Please assign a menu to the primary menu location under menu

NEWSನಮ್ಮರಾಜ್ಯ

ನೌಕರರ ವರ್ಗಾವಣೆ- ಆಡಳಿತ ವರ್ಗದ ಆದೇಶ ಅನ್ಯಾಯದ ಕ್ರಮ: ಸಿಐಟಿಯು ಕಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರಾರಸಾರಿಗೆ ನಿಗಮಗಳಲ್ಲಿ ಏಪ್ರಿಲ್- 2021ರ ಮುಷ್ಕರದ ವೇಳೆಯಲ್ಲಿ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದ ಘಟಕದಿಂದ ದೂರದ ವಿಭಾಗಕ್ಕೆ ಆ ವಿಭಾಗದಲ್ಲಿ ಯಾವ ಡಿಪೋ ದೂರವೋ ಅಂತಹ ಘಟಕಗಳಿಗೆ ಸಾವಿರಾರು ನೌಕರರನ್ನು ವರ್ಗಾವಣೆ ಮಾಡಿದರು.

ಇಂತಹ ಕಿರುಕುಳಗಳ ವರ್ಗಾವಣೆಯಿಂದ ಸಾರಿಗೆ ನಿಗಮಗಳು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶಕ್ಕೆ ಪೂರಕವಾಗಿರುವುದಿಲ್ಲ. ಚಾಲಕ- ನಿರ್ವಾಹಕ- ತಾಂತ್ರಿಕ ಮತ್ತು ಇತರ ಆಡಳಿತ ಸಿಬ್ಬಂದಿಗಳು ತಮ್ಮ ಕುಟುಂಬಗಳು ಒಂದು ಕಡೆ ಅವರು ಇನ್ನೊಂದು ಕಡೆ ಇದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ.

ಈ ರಾಜ್ಯದ ಪ್ರಯಾಣಿಕರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವಾಗ ಚಾಲಕ- ನಿರ್ವಾಹಕರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿ ಉತ್ತಮವಾಗಿದ್ದರೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯ.

ಆದರೂ ಸಹ ಸಾವಿರಾರು ನೌಕರರನ್ನು ಕಿರುಕುಳಗಳ ವರ್ಗಾವಣೆಗೆ ಗುರಿಪಡಿಸಲಾಗಿದೆ. ಆದ್ದರಿಂದ ಇಂತಹ ಸೇಡಿನ ಕ್ರಮ ಹಾಗೂ ಬಲಿಪಶು ಮಾಡುವ ವರ್ಗಾವಣೆಗಳನ್ನು ರದ್ದುಮಾಡಿ ಎಲ್ಲ ಕಾರ್ಮಿಕರನ್ನು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ವಾಪಸ್‌ ತರಬೇಕೆಂದು ಸರ್ಕಾರ ಮತ್ತು ಆಡಳಿತ ವರ್ಗಗಳಿಗೆ ಕಳೆದ 5 ತಿಂಗಳಿಗಳಿಂದ ಮನವಿ ಸಲ್ಲಿಸುತ್ತ ಬರಲಾಗಿತ್ತು.

ಆಡಳಿತ ವರ್ಗಗಳು ಮೊದಲ ಸಲ ಸುಮಾರು ಕಾರ್ಮಿಕರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ವಾಪಸ್‌ ತಂದರು. ಇಂತಹ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಈಗ ಸೆ.14 ರಂದು ಆಡಳಿತ ವರ್ಗ ಆದೇಶ ಮಾಡಿ ಕೆಲವು ನೌಕರರನ್ನು ಹಿಂದೆ ಕೆಲಸ ನಿರ್ವಹಿಸುತ್ತಿದ್ದ ವಿಭಾಗಗಳಿಗೆ ಕೋರಿಕೆ ಮೇರೆಗೆ ಎಂದು ವರ್ಗಾವಣೆ ಮಾಡಿದ್ದಾರೆ‌. ಇದು ಸಹ ಅನ್ಯಾಯದ ಕ್ರಮವಾಗಿದೆ.

ಕೋರಿಕೆ ಮೇಲೆ ಎಂದು ಪರಿಗಣಿಸಿದರೆ ಕಾರ್ಮಿಕರು ಬಡ್ತಿ ಜೇಷ್ಠತೆಯನ್ನು ಕಳೆದು ಕೊಳ್ಳಬೇಕಾಗುತ್ತದೆ. ಸಾರಿಗೆ ಕಾರ್ಮಿಕರು ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರಿಗೆ ಒಂದು ವರ್ಷದ ಸೇವೆಯೂ ಸಹ ಅತೀ ಮುಖ್ಯ. ಸಾವಿರಾರು ಕಾರ್ಮಿಕರು ಹತ್ತಾರು ವರ್ಷಗಳು ಸೇವೆ ಸಲ್ಲಿಸಿದ್ದವರು ಇದ್ದಾರೆ.

ಅವರು ಇಚ್ಛೆಯಿಂದ ವರ್ಗಾವಣೆ ಪಡೆದು ಅಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿಲ್ಲ. ಇದಲ್ಲದೆ ಅವರು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ನಿಯೋಜಿಸದಂತೆ ಆದೇಶಿಸಲಾಗಿದೆ. ಒಂದು ವಿಭಾಗದಲ್ಲಿ ಡಿಪೋಗಳು ನೂರಾರು ಕಿ.ಮಿ. ದೂರದಲ್ಲಿ ಇರುತ್ತವೆ. ಆಡಳಿತ ವರ್ಗ ಪುನಃ ಕಿರುಕುಳಗಳನ್ನು ಮುಂದುವರಿಸಿದಂತೆಯೆ ಆಗುತ್ತದೆ. ಜೊತೆಗೆ ಭ್ರಷ್ಟಾಚಾರಕ್ಕೂ ಕೂಡ ಅವಕಾಶ ನೀಡಿದಂತೆ ಆಗುತ್ತದೆ. ಕಾರ್ಮಿಕ ಸ್ನೇಹಿ- ಸೌಹಾರ್ದ- ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಪೂರಕವಾಗುವುದಿಲ್ಲ.

ಆದ್ದರಿಂದ ಸಾರಿಗೆಯ 4 ನಿಗಮಗಳು ಮಷ್ಕರದ ವೇಳೆಯಲ್ಲಿ ಮಾಡಿರುವ ಕಿರುಕುಳ ಮತ್ತು ಬಲಿಪಶು ಮಾಡುವ ಉದ್ದೇಶದಿಂದ ವರ್ಗಾವಣೆ ಮಾಡಿದ್ದ ಎಲ್ಲ ಕಾರ್ಮಿಕರನ್ನು ಆಡಳಿತಾತ್ಮಕ ವರ್ಗಾವಣೆ ಎಂದು ಪರಿಗಣಿಸಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಘಟಕಗಳು/ ಸ್ಥಳಗಳಿಗೆ ನಿಯೋಜಿಸಬೇಕೆಂದು ಸಿಐಟಿಯು ಫೆಡರೇಶನ್ ಒತ್ತಾಯಿಸುತ್ತದೆ.

ಇಲ್ಲವಾದಲ್ಲಿ ಪುನಃ ಕಿರುಕುಳ ಮತ್ತು ಭ್ರಷ್ಟಾಚಾರದ ಆಡಳಿತಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಸಾರಿಗೆ ಸಚಿವರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಸೆ.14ರ ಆದೇಶವನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಹಾಗೂ ಮುಷ್ಕರದ ವೇಳೆ ಮಾಡಿದ್ದ ಎಲ್ಲ ನೌಕರರನ್ನು ಅವರು ಮುಷ್ಕರದ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಪೋಗಳಿಗೆ ನಿಯೋಜನೆ ಮಾಡಬೇಕೆಂದು ವಿನಂತಿಸಿದೆ.

ಈ ಮೂಲಕ ಸಾರಿಗೆ ನಿಗಮಗಳಲ್ಲಿ ಕಾರ್ಮಿಕ ಸ್ನೇಹಿ ಆಡಳಿತಕ್ಕೆ ಮುಂದಾಗಿ ಕೈಗಾರಿಕಾ ಶಾಂತಿ ನಿರ್ಮಿಸಬೇಕೆಂದು ಸಿಐಟಿಯು ಫೆಡರೇಶನ್ ಅಧ್ಯಕ್ಷ ಎಚ್‌.ಡಿ. ರೇವಪ್ಪ, ಉಪಾಧ್ಯಕ್ಷ ಡಾ.ಕೆ.ಪ್ರಕಾಶ್,
ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಮಂಜುನಾಥ್ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Reply

error: Content is protected !!
LATEST
ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್...