ಮೈಸೂರು: ರಾಹುಲ್ ಗಾಂಧಿ ಡ್ರಗ್ ಅಡಿಟರ್, ಡ್ರಗ್ ಪೆಡ್ಲರ್ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಹುಚ್ಚ, ಮೂರ್ಖರ ನಾಯಕ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಬುಧವಾರ ನಗರದ ಜೆಎಲ್ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಒಬ್ಬ ಆಯೋಗ್ಯ, ಅವಿವೇಕಿ, ಸಂಸ್ಕೃತಿ ಹೀನ ವ್ಯಕ್ತಿ. ಅನ್ ಕಲ್ಚರಲ್ ಬ್ರೂಟ್.
ಒಬ್ಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದವ. ಆ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟಕೊಂಡಿದ್ದ ಕಟೀಲ್, ತನ್ನ ಪ್ರಭಾವ ಬಳಸಿ ಪ್ರಕರಣವನ್ನು ಮುಚ್ಚಿಹಾಕಿದ್ದಾನೆ ಎಂದು ಏಕವಚನದಲ್ಲಿ ಹರಿಹಾಯ್ದರು.
ಈ ಸಂಬಂಧ 2014 ರಲ್ಲಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಟೀಲ್, ಆ ಮಹಿಳೆಯ ಪತಿಯನ್ನು ಬ್ಲಾಕ್ ಮೇಲ್ ಮಾಡಿದ್ದರು.
ವಿನಾಯಕ ಬಾಳಿಗ ಹತ್ಯೆಯ ಪ್ರಮುಖ ಆರೋಪಿ ನರೇಶ್ ಶೆಣೈನ ಖಾಸಾ ದೋಸ್ತ್ ಕಟೀಲ್. ಹತ್ಯೆ ಪ್ರಕರಣದಲ್ಲಿ ಅವರ ಕೈವಾಡವೂ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಆಗಿದ್ರೆ ನಿಮ್ಮಲ್ಲೆ ಎನ್ಸಿಬಿ, ಇಡಿ, ಐಡಿ, ಸಿಬಿಐ, ಇತ್ಯಾದಿಗಳು ಇದೆ ತನಿಖೆ ಮಾಡಿ. ಸೋನಿಯಾ ಗಾಂಧಿ ಬೇಲ್ ನಲ್ಲಿ ಇದ್ದಾರೆ ಅಂತೀರಲ್ಲ. ನಿಮ್ಮ ಅಮಿತ್ ಶಾ ಬೇಲ್ ನಲ್ಲಿ ಇಲ್ಲದೇ ಬೇರೆ ಯಾವುದರಲ್ಲಿ ಇದ್ದಾರೆ. ನಿಮ್ಮ ಲೀಡರ್ತರ ಕೊಲೆಕೇಸ್ ನಲ್ಲಿ ಜೈಲಿಗೆ ಹೋಗಿಲ್ಲ. ನೀನೊಬ್ಬ ಅವಿವೇಕಿಗಳ, ಹುಚ್ಚರ ಬ್ರ್ಯಾಂಡ್ ಅಂಬಾಸಿಡರ್ ಎಂದು ಕಿಡಿಕಾರಿದ್ದಾರೆ.
ನಿಮ್ಮ ಮೋದಿ 7 ವರ್ಷದಲ್ಲಿ 84 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನು ಬಿಟ್ಟು ಬೇರೆ ಏನೇನೋ ಚರ್ಚೆ ಮಾಡ್ತಿರಲ್ಲ. ರಾಜ್ಯ ಬಿಜೆಪಿಯಲ್ಲಿ 17 ಮಂದಿ ಬೇಲ್ ಮೇಲೆ ಇದ್ದಾರೆ. ರೇಣುಕಾಚಾರ್ಯ, ಸದಾನಂದಗೌಡ, ಪ್ರತಾಪ್ ಸಿಂಹ ರಂತಹ ಅನೇಕ ಮಹಿಳಾ ಪೀಡಕರು ಇದ್ದಾರೆ.
ಅರವಿಂದ ಲಿಂಬಾವಳಿ, ಯತ್ನಾಳ್ ರಂತಹ ಸಲಿಂಗಕಾಮಿಗಳು ಇದ್ದಾರೆ. ತಮ್ಮಲ್ಲೇ ಹುಳುಕು ಇಟ್ಕೊಂಡು ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದೀರಿ. ಒಬ್ಬ ಅಧ್ಯಕ್ಷರ ಮೇಲೆ ಆರೋಪ ಮಾಡುವ ಮೊದಲು ಯೋಚನೆ ಮಾಡಿ ಮಾತನಾಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿಹಿಡಿದು ಮಾತಾಡಬೇಕು. ಕಾಂಗ್ರೆಸ್ನ ವೈಫಲ್ಯ ಪ್ರಸ್ತಾಪಿಸಿ ಅಥವ ನಿಮ್ಮ ಸಾಧನೆಗಳನ್ನು ತಿಳಿಸಿ. ಈ ಸಂಬಂಧ ನಾವು ಬಹಿರಂಗ ಚರ್ಚೆಗೆ ಬರಲು ಸಿದ್ಧರಿದ್ದೇವೆ. ಕೇವಲ ಊಹೆ, ಕಾಲ್ಪನಿಕ ಆಧಾರದ ಮೇಲೆ ನಮ್ಮ ನಾಯಕರ ತೇಜೋವಧೆ ಮಾಡಬೇಡಿ ಎಂದರು.
ಕೇವಲ ಪ್ರಚಾರಕ್ಕೋಸ್ಕರ ಹೇಳಿಕೆಗಳನ್ನು ನೀಡಬೇಡಿ. ಇದೇ ರೀತಿ ಮುಂದುವರಿದರೆ ನಿಮ್ಮ ಮನೆ ಮತ್ತು ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಪ್ರಧಾನಿ ನರೇಂದ್ರಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂದಿದ್ದಕ್ಕೆ ಪ್ರಕರಣ ದಾಖಲಿಸಿದ್ದಾರೆ. ಇದೀಗ ರಾಹುಲ್ ಗಾಂದಿಯನ್ನು ಡ್ರಗ್ ಅಡಿಕ್ಟ್ ಎಂದಿದ್ದಾರೆ. ಹೀಗಾಗಿ ಕಟೀಲ್ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು.
ಬಿಜೆಪಿಯ ಹಲವಾರು ಮುಖಂಡರು ರಾಜ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಯಾರೂ ಕೂಡ ಈ ರೀತಿ ನಾಲಿಗೆ ಹರಿಬಿಟ್ಟಿರಲಿಲ್ಲ. ನಳೀನ್ ಕುಮಾರ್ ಕಟೀಲ್ ಓರ್ವ ಜೋಕರ್ನಂತೆ ವರ್ತಿಸುತ್ತಿದ್ದಾರೆ. ನಾನೊಬ್ಬ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಕೆ ಎಂಬುದನ್ನೇ ಮರೆತಿದ್ದಾರೆ ಎಂದು ಹೇಳಿದರು.