NEWSನಮ್ಮರಾಜ್ಯ

ಸಾರಿಗೆ ಕಾರ್ಮಿಕರ ಸಮಸ್ಯೆ ಆಲಿಸದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ತಮ್ಮ ಮೂಲಭೂತ ಹಾಗೂ ಕಾನೂನು ಬದ್ಧ ಹಕ್ಕುಗಳಲ್ಲಿ ಒಂದಾದ ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುವ ಹಂಬಲದಲ್ಲಿ ಸಾರಿಗೆ ಕಾರ್ಮಿಕರು ಕಳೆದ ಏಪ್ರಿಲ್‌ನಲ್ಲಿ ಮುಷ್ಕರ ನಡೆಸಿದರು. ಅದು ಕಾನೂನಾತ್ಮಕವಾಗಿಯೇ ಮುಷ್ಕರ ನಡೆಸಿದರೂ ಸಾರಿಗೆ ಆಡಳಿತ ವರ್ಗ ತನ್ನ ವಕ್ರದೃಷ್ಟಿಬೀರಿ ಸಾವಿರಾರು ಕಾರ್ಮಿಕರಿಗೆ ಕಿರುಕುಳ ನೀಡುತ್ತಿದೆ.

ಇದು ಸ್ವತಃ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರಿಗೆ ಗೊತ್ತಿದ್ದರೂ ಏನು ಗೊತ್ತಿಲ್ಲದಂತೆ ಈ ವರೆಗೂ ಸಾರಿಗೆ ಕಾರ್ಮಿಕರ ನೆರವಿಗೆ ಬಂದಿಲ್ಲ. ಇದರಿಂದ ಸರ್ಕಾರದ ಅಧೀನ ಸಂಸ್ಥೆಯಾದ ಸಾರಿಗೆ ಸಂಸ್ಥೆಯಲ್ಲಿ ಅಧಿಕಾರಿಗಳ ದರ್ಪ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಲೇ ಇದೆ.

ಇದನ್ನೂ ಓದಿ: ಕೊಟ್ಟ ಮಾತಿಗೆ ಬದ್ಧರಾಗದ ಕಲಿಯುಗದ ಶ್ರೀರಾಮು: ನ.2ರಂದು ಸಭೆ ಕರೆಯದೆ ಮಾತು ತಪ್ಪಿದ ಸಾರಿಗೆ ಸಚಿವರು

ಏಕೆ ಕಾರ್ಮಿಕ ಸಚಿವರೇ ನೀವು ಯಾವುದಾದರೊಂದು ಖಾಸಗಿ ಕಂಪನಿಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿದ ಕೂಡಲೇ ಆ ಕಂಪನಿ ಮಾಲೀಕರ ಭೇಟಿ ಮಾಡಿ ಕಾರ್ಮಿಕರಿಗೆ ನ್ಯಾಯಬದ್ಧವಾದ ವೇತನ ಇತರ ಭತ್ಯೆಗಳನ್ನು ಕೊಡಬೇಕು ಎಂದು ಆದೇಶ ಮಾಡುತ್ತೀರಿ. ಆದರೆ, ನಿಮ್ಮ ಸರ್ಕಾರದಲ್ಲೇ ಅದು ಸರ್ಕಾರದ ಅಧೀನದಲ್ಲೇ ಬರುವ ಸಾರಿಗೆಯ ನಾಲ್ಕೂ ನಿಗಮಗಳಲ್ಲೂ ಕಾರ್ಮಿಕರಿಗೆ ನಿತ್ಯ ಒಂದಿಲ್ಲೊಂದು ಕಿರುಕುಳ ನೀಡುತ್ತಿದ್ದರು ತುಟ್ಟಿಬಿಚ್ಚಲ್ಲವೇಕೆ?

ಸಾರಿಗೆ ನಿಗಮಗಳ ಕಾರ್ಮಿಕರು ನಿಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲವೇ. ಅವರ ಸಮಸ್ಯೆಗೆ ನಿಮ್ಮ ಇಲಾಖೆಯಲ್ಲಿ ಪರಿಹಾರ ಇಲ್ಲವೆ. ಇಲ್ಲ ನಮ್ಮದೇ ಸರ್ಕಾರದ ಇನ್ನೊಂದು ಇಲಾಖೆಯಲ್ಲಿ ನಾವು ಹೇಗೆ ಹಸ್ತಕ್ಷೇಪ ಮಾಡುವುದು ಎಂದು ಯೋಚಿಸುತ್ತಿದ್ದೀರಾ?

ಇದನ್ನೂ ಓದಿ: ಸಾರಿಗೆ ನೌಕರರ ಪ್ರಕರಣ: ವಿಚಾರಣೆಗೆ ಗೈರಾದ ನೌಕರರ ಪರ ವಕೀಲರು, ಕಾರಣ ನಿಗೂಢ

ನೋಡಿ ಖಾಸಗಿ ಸಂಸ್ಥೆಯಾಗಿರಲಿ ಅಥವಾ ಸರ್ಕಾರದ ಅಧೀನದಲ್ಲಿರುವ ಯಾವುದೇ ಸಂಸ್ಥೆಯಾಗಲಿ ಕಾರ್ಮಿಕ ವಿರೋಧಿ ಚಟುವಟಿಕೆಯಲ್ಲಿ ಅಲ್ಲಿನ ಆಡಳಿತ ವರ್ಗ ತೊಡಗಿದೆ ಎಂಬುವುದು ಮೇಲ್ನೋಟಕ್ಕೆ ತಿಳಿದು ಬಂದರೆ ಕೂಡಲೇ ಅದನ್ನು ಸರಿ ಪಡಿಸಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಬೇಕಾದ ಗುರುತರವಾದ ಜವಾಬ್ದಾರಿ ನಿಮ್ಮ ಮೇಲೆ ಮತ್ತು ನಿಮ್ಮ ಇಲಾಖೆಯ ಮೇಲಿದೆ ಎಂಬುದನ್ನು ಮರೆಯಬೇಡಿ.

ಸಾರಿಗೆ ನೌಕರರು ನಿರಂತರವಾಗಿ ಕಿರುಕುಳಕ್ಕೆ ಒಳಗಾಗುತ್ತಲೇ ಇದ್ದಾರೆ. ಆದರೂ ಈವರೆಗೂ ಈ ಬಗ್ಗೆ ಮಾತನಾಡದಿರುವುದು ನೀವು ಇಲಾಖೆಯ ಸಚಿವ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅರ್ಹರ ಎಂದು ನೀವೇ ಒಂದು ಕ್ಷಣ ಯೋಚಿಸಿ.

ಇನ್ನಾದರೂ ಸಾರಿಗೆ ಇಲಾಖೆಯಲ್ಲಿ ಕಾರ್ಮಿಕರಿಗೆ ಆಗುತ್ತಿರುವ ಕಿರುಕುಳ, ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಮುಂದಾಗಿ. ಆ ಮೂಲಕ ನೀವು ಒಬ್ಬ ಕಾರ್ಮಿಕ ಸಚಿವ ಎಂಬುದನ್ನು ತೋರಿಸಿಕೊಳ್ಳಿ. ಇದಕ್ಕೆ ಇದು ಸೂಕ್ತ ಸಮಯವಾಗಿದೆ. ಅದನ್ನು ಬಿಟ್ಟು ಕಾರ್ಮಿಕ ವಿರೋಧಿ ನಿಲುವನ್ನು ತಳೆದಿರುವ ಆಡಳಿತ ವರ್ಗಕ್ಕೆ ಪರೋಕ್ಷವಾಗಿ ಬೆಂಬಲ ನೀಡಿ ನೀವು ಕೂಡ ಕಾರ್ಮಿಕ ವಿರೋಧಿಯಾಗಿದ್ದೇವೆ ಎಂದು ಸಾಬೀತು ಪಡಿಸಿಕೊಳ್ಳಬೇಡಿ.

ಇದನ್ನೂ ಓದಿ:  ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿ 150ಕ್ಕೂ ಹೆಚ್ಚು ನೌಕರರ ಆತ್ಮಹತ್ಯೆ: ಕನಿಷ್ಠಪಕ್ಷ ಒಬ್ಬರ ಕುಟುಂಬಕ್ಕೂ ಸಾಂತ್ವನ ಹೇಳದ ಇಲಾಖೆ ಅಧಿಕಾರಿಗಳು, ಸಚಿವರು

ಈಗಾಗಲೇ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಹಲವಾರು ಬಾರಿ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ನೌಕರರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುತ್ತೇವೆ ಎಂದು ಹೇಳಿಕೊಂಡು ಕಾಲ ಕಳೆಯುತ್ತಲೇ ಬಂದಿದ್ದಾರೆ. ಅದೇ ಮಾರ್ಗದಲ್ಲಿ ನೀವು ಭರವಸೆಗಳನ್ನಷ್ಟೇ ಕೊಡದೆ ಕಾರ್ಮಿಕರ ಸಮಸ್ಯೆಗೆ ಶ್ರೀರಾಮುಲು ಮತ್ತು ಆಡಳಿತ ವರ್ಗದ ಜತೆ ಚರ್ಚಿಸಿ ಅಂತಿಮ ಪರಿಹಾರ ನೀಡಬೇಕಿದೆ.

ಈ ನಿಟ್ಟಿನಲ್ಲಿ ನೀವು ಕಾರ್ಯಪ್ರವೃತ್ತರಾಗುವಿರಿ ಎಂದು ಸಾರಿಗೆ ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಹೀಗಾಗಿ ನೀವು ಕಾರ್ಮಿಕರ ಧ್ವನಿಯಾಗುವಿರೋ ಇಲ್ಲವೂ….

ಇನ್ನು ನಿನ್ನೆ ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರು ಕೋವಿಡ್ ಸಂಕಷ್ಟ ಸಮಯದಲ್ಲಿ ಕಾರ್ಮಿಕರ ಹಿತದೃಷ್ಟಿಯಿಂದ ಆಹಾರ ಕಿಟ್ ವಿತರಿಸಲಾಗಿದೆ. ರಾಜ್ಯದಲ್ಲಿ ಕಾರ್ಮಿಕರಿಗೆ ರೂ.97 ಕೋಟಿ ಹಾಗೂ ಹಾವೇರಿ ಜಿಲ್ಲೆಗೆ ರೂ.31 ಕೋಟಿ ಸಹಾಯಧನ ನೀಡಲಾಗಿದೆ ಎಂದು ಹೇಳಿದ್ದರು.

ಜತೆಗೆ ಕೃಷಿ ಹಾಗೂ ಕಾರ್ಮಿಕರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಕಾರ್ಮಿಕರು ಮತ್ತು ಕೃಷಿಕರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಕೂಡ ಹೇಳಿದ. ಅದರಂತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಅಭಿವೃದ್ಧಿಗೂ ನಾನವು ಹೆ೩ಚ್ಚಿನ ಗಮನಕೊಡುತ್ತೇವೆ ಎಂದು ಏಕೆ ಹೇಳುತ್ತಿಲ್ಲ ಈ ಸಚಿವರು…?

Leave a Reply

error: Content is protected !!
LATEST
ನಾಳೆ KSRTC ನೌಕರರಿಗೆ ನಗದು ರಹಿತಾ ವೈದ್ಯಕೀಯ ಚಿಕಿತ್ಸಾ ಯೋಜನೆ ಜಾರಿ ಸಂಬಂಧ ಎಂಡಿ ಅಧ್ಯಕ್ಷತೆಯಲ್ಲಿ ಸಭೆ BMTC: 7ದಿನಗಳಿಂದ LMSನಲ್ಲಿ ರಜೆ ಹಾಕಲಾಗದೆ ನೌಕರರ ಪರದಾಟ- ಸಮಸ್ಯೆ ಗೊತ್ತಿದ್ದರೂ ಅಧಿಕಾರಿಗಳು ಮೌನ BMTC: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಚಾಲಕ ನಿಧನ- ಸಾರಿಗೆ ಸಚಿವರು, ಎಂಡಿ ಸಂತಾಪ BMTC ಚಿಕ್ಕಲ್ಲಸಂದ್ರ: ಅವೈಜ್ಞಾನಿಕ ಸುತ್ತುವಳಿ ಸಮಯ ನಿಗದಿ ಮಾಡಿರುವುದಲ್ಲದೆ ವ್ಯಕ್ತಿಯೊಬ್ಬನ ದೂರಿಗೆ ಮಣೆಹಾಕಿ ನೌಕರರ... "ಲೋಕಾ"ವಿಚಾರಣೆ ಬಳಿಕ ಮುಗುಳ್ನಗುತ್ತಲೇ ಹೊರ ಬಂದ ಸಿಎಂ ಸಿದ್ದರಾಮಯ್ಯ ಸಿಎಂ ರಾಜೀನಾಮೆಗೆ ಆಗ್ರಹಿಸಿ ಕೇಸರಿ ಪಡೆಯಿಂದ “ಗೋ ಬ್ಯಾಕ್ ಸಿಎಂ ಚಳವಳಿ” LMV ಡಿಎಲ್‌ ಇರುವವರು 7,500 ಕೆಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನ ಚಲಾಯಿಸಲು ಅರ್ಹರು: ಕೋರ್ಟ್‌ ಆದೇಶ NWKRTC ಕಲಘಟಗಿ ಘಟಕಕ್ಕೆ ಎಂಡಿ ಪ್ರಿಯಾಂಗಾ ಭೇಟಿ: ನೌಕರರ ಕುಂದುಕೊರತೆ ಆಲಿಕೆ BMTC ಸಾಥ್‌ನಿಂದ ಒಂದೇದಿನದಲ್ಲಿ 5.59 ಕೋಟಿ ರೂ. ಆದಾಯ ಗಳಿಸಿದ KSRTC KSRTC: ಆದಾಯ ಸಂಗ್ರಹಣೆಯಲ್ಲಿ 2ನೇ ಘಟಕ ಪ್ರಥಮ- ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ತಿಳಿಸಿದ ಸಾರಿಗೆ ಸಚಿವರು, ಅಧಿಕಾರ...