NEWSನಮ್ಮರಾಜ್ಯ

ವಜಾಗೊಂಡ ಎಲ್ಲ ಸಾರಿಗೆ ನೌಕರರನ್ನು ಒಂದೇ ಬಾರಿಗೆ ಮರು ನಿಯೋಜನೆ ಮಾಡಲು ಅಧಿಕಾರಿಗಳು ಸಿದ್ಧ: ಶಾಸಕ ಮಹೇಶ್‌

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬಿಎಂಟಿಸಿ ಅಧಿಕಾರಿಗಳು ನೌಕರರ ಪರವಾಗಿದ್ದು, ವಜಾಗೊಂಡಿರುವ ಎಲ್ಲರೂ ಲೇಬರ್‌ ಕೋರ್ಟ್‌ನಲ್ಲಿ ಅರ್ಜಿ ಹಾಕಿದರೆ ವಜಾಗೊಂಡಿರುವವರೆಲ್ಲರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ತಿಳಿಸಿದ್ದಾರೆ.

ಸಾರಿಗೆ ನೌಕರರಿಗೆ ಉಂಟಾಗಿರುವ ಸಮಸ್ಯೆ ಕುರಿತು ಇಂದು ಸಾರಿಗೆ ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ನೌಕರರ ಜತೆ ಮಾತನಾಡಿದ ಅವರು, ಈ ಮೊದಲೇ ಸಚಿವರು ನಿಮ್ಮ ಎಲ್ಲ ವಜಾ ಪ್ರಕರಣಗಳನ್ನು ವಾಪಸ್‌ ಪಡೆಯುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಆದರೆ ನೀವೆ ಈವರೆಗೂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿಲ್ಲ.ಇದರಿಂದ ವಜಾ ಆದವರನ್ನು ಮರು ನಿಯೋಜನೆ ಮಾಡಲುವಲ್ಲಿ ವಿಳಂಬವಾಗುತ್ತಿದೆ ಎಂದರು.

ಇನ್ನು ನಾಳೆಯಿಂದಲೇ ವಜಾಗೊಂಡಿರುವ ಎಲ್ಲರೂ ಲೇಬರ್‌ ಕೋರ್ಟ್‌ನಲ್ಲಿ ಪ್ರಕರಣ ಸಂಬಂಧ ಅರ್ಜಿ ಹಾಕಿದರೆ ಒಂದು ತಿಗಳೊಳಗಾಗಿ ಒಂದೇ ಬಾರಿಗೆ ವಜಾಗೊಂಡಿರುವ ಎಲ್ಲ ನೌಕರರನ್ನು ವಾಪಸ್‌ ತೆಗೆದುಕೊಳ್ಳುವ ಪ್ರಕ್ರಿಯೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ತಿಳಿಸಿದರು.

ಇನ್ನು ನಿಮ್ಮ ನಿಗಮಗಳಲ್ಲಿ ನೋ ವರ್ಕ್‌ ನೋ ಪೇ ಪದ್ಧತಿ ಇರುವುದರಿಂದ ಈಗ ಏನು ಏಳೆಂಟು ತಿಂಗಳು ನೀವು ಕೆಲಸ ಮಾಡಿಲ್ಲ ಅದಕ್ಕೆ ವೇತನ ಸಿಗುವುದಿಲ್ಲ. ಈ ಬಗ್ಗೆ ನಮಗೆ ವೇತನ ಕೊಡಿಸಿ ಎಂದು ನಮ್ಮನ್ನು ಕೇಳಬೇಡಿ ಎಂದು ಕೂಡ ತಿಳಿಸಿದರು.

ಇನ್ನು ಲೇಬರ್‌ ಕೋರ್ಟ್‌ನಲ್ಲಿ ವಜಾಗೊಂಡವರು ಪ್ರಕರಣ ಪ್ರಕರಣ ದಾಖಲಿಸಿದರೆ ನಿಗಮಗಳ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಸಂಬಂಧ ಲೋಕ ಅದಾಲತ್‌ನಲ್ಲಿ ಪ್ರಕರಣವನ್ನು ತಂದು ಅಲ್ಲಿ ಕೆಲ ಕಂಡಿಷನ್‌ಗಳನ್ನು ಹಾಕಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಮೂಲಕವೇ ಎಲ್ಲ ನೌಕರರು ಮರು ನಿಯೋಜನೆ ಆಗಲಿದ್ದಾರೆ ಎನ್ನಲಾಗುತ್ತಿದೆ.

Leave a Reply

error: Content is protected !!
LATEST
KSRTC ಬಸ್‌ - ಕಾರು ನಡುವೆ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸೇರಿ ಹಲವರಿಗೆ ಗಾಯ NWKRTC: ಕರ್ತವ್ಯ ನಿರತರಾಗಿದ್ದಾಗಲೇ ಚಾಲಕರಿಗೆ ಹೃದಯಘಾತ - ವಿಜಯಪುರ ಬಸ್‌ ನಿಲ್ದಾಣದಲ್ಲೇ ಕುಸಿದು ಬಿದ್ದು ನಿಧನ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ, ಕೇಂದ್ರದ ಹಿಂದಿ ಹೇರಿಕೆಯಿಂದ ನಾಶವಾಗುತ್ತಿದೆ ಕನ್ನಡ : ರಮೇಶ್‌ ಬೆಳ್ಳಮ್ಕೊಂಡ KSRTC: 2024ರ ವೇತನ ಪರಿಷ್ಕರಣೆ ಸುಳಿವು ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ KKRTC ವಿಜಯಪುರ: ತಪ್ಪು ಮಾಡಿ ಅಮಾನತಾದ ಡಿಸಿ ಪರ ನಿಂತರೆ ನಿಗಮದ ಅಧಿಕಾರಿಗಳು!!? ಪಿರಿಯಾಪಟ್ಟಣ: ಲಂಚ ಸ್ವೀಕಾರ- ರೆಡ್ ಹ್ಯಾಂಡಾಗಿ ಲೋಕಾ ಬಲೆಗೆ ಬಿದ್ದ ಗುಮಾಸ್ತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ನೆರೆ ಭೀತಿಯಿಂದ ಬೆಂಗಳೂರಿಗರ ರಕ್ಷಿಸಿ: ಡಿಸಿಎಂಗೆ ಎಎಪಿ ರಾಜ್ಯಾಧ್ಯಕ್ಷ ಆಗ್ರಹ ಮಧ್ಯಮ ವರ್ಗದ ವ್ಯಕ್ತಿ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಮೌನಕ್ಕೆ ಶರಣಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ BBMP-ಡೆಂಗ್ಯೂ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ : ಸುರಳ್ಕರ್ ವಿಕಾಸ್ ಕಿಶೋರ್ ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ 18 ರಿಂದ 45 ವರ್ಷದವರಿಂದ ಅರ್ಜಿ ಆಹ್ವಾನ