ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿ ಶಾಕ್ ಮಧ್ಯೆ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋವು ಕೊಟ್ರಾ ಎಂಬ ಪ್ರಶ್ನೆ ಮೂಡಿದೆ.
ಜಮೀರ್ ಮನೆ ಮೇಲೆ ಇಡಿ ದಾಳಿಯಾಗುತ್ತಿದ್ದಂತೆ ಮಾಜಿ ಸಿಎಂ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೇ ಹೀಗೆ ಮಾಡಿಬಿಟ್ರಲ್ಲಾ ಎಂದು ಜಮೀರ್ ಅವರು ತಮ್ಮ ಆಪ್ತರ ಮುಂದೆ ನೋವು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನು ಗಮನಿಸಿದರೆ ಕಷ್ಟದ ಸಮಯದಲ್ಲಿ ನಂಬಿಕೊಂಡಿದ್ದ ಸಿದ್ದರಾಮಯ್ಯ ಅವರೇ ಇಡಿ ದಾಳಿಯಾಗುತ್ತಿದ್ದಂತೆ ಕೈಬಿಟ್ಟರಾ ಅನ್ನೋ ಅನುಮಾನ ಮೂಡಿದೆ. ‘ಮುಂದಿನ ಸಿಎಂ’ ಅಂತ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದ ಜಮೀರ್ ಈಗ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕಷ್ಟದ ಸಮಯದಲ್ಲಿ ನಂಬಿದ್ದ ಸಿದ್ದರಾಮಯ್ಯ ಕೈಬಿಟ್ಟರು. ಇಡಿ ದಾಳಿ ಆಗ್ತಿದ್ದಂತೆಯೇ ಡಿಕೆಶಿ ನನ್ನ ನೆರವಿಗೆ ಬಂದರು. ನನ್ನ ನಾಯಕ ಅಂತ ನಂಬಿದ್ದ ಸಿದ್ದರಾಮಯ್ಯ ಒಂದೇ ಒಂದು ಮಾತಾಡ್ಲಿಲ್ಲ. ಇಡಿ ದಾಳಿ ನೋವಲ್ಲಿ ಭೇಟಿಗೆ ಬರ್ತೇನೆ ಅಂದ್ರೂ ಸಿದ್ದರಾಮಯ್ಯ ಬೇಡ ಅಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾನು ನಂಬಿದ ನಾಯಕನೇ ಕಷ್ಟಕ್ಕೆ ಆಗಲಿಲ್ಲ. ಬೇರೆ ಏನಾಗಿದ್ರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅವರು ಹೀಗೆ ಮಾಡಬಾರದಿತ್ತು. ನನ್ನ ಮನಸ್ಸೇ ಒಡೆದು ಹೋಯಿತು. ಭಾರೀ ನೋವಾಗುತ್ತಿದೆ ಎಂದು ಜಮೀರ್ ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.