎಂಡಿ ಮುಂದಿನ ಸಭೆಗೆ ಕೂಟದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವರ್ಗಾವಣೆ ಗೊಂಡ ನೌಕರರನ್ನು ಹೊಸಪೇಟೆ ವಿಭಾಗದಲ್ಲಿ ಬಿಡುಗಡೆಗೊಳಿಸಲು ಪೀಡಿಸುತ್ತಿದ್ದಾರೆ ಈ ಬಗ್ಗೆ ಶೀಘ್ರ ಕ್ರಮಜರುಗಿಸಿ ನೌಕರರ ಸಮಸ್ಯೆ ನೀಗಿಸಬೇಕು, ಜತೆಗೆ ಅಧಿಕಾರಿಗಳ ಬೇಜವಾಬ್ದಾರಿ ನಡೆಯನ್ನು ನಿಯಂತ್ರಿಸಬೇಕು ಎಂದು ಮನವಿ ಮಾಡಿದರು. ಮುಖಂಡರ ಮನವಿಗೆ ವ್ಯವಸ್ಥಾಪಕ ನಿರ್ದೇಶಕರು ಸ್ಪಂದಿಸಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಮುಖವಾಗಿ ಕೆಲವು ನೌಕರರ ಕುಟುಂಬ ಸಮಸ್ಯೆ ಮತ್ತು ಆರೋಗ್ಯ ಸಮಸ್ಯೆ ಇರುವುದರಿಂದ ಡಿಪೋ ನಿಯೋಜನೆ ಬಗ್ಗೆ ಗಮನ ಸೇಳೆದರು. ಅದಕ್ಕೆ ತಕ್ಷಣ ಸ್ಪಂದಿಸಿದ ಎಂಡಿ ನಿಯೋಜನೆ ಮಾಡುವಂತೆ ಸ್ಥಳದಲ್ಲಿಯೇ ಇಂದ್ದ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಬಗೆ ಹರಿಸಿದರು.

ಇನ್ನೂ ಮುಂದೆ ನಿಗಮದಲ್ಲಿ ಅಧಿಕಾರಿಗಳಿಗೆ ಮತ್ತು ಕಾರ್ಮಿಕರಿಗೆ ಸಮಾನವಾದ ನೀತಿಗಳನ್ನು ಜಾರಿಗೊಳಿಸುವುದಾಗಿ ವ್ಯವಸ್ಥಾಪಕ ನಿರ್ದೇಶಕರು ಭರವಸೆ ನೀಡಿದರು.

ಇಂದು ಸೌಹಾರ್ದ ಮತ್ತು ಗಂಭೀರವಾಗಿ ಚರ್ಚೆ ನಡೆಯಿತು. ನಂತರ ಕೂಟದ ನಿಯೋಗ ಮುಖ್ಯ ಸಂಚಾರಿ ವ್ಯವಸ್ಥಾಪಕರು ಹಾಗೂ ಮುಖ್ಯ ಉಪ ಭದ್ರತಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿತು. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು.

ನಿಯೋಗದಲ್ಲಿಕಾರ್ಮಿಕ ಮುಖಂಡರಾದ ಜಯರಾಮ ರಾಠೋಡ, ಸುಭಾಷ್ ಆಲೂರು, ಉದಯಕುಮಾರ, ನಬಿ ಸಾಬ್, ಶಿವಲಿಂಗಪ್ಪಾ ಹೂಗಾರ, ಪ್ರಕಾಶ ಚಿಂಚೋಳಿ, ಶಿವಪುತ್ರಪ್ಪಾ ಪೂಜಾರಿ, ಸಾಹೇಬ್ ಪಟೇಲ್ , ಸಿದ್ದನಗೌಡ ಪಾಟೀಲ್ ಇನ್ನಿತತರರು ಉಪಸ್ಥಿತರಿದ್ದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...