NEWSನಮ್ಮರಾಜ್ಯಶಿಕ್ಷಣ-

ಕೊರೊನಾ ಲಾಕ್​ಡೌನ್​ ಸಡಿಲಗೊಂಡರು ಮೈಸೂರು ಮೃಗಾಲಯಕ್ಕೆ ನೋ ಎಂಟ್ರಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮೈಸೂರು: ಮೈಸೂರಿನಲ್ಲಿ ಲಾಕ್​ಡೌನ್​ ತೆರವುಗೊಂಡರು ಮೈಸೂರು ಮೃಗಾಲಯಕ್ಕೆ ಇನ್ನೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಈಗ ಕೊರೊನಾ ಸೋಂಕಿನ ತೀವ್ರತೆಯೂ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದು, ಲಾಕ್​ಡೌನ್​ ಸಡಿಲಗೊಂಡಿದೆ. ಹೀಗಾಗಿ 3 ಮೃಗಾಲಯಕ್ಕೆ ಪ್ರವಾಸಿಗರಿಗೆ ಅವಕಾಶ‌ ನೀಡಲಾಗಿದೆ. ಬನ್ನೇರುಘಟ್ಟ ಮೃಗಾಲಯ ಕೂಡ ಇನ್ನೊಂದು ವಾರದಲ್ಲಿ ತೆರೆಯಲಿದೆ. ಆದರೆ ಮೈಸೂರು ಮೃಗಾಲಯಕ್ಕೆ ಮಾತ್ರ ಸಾರ್ವಜನಿಕರ ಪ್ರವೇಶಕ್ಕೆ ಇನ್ನು ಅವಕಾಶ ಮಾಡಿಕೊಟ್ಟಿಲ್ಲ. ಮುಂದಿನ ವಾರದೊಳಗೆ ಪ್ರವೇಶದ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಕೊರೊನಾದಿಂದ ತೀರ ಸಂಕಷ್ಟಕ್ಕೆ‌ ಸಿಲುಕಿದ್ದ ಮೃಗಾಲಯಕ್ಕೆ ಈ ಬಾರಿ ಆಸರೆಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.‌ ಇವರ ಅಭಿಯಾನಕ್ಕೆ‌ 3 ಕೋಟಿ ರೂ.ಗೂ ಅಧಿಕ ದೇಣಿಗೆ ಸಂಗ್ರವಾಗಿದ್ದು, ಪ್ರಾಣಿಗಳ ಹಸಿವು ನೀಗಿಸಲು ಜನರು ಮುಂದೆ ಬಂದಿದ್ದಾರೆ.‌

ಲಾಕ್‌ಡೌನ್‌ನಿಂದಾಗಿ ರಾಜ್ಯದ ಎಲ್ಲ 9 ಮೃಗಾಲಯಗಳೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ, ಪ್ರಾಣಿಗಳ ಆಹಾರಕ್ಕೂ ಹಣವಿಲ್ಲದೆ ಪರದಾಡುತ್ತಿರುವ ಸ್ಥಿತಿ ಕರ್ನಾಟ ಮೃಗಾಲಯ ಪ್ರಾಧಿಕಾರಕ್ಕೆ ಬಂದೊದಗಿತ್ತು. ಈ ವೇಳೆ ಮೃಗಾಲಯಗಳ ಸಂಕಷ್ಟಕ್ಕೆ ನೆರವಾಗಿದ್ದು, ದರ್ಶನ್.‌ ಅರಣ್ಯ ಇಲಾಖೆಯ ರಾಯಭಾರಿಯು ಆಗಿರುವ ನಟ ದರ್ಶನ್ ವಿಡಿಯೋ ಮೂಲಕ ಮೃಗಾಲಯ ಸಂಕಷ್ಟಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದರು.

ಈ ಬೆನ್ನಲ್ಲೆ 3.25 ಕೋಟಿ ಹಣ ಸಂಗ್ರಹವಾಗಿದೆ. ಹಣ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯವಾಗಿದ್ದು. ದರ್ಶನ್​ ಅವರ ಅಭಿಮಾನಿಗಳು ಹಾಗೂ ವನ್ಯಜೀವಿ ಪ್ರಿಯರು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ನೆರವಿಗೆ ಮುಂದಾಗಿದ್ದಾರೆ. 50 ರೂಪಾಯಿಂದ ಒಂದೂವರೆ ಲಕ್ಷದವರೆಗೂ ಸಾಕಷ್ಟು ಜನರು ನೆರವು ನೀಡಿದ್ದಾರೆ. ಇದರಿಂದ 3.25 ಕೋಟಿ ರೂ. ಸಂದಾಯವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ನಟ ದರ್ಶನ್​ಗೆ ಧನ್ಯವಾದ ತಿಳಿಸಿದ್ದಾರೆ.

ರಾಜ್ಯದಲ್ಲಿ ಲಾಕ್​ಡೌನ್ ತೆರವಾಗಿ ಪ್ರವಾಸೋದ್ಯಮ ಚಟುವಟಿಕೆ ಪ್ರಾರಂಭವಾಗಿದ್ದು, ಸದ್ಯ ಗದಗ, ಹಂಪಿ, ಮೃಗಾಲಯಗಳು ಪ್ರವಾಸಿಗರಿಗಾಗಿ ತೆರೆದಿವೆ. ಇನ್ನು ಮುಂದಿನ‌ವಾರದಿಂದ ಬನ್ನೇರುಘಟ್ಟ ಮೃಗಾಲಯ ಕೂಡ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ.‌

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...