NEWSನಮ್ಮರಾಜ್ಯರಾಜಕೀಯ

ಸಾರಿಗೆ ನೌಕರರಿಗೆ ಇಲ್ಲ ಸ್ವಾತಂತ್ರ್ಯೋತ್ಸವದ ಸಂಭ್ರಮ : ಸಚಿವ ಶ್ರೀರಾಮುಲುಗೊಂದು ನೋವಿನ, ದುಃಖ ಮನಸ್ಸುಗಳ ಮನವಿ

ವಿಜಯಪಥ ಸಮಗ್ರ ಸುದ್ದಿ

2021 ಆಗಸ್ಟ್‌ 15 ರಂದು ನನ್ನ ಹೆಮ್ಮೆಯ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ 75 ರ ಸಂಭ್ರಮವನ್ನು ಆಚರಿಸುತ್ತೇವೆ. ಎಲ್ಲೆಡೆ ದೇಶಪ್ರೇಮ ದೇಶಭಕ್ತಿ ವ್ಯಕ್ತವಾಗುತ್ತದೆ. ಬ್ರಿಟಿಷರ ಕಪಿಮುಷ್ಟಿಯಿಂದ ದೌರ್ಜನ್ಯದಿಂದ ದಾಸ್ಯದಿಂದ ಮುಕ್ತಿ ದೊರಕಿದ ಅಭೂತಪೂರ್ವ ದಿನ ಇದಾಗಿದೆ.

ಆದರೆ, ಈ ಸ್ವಾತಂತ್ರ್ಯ ನಮಗೆ ನಿಜವಾಗಿಯೂ ದೊರಕಿದೆಯೆ? ಅದನ್ನು ನಾವು ಉಳಿಸಿಕೊಂಡಿದ್ದೆವೆಯೆ? ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?

ನಮ್ಮ ಕ.ರಾ.ರ.ಸಾ.ನಿಗಮದ ಕಾರ್ಮಿಕರಿಗೆ ಸ್ವಾತಂತ್ರ್ಯ ಸಿಕ್ಕೂ ಸಿಗದಂತಾಗಿದೆ. ಯಾಕೆಂದರೆ ಸಂಸ್ಥೆಯ ಕಾರ್ಮಿಕರಿಗೆ ಇನ್ನೂ ಕೆಲಸಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಅವರ ಮೇಲಿನ ದೌರ್ಜನ್ಯ ಕಿರುಕುಳ ದಬ್ಬಾಳಿಕೆಗಳಿಗೆ ನಿಯಂತ್ರಣ ಇಲ್ಲ.

ಹಗಲಿರುಳು ದುಡಿಯುವ ಜನಸೇವೆಯೇ ಜನಾರ್ದನ ಸೇವೆ ಎಂದು ಸದಾ ಮನೆ ಮಠ ಕುಟುಂಬದಿಂದ ದೂರ ಇದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಜನಸೇವೆಯಲ್ಲೇ ಜೀವನ ಸವೆಸುತ್ತಿರುವ ಇಲ್ಲಿನ ಕಾರ್ಮಿಕರಿಗೆ ದುಡಿಮೆಗೆ ತಕ್ಕ ಕೂಲಿಯೂ ಇಲ್ಲ. ಇನ್ನು ಸವಲತ್ತುಗಳು ಮರೀಚಿಕೆಯಾಗಿವೆ. ಬರುವುದು ಖಾಸಗಿಯವರಿಗಿಂತ ಅತಿ ಕಡಿಮೆ ಸಂಬಳ… ಅದು ಸಮಯಕ್ಕೆ ಸರಿಯಾಗಿ ಬರುವುದು ಅಪರೂಪವೇ ಸರಿ.

ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಜೀವನ ಸಾಗಿಸುವ ನಮ್ಮ ಗೋಳು ಕೇಳುವವರಾರು? ಇತ್ತೀಚೆಗೆ ನಮ್ಮ ಮೇಲಾಗುವ ಕಿರುಕುಳ, ವೇತನ ತಾರತಮ್ಯ ನಿವಾರಣೆ ಮಾಡುವಂತೆ ಒತ್ತಾಯಿಸಿ ಕಾನೂನಾತ್ಮಕವಾಗಿಯೇ ನ್ಯಾಯಯುತ ಬೇಡಿಕೆಗಾಗಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಪವಿತ್ರ ಸಂವಿಧಾನದ ಅಡಿಯಲ್ಲಿ ಹೋರಾಟ ಮಾಡಲಾಗಿ ನಮ್ಮ ಬೇಡಿಕೆಯ ಈಡೇರಿಕೆಯ ಬದಲಿಗೆ ಸಿಕ್ಕಿದ್ದು ಗಾಯದ ಮೇಲೆ ಬರೆ. ದೊಡ್ಡ ಹೊಡೆತ. ಎಲ್ಲಿದೆ ಸ್ವಾತಂತ್ರ್ಯ?

ನಮ್ಮ ಕಷ್ಟ ನಿವಾರಣೆ ಮಾಡುವ ರಾಜ್ಯದ ದೊರೆಗಳೇ ನಮ್ಮ ಮೇಲೆ ಗದಾಪ್ರಹಾರ ಮಾಡಿ, ಸಾವಿರಾರು ಅಮಾಯಕ ನೌಕರರ ಜೀವನವನ್ನೆ ಕತ್ತೆಲೆಗೆ ದೂಡಿದ್ದು ಸರಿನಾ? ಸರಕಾರ ಮುಷ್ಕರ ಸದೆಬಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೆ ತಡ ಅವರು ದ್ವೇಷದಿಂದ ಅಧಿಕಾರ ದುರುಪಯೋಗ ಮಾಡಿ ತಮ್ಮ ಸಂಸ್ಥೆಯ ನೌಕರರಿಗೇ ಮಾರಕರಾಗಿದ್ದು ಎಷ್ಟು ಸರಿ? ನಾವು ಕೇಳಿದ್ದು ಕಾರು ಬಂಗಲೆ ಅಲ್ಲ ಸ್ವಾಮಿ… ಬರಿ ನಮ್ಮ ದುಡಿಮೆಗೆ ತಕ್ಕ ಕೂಲಿ. ಕಿರುಕುಳ ಮುಕ್ತ ಜೀವನ ಅಷ್ಟೇ.

ಅಷ್ಟಕ್ಕೇ ಎಂತಹ ಕ್ರೂರ ಶಿಕ್ಷೆ? ಸಾವಿರಾರು ಅಮಾಯಕ ಕಾರ್ಮಿಕರಿಗೆ ವಜಾ, ವರ್ಗಾವಣೆ, ಅಮಾನತು ಶಿಕ್ಷೆ. ಇದು ಮಾನವಿಯ ಲಕ್ಷಣವೇ? ಇದನ್ನೆಲ್ಲ ಗಮನಿಸಿದರೆ ನಮಗೆ (ಸಾರಿಗೆ ನೌಕರರಿಗೆ) ಸ್ವಾತಂತ್ರ್ಯ ಸಿಕ್ಕಿದೆಯೇ? ಇದು ಪ್ರಜಾಪ್ರಭುತ್ವ ಕಗ್ಗೊಲೆ ಅಲ್ಲವೆ?

ಹಗಲಿರುಳು ದುಡಿದ ಚಾಲನಾ ಸಿಬ್ಬಂದಿ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟರು. ಆದರೆ ಅಧಿಕಾರಿಗಳಿಂದ ಅವರಿಗೆ ಕೊಟ್ಟ ಬಹುಮಾನ ಅಂದರೆ ಬರಿ ದಬ್ಬಾಳಿಕೆ, ದೌರ್ಜನ್ಯ, ಹಿಂಸೆ, ಏನ್ ಮಾಡ್ತಿರಾ? ಸಾರಿಗೆ ಸಂಸ್ಥೆ ವ್ಯವಸ್ಥೆ ಹೀಗೇ ಆಗಿದೆ!

ಬಡವನ ಕೋಪ ದವಡೆಗೆ ಮೂಲ ಎಂಬಂತೆ ನಮ್ಮ ಪಾಡು. ನಮ್ಮ ಗೋಳು ನೋವು ಕೇಳುವವರೆ ಇಲ್ಲವೇ? ಇನ್ನಾದರು ಸ್ವಾತಂತ್ರ್ಯದ ಸಂಭ್ರಮ ಸಿಗಬಹುದಾ?

ಮಾನ್ಯ ಲಕ್ಷ್ಮಣ ಸವದಿಯವರು ಬರಿ ಮಾತಲ್ಲೆ ಸಹೋದರರು ಮನೆ ಮಕ್ಕಳು ಅಂತ ಹೇಳಿ ನಮಗೆ ಮಾಡಿರುವ ಅನ್ಯಾಯವನ್ನು ಮಾನ್ಯ ನೂತನ ಸಾರಿಗೆ ಸಚಿವರಾದ ಶ್ರೀ ರಾಮುಲು ಅವರು ಸರಿಪಡಿಸಲು ಪ್ರಾರ್ಥನೆ…

l ಇಂತಿ
ನೊಂದ 1.30 ಲಕ್ಷ ಸಾರಿಗೆ ನೌಕರರು

4 Comments

  • Sariyagi duty sigthilla . Sariyagi sambala kodtlilla .. ooru bittu bere Yello duty madthidivi .. utakku hanavilla . Maneyalli hanada thondare en madbeku antha gothagthilla .. Nam kashta helkondre bageharisoru yaru illa.. 😭😭😭

  • Hwdu ಇದು ಸತ್ಯ ಮಾನ್ಯ ಶ್ರೀರಾಮುಲು ರವರು ಸಾರಿಗೆ Navkara ಸಮಸ್ಯೆ ಆಲಿಸಿ ಬಗೆಹರಿಸಲು ವಿನಂತಿ…..

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...