ಬೆಂಗಳೂರು: ಪೆಟ್ರೋ ಲ್ -ಡೀಸೆಲ್ ಬೆಲೆ ಮಾತ್ರವಲ್ಲ, ಅಡುಗೆ ಅನಿಲ ಬೆಲೆಯನ್ನು ಸಹ ಇಳಿಸಬೇಕು. ಈ ಮೂಲಕ ಕೇಂದ್ರ ಸರ್ಕಾರ ಮಹಿಳೆಯರ ಕಷ್ಟ ಅರಿತು ಸ್ಪಂದಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿ ಮಾಡಬೇಕು. ಕೋವಿಡ್ ನಂತರದ ಪರಿಸ್ಥಿತಿಯಲ್ಲಿ ನಿರುದ್ಯೋ ಗಿ ಗಳ ಸಂಖ್ಯೆ ಹೆಚ್ಚಿದೆ. ಇದು ದೇಶದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂದರು.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರು ಮಾರ್ಕೆಟ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರಸ್ಗೆ ಬರುವವರು ಬೇಕಾದಷ್ಟು ಇದ್ದಾರೆ. ನನಗೆ ಅಥವಾ ಬೇರೊಬ್ಬರಿಗೆ ಇಷ್ಟವಿಲ್ಲ ಎನ್ನುವ ಪ್ರೆಶ್ನೆಯಿಲ್ಲ. ಪಕ್ಷದ ತೀರ್ಮಾನ ಮುಖ್ಯ. ಈಗ ಹೋಗಿರುವ 15 ಜನರ ಸ್ಥಿತಿ ಏನಾಗುತ್ತದೆ ನೋಡೋಣ ಎಂದರು.